ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಚತುರನಾದ ನಿಮ್ಮ ತಂದೆಗಲ್ಲದೆ ಇನ್ನಾರಿಗೂ ಸಾಧ್ಯವಲ್ಲಪ್ಪ 1 ರಣಧೀರನಾದ ಭೀಮನಿಗೂ ಆದು ಕಷ್ಟ ವಾಗಿರುವುದು, ನಿನಗೇಕೆ ಇದು, ಕಂದ! ಬೇಡ !? ಎಂದು ಹೇಳಲು, ಅಭಿಮನ್ಯುವ ಕೇಳದೆ, ನನಗೆ ಅಪ್ಪಣೆಯನ್ನು ಕೊಡ ಬೇಕು, ನಾನು ಹೋಗಿ ಬರುವೆನು ' ಎಂದು ಮುಷ್ಕರ ಹಿಡಿದನು, ಆಗ ಧರರಾಯನು ಯತ್ನ ವಿಲ್ಲದೆ ಅಪ್ಪಣೆಯನ್ನು ಕೊಟ್ಟು, ಆಶೀರ್ವದಿಸಿ ಕಳ, ಹಿಸಲು, ಮಕ್ಕಳು ಚೆಂಡಾಡುವದಕ್ಕೆ ಕುಣಿಯುತ್ತಾ ಓಡುವಂತೆ ಅಭಿಮ ನ್ಯುವ, ಸಂತೋಷದಿಂದ ರಥವನ್ನು ಸಿದ್ಧ ಮಾಡೆಂದು ಹೇಳಿ, ಬಿಲ್ಲು ಬಾಣ ಗಳನ್ನು ತೆಗೆದುಕೊಂಡು ಹೊರಟನು. ಧರರಾಯನು ಅವನ ಬೆಂಗಾವ ಲಿಗೆ ಭೀಮ, ನಕುಲ, ಸಹದೇವರನ್ನು ಕಳುಹಿಸಿದನು. ಅಭಿಮನ್ಯುವು, ದ್ರೋಣಾಚಾರರು ಕಟ್ಟಿದ್ದ ಸೈನ್ಯದ ಕೋಟೆಯ ಬಳಿಗೆ ಬಂದು, ಬಾಗಿಲಲ್ಲಿ ಅದ್ಭುತಾಕಾರನಾಗಿ ನಿಂತಿದ್ದ ಸೈಂಧವನನ್ನು ಎರಡು ಬಾಣಗಳಿಂದ ಹೊಡೆದು, ಅವನು ಚೇತರಿಸುವುದರೊಳಗಾಗಿಯೇ ಒಳಕ್ಕೆ ನುಗ್ಗಿದನು, ಅಭಿಮನ್ಯುವಿನ ತರುವಾಯ ಬಂದ ಭೀಮ, ನಕುಲು ಸಹದೇವರಿಗೆ ಒಳಕ್ಕೆ ನುಗ್ಗಲು ಆಗಲಿಲ್ಲ. ಅವರು ಹೊರಗೆ ಬಡಿದಾಡುತಿ ದ್ದರು. ಬಾಲನಾದ ಅಭಿಮನ್ಯುವಾದರೆ, ಯಾರಿಗೂ ಅಂಜದೆ, ಎಲ್ಲೆಲ್ಲ ನುಗ್ಗುತ, ಒಂದೊಂದು ಬಾಣದಿಂದ ನೂರಾರು ಮಂದಿಯನ್ನು ಕೊಲ್ಲುತ, ಇದಿರಾಗಿ ಬಂದ ದ್ರೋಣಾಶ್ವತಾ ಮರನ್ನು ಧಿಕ್ಕರಿಸಲು, ಅವರು, ಮಗು ಏನು ಮಾಡಾನೆಂದು ಇರುವಲ್ಲಿ, ಸ್ವಲ್ಪ ಕಾಲದಲ್ಲಿಯೇ ಸಾವಿರಾರು ಮಂದಿ ಮಡಿದರು. ಜನರ ಕೋಟೆಯು ಸಡಿಲು ಬಂದಿತು. ಆಗ ಕರ್ಣನು ಬಂದನು, ಮಹಾ ಶೂರನಾದ ಆ ಕರ್ಣನನ್ನು ನಾಲ್ಕಾರು ಬಾಣಗಳಿ೦ದ ಹೊಡೆದು, ಅವನ ಕುದುರೆ, ರಥ, ಧ್ವಜ ಇವೆಲ್ಲವನ್ನೂ ನಾಶಮಾಡಿ ಅಟ್ಟ ದನು. ದೊಣ, ಕೃಪ, ಅಶ್ವತ್ಥಾಮ ಇವರೆಲ್ಲರನ, ಹಸುಳೆಯದ ಅಭಿ ಮನ್ನು ವಿನಸೆಟ್ಟಿಗೆ ನಿಲ್ಲಲಾರದೆ ಹೋದರು. ಅವರು ರೇಗಿ ರೇಗಿ ಮೇಲೆಬಿದ್ದ ಹಾಗೆಲ್ಲ, ಅಭಿಮನ್ಯುವ ನಗುನಗುತ ಅವರನ್ನು ಅಟ್ಟಿ, ಅವರ ರಥಗಳನ್ನು ಪ್ರಡಿಪ್ರಡಿಮಾಡಿ, ಅವರ ಕವಚಗಳನ್ನು ಕತ್ತರಿಸಿ, ಅವರ ಬಿಲ್ಲನ್ನು ಮುರಿದು, ರಣರಂಗದಿಂದ ಅವರನ್ನು ಸಾಗಿಸುತ್ತಿದ್ದನು, ಅಭಿಮನ್ಯುವಿನ ಬಾಣಗಳ ಉರಿಯು ಎಲ್ಲೆಲ್ಲೂ ಸುಡಹತ್ತಿತು. ಆನೆ ಕುದುರೆಗಳು ಆ ಬಾಧೆಯನು