೨೭. ತಡೆಯಲಾರದೆ ಓಡಲಾರಂಭಿಸಿದುವ, ಎಲ್ಲೆಲ್ಲ ಕೋಲಾಹಲ, ಜನರ ಗೋಳು, ಶೂರರ ಆಲ್ಬಟ, ಅಭಿಮನ್ಯುವಿನ ಹುಂಕಾರ ಧ್ವನಿ ಇವೇ ತುಂಬಿದ್ದು ವ. ಆಗ ದುರೊಧನನು ಕಂಗೆಟ್ಟು ದ್ರೋಣಾಚಾರರಲ್ಲಿಗೆ ಬಂದು,- ಒಂದು ಮಗುವಿಗೆ ನಾವು ಇಷ್ಟು ಹೆದರಬೇಕೆ ? : ನಾನು ಕರ್ಣನನ್ನು ಸುಡು ತಿದ್ದೆನು, ನಮ್ಮ ತಂದೆಗೋಸ್ಕರ ಬಿಟ್ಟಿರುವೆನು, ದುಶ್ಯಾ ಸವನ ತಲೆಯನ್ನು ಚಂಡಾಡುತಿದ್ದೆನು, ನಮ್ಮ ದೊಡ್ಡಪ್ಪ ಭೀಮನಿಗೋಸ್ಕರ ಅವನನ್ನು ಉಳಿ ಸಿರುವೆನು' ಎಂದು ಅಭಿಮನ್ಯು ಹೇಳಿಕೊಳ್ಳುತ್ತಾ, ಸಿಂಹದ ಮರಿಯಂತೆ ಮೆರೆಯುತ್ತಿರುವನಲ್ಲ! ಏನು ಗತಿ ? ಪದಾತಿಗಳು ಓಡುವ ಯೋಜನೆಯನ್ನು ಮಾಡುತ್ತಿರುವರಲ್ಲ ! ಮುಂದೇನುಮಾಡುವುದು ?- ಎನ್ನಲು ಆಗ ದೋಣರು ಆಯಾ ? ಅಭಿಮನ್ಯುವಿನ ಕೈಯಲ್ಲಿ ಆ ಬಿಲ್ಲು ಇರುವವರೆಗೂ ಅವನನ್ನು ಸೋಲಿಸಲು ನಮ್ಮಲ್ಲಿ ಯಾರಿಂದಲೂ ಸಾಧ್ಯವಲ್ಲ- ಎಂದರು. ಆಗ ಅವರ ಬ್ಲೊಬ್ಬನು, - ನೀವು ಅಭಿಮನ್ಯುವಿಗೆ ಇದಿರಾಗಿ ಯುದ್ಧ ಮಾಡಿರಿ, ನಾನು ಮೆಲ್ಲನೆ ಹಿಂದಿನಿಂದ ಅವನ ಬಿಲ್ಲನ್ನು ಕತ್ತರಿಸುವೆನು ಎಂದನು. ಆ ಹೇಡಿಯ ಸಲಹೆಗೆ ಆ ಮಹಾಶೂರರೆಲ್ಲರೂ ಒಪ್ಪಿದರು, ಅದೇ ಮೇರೆ ಮತ್ತೆ ಹೊಸ ರಥಗಳನ್ನೇರಿ, ಹೊಸ ಕವಚಗಳನ್ನು ತೊಟ್ಟು ಹೊಸ ಬಾಣಗಳನ್ನು ಹಿಡಿದು ಹೊಸ ಶೂರರಂತೆ ಎಲ್ಲರೂ ಒಟ್ಟಾಗಿ ಬಂದು ಒಂದೇ ಸಮನಾಗಿ ಬೆಳಗ್ಗಿನಿಂ ದಲ , ಅಸಹ ಯನಾಗಿ ಯುದ್ಧ ಮಾಡುತ್ತಿರುವ ಆ ಮಗುವಿನ ಮೇಲೆ ಬಿದ್ದರು, ಅಭಿಮನ್ಯುವ ಸ್ವಲ್ಪವೂ ಹಿಂದೆಗೆಯದೆ, ಬಾಣದ ಮಳೆಯನ್ನೇ ಅವರಮೇಲೆ ಕರೆದು, ಮತ್ತೆ ಬಾಣವನ್ನು ಹೂಡುತ್ತಿದ್ದನು. ಆಗ ಹಿಂದು ಗಡೆಯಿಂದ ಬಂದು ಶೂರನೋಬನು ಬಲಿನ ಹುರಿಯನು ಕತ್ತರಿಸಿದನು ಅಭಿಮನ್ಯುವು ಹಿಂದಿರುಗಿ ನೋಡಿ, ಆ8 ! ಎಂತಹ ಶೂರ ” ಎಂದು ಬಿಲ್ಲನ್ನು ಬಿಸಾಟು, ಕತ್ತಿಯನ್ನು ಹಿರಿದು, ಶತ್ರುಗಳ ಮೇಲೆ ಬಿದ್ದನು. ಆಗ ಶತ್ರು ಗಳು ಹೊಡೆಯುತ್ತಿದ್ದ ಬಾಣಗಳನ್ನೆಲ್ಲಾ ಅಭಿಮನ್ಯು ಕತ್ತಿಯನ್ನು ತಿರುಗಿಸಿ ತಪ್ಪಿಸುತ್ತಿರಲು, ಒಂದು ಬಾಣವ ಬಂದು ಕೈಯನ್ನು ಕತ್ತರಿಸಿತು. ಆಗ ರಥದ ಚಕ್ರವನ್ನು ಒದೆದು ತೆಗೆದು, ಮೊಂಡುಕೈಯಿಂದಲೆ ತಿರುಗಿಸಿ ತಿರುಗಿಸಿ ಅಪ್ಪಳಿಸುತ್ತಿರಲು, ಇನ್ನೊಂದು ಕೈಯನ್ನೂ ಕತ್ತರಿಸಿದರು. ಅಪ್ಪಾದರ ೧
ಪುಟ:ಕಥಾವಳಿ.djvu/೪೨
ಗೋಚರ