ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಕೊಂಡು, ಹೊರಿಸಿಕೊಂಡು, ಹೊರಕ್ಕೆ ಬಂದು ದೆಹಲಿಯಿಂದ ತಪ್ಪಿಸಿ ಕೊಂಡು, ಸನ್ಯಾಸಿಯಹಾಗೂ ವರ್ತಕನಹಾಗೂ ತೀರ ಯಾತ್ರೆಗೆ ಬಂದವ ನಹಾಗೂ ವೇಷವನ್ನು ಹಾಕಿಕೊಂಡು ಬಹು ಕಷ್ಟ ಪಟ್ಟು ಕೊನೆಗೆ ತನ್ನ ದೇಶವನ್ನು ಸೇರಿ, ಅಲ್ಲಿ ಮಹಾರಾಜನೆಂಬ ಬಿರುದನ್ನು ಪಡೆದು, ತನ್ನ ತೂಕ ಭಂಗಾರವನ್ನು ಬ್ರಾಹ್ಮಣರಿಗೆ ದಾನವಾಡಿ, ಮಹಾರಾಷ್ಟ್ರ ರಾಜ್ಯ ವನ್ನು ಕಟ್ಟಿದನು. ಈ ಶೂರನು ತನ್ನ ಐವತ್ತೆರಡನೆಯ ವಯಸ್ಸಿನಲ್ಲಿ ದೈವಾಧೀನವಾದನು. ೨೧, ರಾಗಿ ರಾಮಾಯಣ, ಅಮರಾವತಿ ಎಂಬುದೊಂದು ಪಟ್ಟಣ. ಆ ಪಟ್ಟಣದಲ್ಲಿ ಅಮರಶೇ ಖರರಾಯನೆಂಬ ಒಬ್ಬ ದೊರೆ ಆ ದೊರೆಗೆ ಪ್ರಜೆಗಳೆಲ್ಲರೂ ತಾವು ಬೆಳೆದ ಧಾನ್ಯಗಳನ್ನೆ ಕಸ್ಸ ವಾಗಿ ಕೊಡುತ್ತಿದ್ದರು. ಆದುದರಿಂದ ಆ ದೊರೆಗೆ ಸೇರಿದ ದೊಡ್ಡ ಅರಮನೆಯಲ್ಲಿ ಎಲ್ಲೆಲ್ಲಿ ನೋಡಿದರೂ ರಾಗಿ, ಗೋಧಿ, ಜೋಳ ಭತ್ತ ಇವುಗಳ ರಾಸಿಗಳೇ ಕಾಣಬರುತ್ತಿದ್ದು , ಹೀಗಿರುವಾಗ ಒಂದು ದಿನ ರಾತ್ರಿ, ಕಾವಲುಗಾರರು ಬಾಗಿಲುಗಳನ್ನು ಹಾಕಿಕೊಂಡು ಹೊರಗೆ ತೂಕಡಿಸುತ ಕುಳಿತಿದ್ದಾಗ, ಧಾನ್ಯವಿಲಾಸದಲ್ಲಿ ಏನೋ ಗದ್ದಲವಾ ದಂತೆ ಕೇಳಬಂದಿತು. ಬಾಗಿಲಲ್ಲಿ ಅರ್ಧನಿದ್ರೆಯಲ್ಲಿದ್ದ ಕಾವಲುಗಾರನೆ ಬ್ಲ್ಯನದ್ದು-ಇದೇನು ಗದ್ದಲವಿರಬಹುದು ? ಎಂದು ಬಾಗಿಲಿಗೆ ಕಿವಿಗೊಟ್ಟು ಕೇಳಿದನು ? ಆಗ ಧಾನ್ಯಗಳ ಲ್ಲೊಂದೊಂದೂ ತಮ್ಮ ತಮ್ಮ ಯೋಗ್ಯತೆಗ ಇನ್ನು ಹೇಳಿ ಕೊಂಡು, ನಾನು ದೊಡ್ಡದು, ತಾನು ದೊಡ್ಡದು, ಎಂದು ಕೂಗಾಡುತ ಇದ್ದು, ಅವುಗಳಲ್ಲೆಲ್ಲಾ ಗೋಧಿಯ ಡಂಭವಾದಮಾತು ಗಟ್ಟಿಯಾಗಿ ಕೇಳಿಬರುತ್ತಿದ್ದಿತು. ಗೋಧಿಯು, ಎಲೈ ಧಾನ್ಯರಾಜಗಳಿರಾ ! ನನ್ನ ಯೋಗ್ಯತೆಯನ್ನು ಕುರಿತು ಹೇಳುತ್ತೇನೆ, ಸ್ವಲ್ಪ ಕೇಳಿ, ಸುಮ್ಮನೆ ಎಲ್ಲರೂ ಕೂಗಿಕೊಂಡು ಉಪಯೋಗವೇನು ಎಂದು ಗರ್ಜಿಸಲು, ಎಲ್ಲವೂ ಸುಮ್ಮನಾದುವು. ಆಗ, ಗೋಧಿಯು, ತನ್ನ ಮಹಾತ್ಮವನ್ನು ಹೇಳ ತೊಡಗಿತು. “ ನನ್ನನ್ನು ಸಾಮಾನ್ಯನೆಂದು ಭಾವಿಸಬೇಡಿ, ಪ್ರಪಂಚದ ಅನೇಕ