೩೧ ಭಾಗಗಳಲ್ಲಿ ನನ್ನನ್ನು ಬೆಳೆಯುವರು, ಲಕ್ಷಾಂತರ ಜನರು ನನ್ನ ನ್ನು ತಿಂದು ಜೀವಿಸುವರು, ನನ್ನಿಂದ ಮಾಡತಕ್ಕ ಪದಾರ್ಥಗಳು ಒಂದಕ್ಕಿಂತಲೂ ಒಂದು ಸವಿಯಾಗಿರುವವ, ರಾಜಾಧಿರಾಜರಿಗೆಲ್ಲ ನಾನೇ ಸೃಷ್ಟಿ ಕೊಡತಕ್ಕ ವನು. ಶುಭಾಶುಭಗಳಲ್ಲಿ ನನ್ನ ನ್ನು ಉಪಯೋಗಿಸುವರು, ನವಗ್ರಹಗಳಲ್ಲಿ ಶ್ರೇಷ್ಠ ನಾದ ಸರ ಅಭಿಮಾನಕ್ಕೆ ಪಾತ್ರನು, ನನ್ನಿ ೦ದಲ್ಲವೆ ಒಬ್ಬಟ್ಟು, ಚಿರೋಟಿ, ಭೇಣಿ, ಮಂಡಿಗೆ, ಗುಳೋರಿಗೆ, ಸೇವಿಗೆ, ಪೂರಿ, ರೊಟ್ಟಿ, ಬಿಸ ಕತ್ತು ಮುಂತಾದ ಶ್ಲಾ ಘವಾದ ಪದಾರ್ಥಗಳು ಆಗು ವವ್ರ, ನನ್ನ ಹೆ ಛಪೇ ಸಾಕು, ನನ್ನ ರೂ ಸೇ ಸಾಕು. ನನ್ನ ನಾಟಿಗೆ ನಿಲ್ಲತಕ್ಕ ಧಾನ್ಯವ ಮತ್ತಾವದುಂಟು. ಎಂದು ಹೇಳುತ್ತಿರುವಷ್ಟರಲ್ಲಿಯೇ, ಅಕ್ಕಿಯು ಎದು 'ಸಾಕು ! ಸಾಕು ! ನಾನು ಕೇಳಲಾರೆ ! ನಿನ್ನ ಚಿರೋಟಿ, ನೇಣಿ, ಗುಳೋ ರಿಗೆ ಇವನ್ನೇ ತಿಂದು ಯಾರು ತಾನೇ ಬದುಕಾರು ? ಹಸಿವನ್ನು ಅಡಗಿಸಲು ನಿನ್ನಿಂದ ಏನು ಸಾಧ್ಯ ! ಲೋಕ ಪ್ರಸಿದ್ಧವಾದ ಕಾವೇರೀ ತೀರ, ಗಂಗಾ ತೀರ, ಇವುಗಳಲ್ಲಿ ನೋಡಿ, ಎಷ್ಟೆಷ್ಟು ದೂರ ನೋಡಿದರೂ ನನ್ನ ಆಳುವಿಕೆ ಯಲ್ಲಿರುವ ಭೂಮಿಯೇ ಗೋಚರವಾಗುವದು, ನನ್ನನ್ನು ಶಾಲವ್ಯ ಮಾಡಿ ದೇವರಿಗೆ ಅಭಿಷೇಕ ಮಾಡುವರು, ನನ್ನಿಂದ ಕೇಸರಿ ಭಾತ್, ವಾಂಗೀಭಾತ್, ಬಕಾಳಭಾತ್, ಕಿ೦ಚಾ ಬಾತ್ ಇವೇ ಮುಂತಾದ ನಾನಾ ತೆರನಾದ ಅನ್ನ ಗ ಳನ್ನು ಮಾಡುವರು, ದಾನದಲ್ಲೆಲ್ಲಾ ಅನ್ನದಾನವೇ ಶ್ರೇಷ್ಠ ವೆನ್ನು ವರು. ನನ್ನ ವಿನಾ ಯಾವ ಶುಭಕಾರವೂ ನಡೆಯದು. ನೀವೇ ಯೋಚಿಸಿ, ನಾನು ದೊಡ್ಡವನೇ, ಗೋಧಿರಾಯ ದೊಡ್ಡವನೇ? ಗೋಧಿ, ರಾಗಿ, ಜೋಳ ಇವರು ಬೆಳೆ ವದಕ್ಕೆ ಮಳೆ ಬೀಳ ಬೇಕು. ಇವರು ಹೊರ ಹೊರಡಬೇಕು. ನನಗೆ ಹೊತ್ತಿಗೆ ಇಷ್ಟು ನದೀನೀರು ಬಂದರೆ ಸಾಕು, ಬೇಕಾದ ಹಾಗೆ ಬೆಳೆವೆನುಎಂದು ವಾದಿಸಿತು, ಇದನ್ನು ಕೇಳಿ ಒಂದು ಮೂಲೆಯಲ್ಲಿದ್ದ ಜೋಳವು ಎದ್ದು ಬಂದು-ನನ್ನನ್ನು ತಿಂದು ಜನರು ಎಷ್ಟು ಗಟ್ಟಿ ಮುಟ್ಟಾಗಿರುವರು. ನನ್ನ ಕಡ್ಡಿ ಯು ಆ ಕಾಮಧೇನುವಿಗೆ ಕೂಡ ಆಹಾರವಾಗಿರುವುದು, ನನ್ನ ಅರಳು, ನನ್ನ ರೋಟ , ನನ್ನ ಕಡ್ಡಿ, ಇವೇ ಸಾಕು, ನನ್ನ ಗುಣವನ್ನು ಕೊಂಡಾಡುವವ, ಹೆಚ್ಚು ಮಾತೇಕೆ ? ಎಂದಿತು. ಆಗ ರಾಸಿರಾಸಿಯಾಗಿ ಬಿದ್ದಿದ್ದ ರಾಗಿ ಯ, ಮೆಲ್ಲಮೆಲ್ಲನೆ ನುಣುಚಿ ಕೊಂಡು ಮುಂದೆ ಬಂದು, ಆಕಾರದಲ್ಲಿ ಸಣ್ಣ ದಾಗಿಯ ಬಣ್ಣದಲ್ಲಿ ಆಸ್ಟಾಗಿಯೂ ಇದ್ದುದರಿಂದ ಗಟ,
ಪುಟ:ಕಥಾವಳಿ.djvu/೪೬
ಗೋಚರ