ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ನೆಯೇ ಉತ್ತರನಿಗೆ ದಿಕ್ಕು ತೋರದಂತೆ ಆಯಿತು. ಆ ಶತ್ರುಸೇನೆಯ ಆನೆಗಳ ಕೂಗು, ಕುದುರೆಗಳ ಧ್ವನಿ, ಜನಗಳ ಆಲ್ಬಟ, ಶೂರರ ಸಿಂಹನಾದ ಬಾಣಗಳ ಬಿರುಸು ಇವೆಲ್ಲವನ್ನೂ ನೋಡಿ, ಗಡಗಡನೆ ನಡುಗುತ್ತಾ 'ಆಯ್ತಾ ಬೃಹನ್ನಳೆ! ನಿನ್ನ ದಮ್ಮಯ್ಯ! ನನ್ನನ್ನು ಹಿಂದಕ್ಕೆ ಕರೆದುಕೊಂಡುಹೋಗು. ನನ್ನನ್ನು ಕೊಲ್ಲಿಸಬೇಡ, ಈ ಭಯಂಕರವಾದ ಸೇನೆಯನ್ನು ನಾನು ಕಣ್ಣೆತ್ತಿ ನೋಡಲಾರೆ, ನಾನು ಕೌರವಸೇನೆ ಯನ್ನು ಚಿತ್ರದಲ್ಲಿ ನೋಡಿದುದೇ ಹೊರತ ಯುದ್ಧರಂಗದಲ್ಲಿ ನೋಡಿದುದೇ ಇಲ್ಲ, ನನ್ನ ಉಪ್ಪತಿಂದು ನನಗೆ ಎರ ಡನ್ನು ನೀನು ಬಯಸಬಾರದು, ಹೇಗಾದರೂ ನನ್ನ ತಾಯಿ ತಂದೆಗಳ ಮುಖವನ್ನು ನನಗೆ ತೋರಿಸು ' ಎಂದು ಕೂಗಿಕೊಳ್ಳುತಿರಲು-ಬೃಹನ ಳೆಯು ರಥವನ್ನು ಮುಂದೆಮುಂದೆ ತೆಗೆದುಕೊಂಡು ಹೋಗುತ್ತಿದ್ದನು. ಆಗ ಉತ್ತರನು ಹೇಗೌದರೂ ತಪ್ಪಿಸಿಕೊಂಡು ಓಡಿಹೋಗೋಣವೆಂದು ರಥದಿಂದ ಧುಮುಕಲು, ಬೃಹನ್ನಳೆಯು ಅವನನ್ನು ಹಿಡಿದು ರಥದಲ್ಲಿ ಕುಕ್ಕಿ ರಿಸಿ, ತಾನೇ ಯುದ್ಧ ಮಾಡಿ ಶತ್ರುಗಳ ನ್ನು ಜಯಿಸಿ, ಶತ್ರುಗಳ ವಸ್ತ್ರಾಭರ ಣಗಳನ್ನು ತೆಗೆದುಕೊಂಡು, ಉತ್ತರನೊಡನೆ ಹಿಂದಿರುಗಿದನು. ಈ ಬೃಹ ನೃಳೆಯೇ ಪಂಚಪಾಂಡವರಲ್ಲಿ ಒಬ್ಬನಾದ ಅರ್ಜುನನು, ಅಂತಃ ಪ್ರರದಲ್ಲಿ ಹೆಂಗಸರೊಂದಿಗೆ ಡಂಭವನ್ನು ಮಾಡಿ, ಯುದ್ಧರಂಗದಲ್ಲಿ ಹೆದರಿ, ಹೇಡಿಯಾ ಗಿದ್ದ ಉತ್ತರವನ್ನು ಈಗಲೂ ಜನರು * ಉತ್ತರನ ಪೌರುಷ ಒಲೆಯಮು೦ದೆ' ಎಂದು ಎತ್ತಿ ಆಡುವರು. ೨೩, ವಿಜಯನಗರ, ತುಂಗಭದ್ರಾ ತೀರದಲ್ಲಿ ಒಂದಾನೊಂದು ಪಟ್ಟಣವಿದ್ದಿತು, ಆ ಪಟ್ಟ ಣಕ್ಕೆ ವಿಜಯನಗರವೆಂದು ಹೆಸರು. ಆ ಪಟ್ಟಣವನ್ನು ಹುಕ್ಕ ಬುಕ್ಕರಂ ಬುವರು ಕಟ್ಟಿದರು. ಇವರು ಇನ್ನೊಂದು ದೇಶದ ದೊರೆಯ ಹತ್ತಿರಿದ್ದ ವರು. ಆ ದೇಶಕ್ಕೆ ತುರುಕರು ನುಗ್ಗಲು ದೊರೆಯು ಸೋತುಹೋದನು. ದೇಶವ ತುರುಕರ ವಶವಾಯಿತು. ಹುಕ್ಕಬುಕ್ಕರು ತುರುಕರ ಕೈಗೆ ಸಿಕ್ಕ ಬಾರದೆಂದು ತುಂಗಭದ್ರಾ ತೀರಕ್ಕೆ ಬರುತ್ತ ಒಬ್ಬ ಸನ್ಯಾಸಿಯನ್ನು ಕಂಡು