೩೫ ನಮಸ್ಕರಿಸಿದರು. ಆ ಸನ್ಯಾಸಿಯು ಹುಕ್ಕಬುಕ್ಕರನ್ನು ನೋಡಿ, ಇವರು ರಾಜ್ಯವನ್ನು ಕಟ್ಟುವುದಕ್ಕೂ, ಆಳುವುದಕ್ಕೂ ಸಮರ್ಥರಾಗಿದ್ದಾರೆ. ಇವ ರಿಂದ ಇಲ್ಲಿ ಒಂದು ಹಿಂದೂ ರಾಜ್ಯವನ್ನು ಕಟ್ಟಿಸಿ ದೇಶಗಳನ್ನೆಲ್ಲಾ ಆಕ್ರಮಿಸುತ್ತಿರುವ ತುರುಕರನ್ನು ತಡೆದು, ಹಿಂದಕ್ಕೆ ಅಟ್ಟಿ ಸಬೇಕು, ಎಂ ದುಯೋಚಿಸಿ, 'ಎಲೈ ಸಹೋದರಿರಾ ! ನೀವ ತುಂಗಭದ್ರಾತೀರದಲ್ಲಿ ಒಂದು ರಾಜ್ಯವನ್ನು ಕಟ್ಟಬೇಕು. ಸ್ಥಳವನ್ನು ನೋಡಿಕೊಂಡು ಬನ್ನಿ' ಎಂದನು. ಅವರು ಸ್ಥಳವನ್ನು ಹುಡುಕಿಕೊಂಡು ನದೀತೀರದಲ್ಲಿ ಹೋಗು ತಿರುವಾಗ್ಯ ಒಂದು ಕಾಡು ಸಿಕ್ಕಿತು, ಅಲ್ಲಿ ಒಂದು ಹುತ್ತವನ್ನು ಕಂಡರು. ಆ ಕಾಲದಲ್ಲಿ ಆ ಹುತ್ತದ ಸವಿಾಪಕ್ಕೆ ಒಂದು ಹಸು ಬಂದು ತಾನಾಗಿ ಹಾ ಲನ್ನು ಕರೆಯುತ್ತಿದ್ದಿತು, ಅದನ್ನು ಕಂಡು, ಹಿಂದಿರುಗಿ ಹೋಗಿ, ಈ ವಿಶೇಷವನ್ನು, ಆ ತಪಸ್ವಿಗೆ ತಿಳಿಸಿದರು. ಆಗ ಆ ತಪಸ್ವಿಯು ಅಲ್ಲಿಯೇ ನೀವು ಪಟ್ಟಣವನ್ನು ಕಟ್ಟಿರಿ; ಅದು ಬಹು ಪ್ರಸಿದ್ಧಿಗೆ ಬರುವ ದು~ ಎಂದನು ಅವರು ಪಟ್ಟಣವನ್ನು ಕಟ್ಟಿದರು, ಹುಕ್ಕರಾಯನು ಮೊದ ಲು ದೊರೆಯಾದನು, ಸನ್ಯಾಸಿಯಾದವಿದ್ಯಾರಣ್ಯನೇ ಮಂತ್ರಿಯಾದನು. ಹಿಂದೂ ಜನರಿಗೆಲ್ಲಾ ಆ ಪಟ್ಟಣ ವ್ರ ಆಶ್ರಯವಾಗಿತ್ತು. ದಿನೇದಿನೇ ಪಟ್ಟ ಣವೂ, ರಾಜ್ಯವೂ ಬಹಳ ಅಭಿವೃದ್ದಿಗೆ ಬಂದು ವ, ತುರುಕರು ಈ ರಾಜ ರನ್ನು ಕಂಡು ನಡುಗುತ್ತಿದ್ದರು. ಇವರಿಗೂ ಅವರಿಗೂ ಕದನವಿದ್ದೇ ಇರು ತಿತ್ತು. ಒಹುಕಾಲದ ಮೇಲೆ ಒಂದು ದೊಡ್ಡ ಯುದ್ಭವ ನಗೆ ದು ಅಲ್ಲಿ ನಿಜ ಯನಗರದ ದೊರೆಯಾದ ರಾಮರಾಜನು ಸೋತನು. ಪಟ್ಟಣನ್ನ ಶತ್ರುಗಳ ಪಾಲಾಗಿ ಹಾಳಾಯಿತು ಈಗಲೂ ಹಂಪೆಯಹತ್ತಿರ ವಿಜಯನಗರದ ದೊಡ್ಡ ದೊಡ್ಡ ದೇವಸ್ಥಾನಗಳೂ, ಪಾಳುಗೋಡೆಗಳೂ ಇವೆ. ೨೪, ನಾಗಲೋಕ (೧ ನೆಯ ಭಾಗ) ಸಮುದ್ರತೀರ, ಅಲ್ಲಿ ಒಂದು ದೊಡ್ಡ ಪಟ್ಟಣ, ಆ ಪಟ್ಟಣವನು ಒಬ್ಬ ದೊರೆಯು ಆಳುತ್ತಿದ್ದನು. ಆ ದೊರೆಗೆ ಇನ್ನೂ ಇಪ್ಪತ್ತು ವರ್ಷ ವಯಸ್ಸು, ಅವನು ರೂಮಿನಲ್ಲಿ ಕೆಲುವನು, ಜನರಲ್ಲಿ ದಯಾಳು, ಯುದ್ಧ
ಪುಟ:ಕಥಾವಳಿ.djvu/೫೦
ಗೋಚರ