೩೬ ದಲ್ಲಿ ಚತುರನು. ಆದುದರಿಂದ ಪ್ರಜೆಗಳಿಗೆ ಅವನಲ್ಲಿ ಬಹಳ ಪ್ರೀತಿಯಿದ್ದಿತು. ಹೀಗಿರುವಾಗ ಒಂದಾನೊಂದುದಿನ, ಹಠಾತ್ತಾಗಿ ನೆರೆರಾಜ್ಯದವರು ಇವನ ಮೇಲೆ ದಂಡೆತ್ತಿ ಬಂದರು, ದೊಡ್ಡ ಯುದ್ದವೂ ನಡೆಯಿತು. ಆ ಯುದ್ಧ ದಲ್ಲಿ ಈ ದೊರೆಯ ಕಡೆಯವರೆಲ್ಲರೂ ಸೋತುಹೋದರು. ಅನೇಕರು ಸತ್ತು ಹೋದರು. ಉಳಿದವರು ಓಡಿದರು. ಆಗ ದೊರೆಯ ಓಡಿಹೋ। ಗಬೇಕಾಯಿತು. ದೊರೆಗೆ ಬಹು ಕಷ್ಟಬಂತು, ತನ್ನ ರಾಜ್ಯವನ್ನು ಬಿಟ್ಟು, ಮು ಖಕ್ಕೆ ಮುಸುಕನ್ನು ಹಾಕಿಕೊಂಡು ಯಾರೂ ಕಾಣದಂತೆ ಕಾಡುಬಿದ್ರು ಹೊರಟನು, ಕಾಡಿನಲ್ಲಿ ಗೆಡ್ಡೆಗೆಣಸುಗಳನ್ನು ತಿಂದುಕೊಂಡು ಸ್ವಲ್ಪ ಕಾ ಲವಿದ್ದು, ಕೊನೆಗೆ ಒಂದು ದಿನ ಸಾಯಂಕಾಲ ಸಮುದ್ರದ ಕರೆಗೆ ಬಂದನು ಆಗ ಇವನಿದ್ದ ಸ್ಥಿತಿಯಲ್ಲಿ ಇವನೇ ದೊರೆಯೆಂದು ಇವನನು, ಹಿಂದೆ ನೋ ಡಿದ್ದವರೂ ಹೇಳುವುದಕ್ಕೆ ಆಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ದೊರೆಯು ಕಂಗೆಟ್ಟು ಹೋಗಿದ್ದನು, ಆದಿನ ದೊರೆಯು ಬಹಳ ಹಸಿದಿದ್ದನು. ಅವನಿಗೆ ತಡೆಯಲಾರದಷ್ಟು ಬಾಯಾರಿಕೆ, ಅಲ್ಲಿ ತಿನ್ನು ಇದಕ್ಕೆ ತಿಂಡಿ ಯಿಲ್ಲ. ಎಷ್ಟು ದೂರ ನೋಡಿದರೂ ಉಪ್ಪುನೀರು. ಆಗ ದೊರೆಯು ಏನು ಮಾಡಬೇಕು ! ಅ ಕಷ್ಟವನ್ನು ಸಹಿಸಲಾರದೆ ಸಮುದ್ರದಲ್ಲಿಯಾ ದರೂ ಬಿದ್ದು ಪ್ರಾಣವನ್ನು ಕಳೆದುಕೊಳ್ಳಬೇಕೆಂದು ನೀರಿನಲ್ಲಿಳಿದು ಮುಂದೆ ಮುಂದೆ ಹೊರಟನು. “ಪಾಪಿ ಸಮುದ್ರಕ್ಕೆ ಹೋದರೆ ಮೊಳಕಾಲಿನುದ್ದ ನೀರು” ಎಂಬಂತೆ ಅವನು ಎಷ್ಟು ದೂರ ಹೋದರೂ ಸಮುದ್ರದಲ್ಲಿ ಆಳವೇ ಇಲ್ಲದಂತೆ ಕಂಡಿತು. ಆಗ ಸಾಯ೦ಕಾಲ ಸಮಯವಾಯಿತು, ನೀರು, ಆಕಾಶ ಎಲ್ಲವೂ ಕೆಂಪಗೆ ಕಾಣಿಸುತ್ತಿದ್ದು ವ, ಮರಳಮೇಲೆ ಬಿದ್ದು ಇದ ಕಪ್ಪೆಚಿಪ್ಪಗಳೆಲ್ಲ ಥಳಥಳನೆ ಹೊಳೆಯುತ್ತಿದ್ದು ವ, ನೀರಿನಲ್ಲಿದ್ದ ಸಣ್ಣ ಸಣ್ಣ ವಿಾನುಗಳು ಪ್ರಳಪಳನೆ ನೆಗೆದಾಡುತ್ತಿದ್ದು ವ, ಆಕಾಶದಲ್ಲಿ ಪಕ್ಷಿಗಳೆಲ್ಲಾ ಬೇಗಬೇಗನೆ ಹಾರಿ ಹೋಗುತ್ತಿದ್ದು ವ, ಗಾಳಿ ಮೆಲ್ಲನೆ ಬೀಸುತ್ತಿದ್ದಿತು. ದುಃಖದಲ್ಲಿ ಮುಳುಗಿದ್ದ ಆ ದೊರೆಗೂ ಆ ಸಾಯಂಕಾಲವು ಸಂತೋಷವ ನು೦ಟುಮಾಡುತ್ತಿತ್ತು . ದೊರೆಯು ನಡುನೀರಿನಲ್ಲಿ ಒಂದು ಗಳಿಗೆ. ಹಾಗೆಯೇ ಸುಮ್ಮನೆ ನಿಂತನು.
ಪುಟ:ಕಥಾವಳಿ.djvu/೫೧
ಗೋಚರ