ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ಸ್ವಲ್ಪ ದೂರದಲ್ಲಿ ಬೆಳಕು ಕಾಣಿಸಿತು. ಆ ಬೆಳಕನ್ನೆ ಗುರುತಾಗಿಟ್ಟು ಕೊಂಡು ಹೊರಟನು. ಹೋಗುಹೋಗುತ ಬೆಳಕು ದೊಡ್ಡದಾಗುತ್ತ ಬಂದಿತು, ಅಲ್ಲಿ ಒಂದು ಸಣ್ಣ ಕಾಲುದಾರಿ ಕಾಣಿಸಿತು. ಆ ದಾರಿಯನ್ನೇ ಹಿಡಿದು ಹೋಗಲು, ಒಂದು ದೊಡ್ಡ ಮೈದಾ ನವೂ ಸಿಕ್ಕಿತು. ಆ ಮೈದಾನದಲ್ಲಿ ಸರೋದಯವಾಗಿರುವಂತೆ ಬೆಳಕು ತುಂಬಿದ್ದಿತು. ಇದೇನು ಆಶ್ಚರ್ಯ ! ಮಧ್ಯರಾತ್ರಿ, ಇಲ್ಲಿ ಈಗ ಸೂರ ನು ಪ್ರಕಾಶಿಸುವಂತಿದೆ. ನೋಡೋಣ ಎಂದು ಇನ್ನೂ ಮುಂದೆ ಹೋ ದನು. ಮುಂದೆ ಹೋಗು ಹೋಗುತ್ತ ಸುವಾಸನೆಯಾಗಿ ತಂಗಾಳಿ ಬೀಸು ತಿದ್ದಿತು. ಹಗಲಿನಲ್ಲಿ ಹೇಗೋಹಾಗೆ ಪಕ್ಷಿಗಳು ಸುಖವಾಗಿ ಧ್ವನಿ ಮಾ ಡುತ್ತ ಎಲ್ಲೆಲ್ಲೂ ಹಾರಾಡುತ್ತಿದ್ದು ವ, ಇವನ ಆಯಾಸವೆಲ್ಲಾ ಮರೆತು ಹೋಯಿತು, ಹಸಿವು ಬಾಯಾರಿಕೆಗಳೂ ನಿಂತು ಹೋದುವ, ಮನಸ್ಸಿ ನಲ್ಲಿ ಉಲ್ಲಾಸವುಂಟಾಯಿತು. ಇವನು ಹಾಗೆ ಬೆರಗಾಗಿ ನಿಂತಿದ್ದಾಗ ಮಹಾರಾಜನ ! ದಯೆ ಮಾಡು. ನೀನು ಬಹಳ ದೂರದಿಂದ ಆಯಾಸಪಟ್ಟು ಬಂದಿರುವಂತಿದೆ ಎಂಬ ಧ್ವನಿಯು ಕೇಳಬಂತು. ಆ ಧ್ವನಿ ಬಂದ ದಾರಿಯಲ್ಲಿ ಸ್ವಲ್ಪ ಮುಂದೆ ಹೋಗುತ ಒಬ, ನಾಗಕನೆಯು ಒಂದು ನವಿಲಿನ ಮೇಲೆ ಕುಳಿ ತಿದ್ದುದನ್ನು ನೋಡಿ ಅಲ್ಲಿಯೇ ನಿಂತನು. ಆ ನಾಗಕನೈಯೊಡನೆ ಇದ್ದ ಸಖೀ ಜನರು 'ದಯಮಾಡಿ, ಮೃದುವಾಗಿರುವ ಈ ಹೂವಿನ ಹಾಸಿಗೆಯ ಮೇಲೆ ವಿಶ್ರಮಿಸಿಕೊಳ್ಳಿ, ನಿಮಗೆ ಬೇಕಾದುದನ್ನು ತಂದು ಕೊಡುವವ, ಸ್ವೀಕರಿಸಿ' ಎಂದು ಉಪಚರಿಸಿದರು. ರಾಜನು “ನನ್ನ ಕೋರಿಕೆಯೊಂ ದನ್ನು ನಿಮ್ಮ ರಾಣಿಯು ನೆರವೇರಿಸುವುದಾದರೆ, ನಿಮ್ಮ ಆದರವು ನನಗೆ ಹಿತವನ್ನುಂಟುಮಾಡುವದು ' ಎಂದನು. ಇವನ ಧೈರ್ಯಕ್ಕೆ ಮೆಚ್ಚಿ. ನಾಗಕನೈಯು 'ನಿಮ್ಮ ಕೋರಿಕೆ ಏನು ? ಎಂದಳು. ರಾಜನು 'ನಾನ ಇಲ್ಲಿಯೇ ವಾಸಮಾಡಬೇಕೆಂದು ಬಂದಿರುವೆನು. ಅದಕ್ಕೆ ನೀವು ಒಪ್ಪ ಬೇಕು ' ಎಂದನು. ಆಗ ನಾಗಕನ್ಯಯು ನೀವು ಇಲ್ಲಿ ಬಹಳ ಹೊತ್ತು ಇರಲಾಗದು.