ಪುಟ:ಕಥಾವಳಿ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ପ ಇದು ಮನುಷ್ಯ ಲೋಕವಲ್ಲ, ಮನುಷ್ಯನನ್ನು ನೋಡಿದೊಡನೆ ನಾಗಗಳು ಒಂದು ಕೊಳ್ಳುವವು. ಆದುದರಿಂದ ನಿಮಗೆ ಬೇಕಾದುದನ್ನು ತೆಗೆದು ಕೊಂಡು ಬೇಗ ಇಲ್ಲಿಂದ ಹೊರಟು ಹೋಗಿ' ಎಂದಳು. ಅದಕ್ಕೆ ರಾಜನು “ ನಾನು ಸತ್ತರೆ ಅಳುವರಿಲ್ಲ, ವ್ಯಸನವಾರಿಗೆ ? ನನಗೆ ಇಲ್ಲ, ಆದಕಾರಣ ನಾನು ಇಲ್ಲಿಯೇ ಇದ್ದು ಸಾಯುವೆನಲ್ಲದೆ ಹಿಂದಕ್ಕೆ ಹೋಗಲಾರೆನು ? ಎಂದನು. ಅದಕ್ಕೆ ನಾಗಕನೆಯು ರಾಜನನ್ನು ನೋಡಿ - ಅಯ್ಯೋ ! ದಾರಿ ತಪ್ಪಿ ರಾಜಕುಮಾರರನೇಕರು ಇಲ್ಲಿಗೆ ಬಂದಿರುವರು. ಬಂದವರೆಲ್ಲರೂ ಇಲ್ಲಿ ನಿಲ್ಲಬೇಕೆಂದು ಹು ಹಿಡಿವರು, ನಾನು ಕೇಳುವ ಎರಡು ಪ್ರಶ್ನೆಗಳಿಗೆ ಉತ್ತ ರಕೊಡಲಾರದೆ ನಾಶವಾಗಿರುವರು. ನೀವು ಹಾಗೆ ಮುಷರಮಾಡದೆ, ನಿಮಗೆ ಬೇಕಾದುದನ್ನು ತೆಗೆದುಕೊಂಡು ಹೋಗಿ ಎಂದಳು. ಅದಕ್ಕೆ ರಾಜನು ' ನಾನು ಸತ್ತರೆ ಅಳುವವರು ಇಲ್ಲ. ವ್ಯಸನವಾರಿಗೆ ? ನನಗೆ ಇಲ್ಲ. ಆದುದರಿಂದ ನಿಮ್ಮ ಪ್ರಶ್ನೆಗಳನ್ನು ಹೇಳಿ, ನನ್ನ ಅದೃಷ್ಟವನ್ನು ಬೇಗ ತಿಳಿ ವೆನು ' ಎಂದನು. ೨೬, ನಾಗಲೋಕ (೩ನೆಯ ಭಾಗ) ಆ ನಾಗಕನ್ನಿಕೆಯು ಎಷ್ಟು ವಿಧವಾಗಿ ಹೇಳಿದರೂ ರಾಜನು ಕೇಳದೆ ಇದ್ದುದರಿಂದ, ' ನಿಮ್ಮ ಅದೃಷ್ಟದಲ್ಲಿದ್ದಂತೆ ಆಗಲಿ ! ನನ್ನಿ ಮೊದಲನೆಯ ಪ್ರಶ್ನೆಗೆ ಉತ್ತರವೇನು ? ಈ ಉದ್ಯಾನವನವನ್ನೆಲ್ಲಾ ತುಂಬಿರುವುದೇನು ? ಹೇಳಿ ? ಎ೦ದಳು. ಅದಕ್ಕೆ ರಾಜನು- ಈ ಉದ್ಯಾನವನವನ್ನೆಲ್ಲಾ ತುಂಬಿ ರುವದು ನಿಮ್ಮ ಕಣ್ಣಿನ ಕಾಂತಿಯು, ಎಂದು ಹೇಳಿ, ' ಇದೇ ಕಷ್ಟವಾದ ಪ್ರಶ್ನೆಯೇ ! " ಎಂದನು. ಈ ಉತ್ತರಕ್ಕೆ ನಾಗಕನೈಯು ಸಂತೋಷಪಟ್ಟಳು. ಮಹಾರಾಜ, ನನ್ನಿ ಪ್ರಶ್ನೆಗೆ ಉತ್ತರವನ್ನು ಕೊಟ್ಟರೆ ನಿಮ್ಮ ಅಪೇಕ್ಷೆಯು ಕೈಗೂಡುವುದು, ಯಾವ ರಾಜನ ಕಿರೀಟದಲ್ಲಿಯೂ ಇಲ್ಲದ ಎಂತಹ ಭಂಗಾ ರದಲ್ಲೂ ಇಲ್ಲದ ಹೊಂಬಣ್ಯದ ಕಾಂತಿಯು ಎಲ್ಲಿರುವುದು ? : ನೀವು ಏರಿ ರುವ ನವಿಲಗರಿಯ ಕಣ್ಣಿನಲ್ಲಿರುವ ಹೊಂಬಣ್ಯದ ಕಾಂತಿಯಲ್ಲಲ್ಲದೆ ಮತ್ತೆ ಏತರಲ್ಲಿ ಅಂತಹ ಹೊಂಬಣ್ಣದ ಕಾಂತಿಯು ಇದ್ದೀತು ?” ಎಂದನು.