೪೩ ಹೋದಳು ; ಅಲ್ಲಿ ನಾಯಿಯ ಸತ್ತು ಬಿದ್ದುದನ್ನು ನೋಡಿದಳು. ನಾಯಿ ಯು ಮಗುಜೇವಿಯಾದರೂ, ಆ ಮಗುವಿನಲ್ಲಿ ಅದಕ್ಕೆ ಎಷ್ಟು ಪ್ರೀತಿ ! ಎಷ್ಟು ಸ್ನೇಹ ! ೩೦, ಧುವರಾಯನ ಕಥೆ. ಒಂದಾನೊಂದು ದೇಶದಲ್ಲಿ ಬಹು ಕಾಲದ ಹಿಂದೆ ಉತ್ತಾನಪಾದರಾ ಯನೆಂಬ ಒಬ್ಬ ರಾಜನು ಇದ್ದನು. ಅವನಿಗೆ ಸುಮತಿ, ಸುರುಚಿ ಎಂಬ ಇಬ್ಬರು ಹೆಂಡಿರಿದ್ದರು. ಸುಮತಿಗೆ ಧ್ರುವನೆಂಬ ಒಬ್ಬ ಮಗನಿದ್ದನು. ಸುರಚಿ ಗೂ ಒಬ್ಬ ಮಗನಿದ್ದನು. ರಾಜನಿಗಾದರೋ ಸುರುಚಿಯಲ್ಲಿ ಬಹಳ ಪ್ರೀತಿ, ಒಂದುದಿನ ರಾಜನು ಸುರುಚಿಯ ಮಗನನ್ನು ಎತ್ತಿ ಮುದ್ದಾ ಡುತ್ತಾ ಸಿಂಹಾಸನದ ಮೇಲೆ ಕುಳಿತಿದ್ದಾಗ ಧುವನ ತಂದೆಯ ಬಳಿಗೆ ಓಡಿಹೋಗಿ, ಸಿಂಹಾಸನವನ್ನೇರಿ ತಂದೆಯ ತೊಡೆಯ ಮೇಲೆ ಕುಳಿತು ಕೊಳ್ಳಲು ಹೋದನು. ಆಗ ಹತ್ತಿರದಲ್ಲಿಯೇ ಇದ್ದ ಸುರುಚಿಯು ಧ್ರುವ ನನ್ನು ರೆಟ್ಟಿ ಹಿಡಿದು ಎಳದು, “ ನೀನು ಏಕೆ ಇಲ್ಲಿಗೆ ಬಂದೆ ? ನಡೆ ! ನಿನ ಗೇಕೆ ಸಿಂಹಾಸನದ ಸೌಖ್ಯ ! ನಡೆನಡೆ !” ಎಂದು ಗದರಿಸಿಕೊಂಡು ಅಟ್ಟಿಬಿಟ್ಟಳು. ಮಗುವಾದ ಧ್ರುವನು ಅಳುತ್ತಾ ತನ್ನ ತಾಯಿಯಲ್ಲಿಗೆ ಬಂದು ಅಮ್ಮಾ, ನನ್ನನ್ನು ಹೀಗೆ ರೆಟ್ಟೆ ಹಿಡಿದು ಎಳೆದುಹಾಕಿಬಿಟ್ಟರು,' ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿಕೊಂಡನು. ತಾಯಿಯು ಏನು ಮಾಡಬೇಕು ? ರಾಜನಿಗೆ ಸುಮತಿಯಲ್ಲಿ ಪ್ರೀತಿಯಿರಲಿಲ್ಲ. ಸುರುಚಿಯು ಸುಮತಿಯನ್ಸ್ ಆಗಲಿ, ಧ್ರುವನನ್ನೇ ಆಗಲಿ ರಾಜನ ಹತ್ತಿರ ಸೇರಿಸಳು, ಮಗನನು ಯಾವ ವಿಧವಾಗಿಯ ಸಮಾಧಾನವಾಡಲು ತಿಳಿಯದೆ * ಅಪ್ಪ, ದೇವರು ನಿನ್ನ ಹಣೆಯಲ್ಲಿ ಆ ಸೌಖ್ಯವನ್ನು ಅನುಭವಿಸಲು ಬರೆದಂತಿಲ್ಲ, ದೇವರೇ ನಿನಗೆ ಸಿಂಹಾಸನವನ್ನು ಕೊಡಿಸಬೇಕು ನಾನೇನು ಮಾಡೇನಪ್ಪ' ಎಂದು ಕಣ್ಣೀರನ್ನು ಸುರಿಸಿದಳು. ಆಗ ಧ್ರುವನು ಅಮ್ಮಾ, ಹಾಗಾದರೆ ನಾನು ಆ ದೇವರನ್ನೇ ಕೇಳಿ ಸಿಂಹಾಸನವನ್ನು ಪಡೆಯುವೆನು ' ಎಂದು ಹೇಳಿ ಹೊರ
ಪುಟ:ಕಥಾವಳಿ.djvu/೫೮
ಗೋಚರ