ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ಳಿ ಟುಹೋದನು, ಮಗು ಸುಮ್ಮನೆ ಮಾತನಾಡುವದೆಂದು ತಿಳಿದ ತಾಯಿ ಯು, “ ಒಳ್ಳೆಯದು; ಹಾಗೆಯೇ ಮಾಡು, ಕಂದ' ಎಂದಳು. ಧ್ರುವನು ಹೊರಟೇ ಹೊರಟನು. ದೇವರನ್ನು ಇವನು ಕಾಣುವು ದೆಂದರೇನು ! ಏನು ಕಥೆ ! ಬಹು ದೂರ ಹೋದನು. ದೇವರನ್ನೂ ಕಾಣ ಲಿಲ್ಲ, ಯಾರನ್ನೂ ಕಾಣಲಿಲ್ಲ. ಅಷ್ಟು ಹೊತ್ತಿಗೆ ಕತ್ತಲಾಯಿತು, ಕಾಡು ಸಿಕ್ಕಿತು, ಗೊಂಡಾರಣ್ಯ, ಹುಲಿ, ಆನೆ, ಕರಡಿ ಇವುಗಳ ಆರ್ಭಟ. ಯಾವುದಕ್ಕೂ ಧ್ರುವನು ಹೆದರದೆ, ಹಸಿವು ಬಾಯಾರಿಕೆ ಎನ್ನದ ದೇವರ ನ್ನು ಕಾಣಬೇಕೆಂಬ ಒಂದೇ ಮನಸ್ಸಿನಿಂದ ಹೋಗುತ್ತಿದ್ದನು. ಹೀಗೆ ಹೋಗುತಿರುವಾಗ ದೇವರನ್ನು ಕಂಡ ನಾರದರು ಬಂದರು, ಅಪಾ ಮಗು ನೀನು ಯಾರಪ್ಪ ? ಈ ಗೊಂಡಾರಣ್ಯದಲ್ಲಿ ಒಬ್ಬನ ಎಲ್ಲಿ ಹೋಗು ಯ' ಎಂದು ಕೇಳಲು ಧುವನು ನಡೆದುದನ್ನೆಲ್ಲಾ ನಾರದರಿಗೆ ತಿಳಿಸಿ ದನು. ಆಗ ನಾರದರು ಧುವನ ಧೈರ್ಯಕ್ಕೆ ಮೆಚ್ಚಿ * ಅಪ್ಪ, ನೀನು ಈ ರೀತಿಯಲ್ಲಿ ದೇವರನು ಧ್ಯಾನಿಸಿದರೆ ದೇವರು ನಿನಗೆ ಪ್ರಸನ್ನನಾಗುವನು ? ಎಂದು ಹೇಳಿದರು. ಧ್ರುವನು ಅದೇರೀತಿಯಲ್ಲಿ ದೇವರಧ್ಯಾನ ಮಾಡತೊಡಗಿದನು. ಬಹು ಕಾಲ ಹಾಗೆ ದೇವರ ಧ್ಯಾನದಲ್ಲಿಯೇ ಧ್ರುವನಿರಲು ದೇವರು ಮೆಚ್ಚಿ ಬಂದು “ ಅಪ್ಪ ಮಗು ! ನಿನ್ನ ಧ್ಯಾನಕ್ಕೆ ಮೆಚ್ಚಿ ಬಂದಿರುವೆನು, ಇಗೋನೋಡು' ಎಂದು ದಿವ್ಯಸ್ವರೂಪವನ್ನು ತೋರಿ, 'ನಿನಗೆ ಏನುಬೇಕು' ಎಂದು ಕೇಳಲು, “ ನನಗೆ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಯೋಗ್ಯತೆಯನ್ನು ಕೊಡು' ಎಂದು ಬೇಡಿದನು. ದೇವರು, ' ಮಗು, ನಿನಗೆ ಶಾಶ್ವತವಾದ ಪದವಿ ಯನ್ನು ಕೊಟ್ಟಿರುವೆನು ' ಎಂದು ಹೇಳಿ ಮಾಯವಾದನು. ಇತ್ತಲಾಗಿ ತಂದೆ ತಾಯಿಗಳು ಧ್ರುವನನ್ನು ಕಾಣದೆ, ಹಂಬಲಿಸುತ್ತಾ ಧ್ರುವನು ಎಲ್ಲಿ ಹೋದನೋ ಎಂದು ಪೇಚಾಡುತ್ತಾ, ಮಗುವನ್ನು ತಳ್ಳಿ ಬಿಟ್ಟೆವೆಂದು ಕೊರಗುತ್ತಾ ಇರಲು, ನಾರದರು ಬಂದು ಧ್ರುವನ ವೃತ್ತಾರೆ ತವನ್ನೆಲ್ಲಾ ತಿಳಿಸಿದರು. ತರುವಾಯ ತಂದೆ ತಾಯಿಗಳು ಹೋಗಿ ಧ್ರುವ ನನ್ನು ಉಪಚರಿಸಿ ಕರೆತಂದು ಪಟ್ಟವನ್ನು ಕಟ್ಟಿದರು, ಬಹುಕಾಲ ರಾಜ್ಯ