೪೫ ವನ್ನಾಳಿ, ತರುವಾಯ ದೇವರು ಕೊಟ್ಟ ಶಾಶ್ವತಪದವಿಯನ್ನು ಸೇರಿ ಈ ಗಲೂ ಆಕಾಶದಲ್ಲಿ ಉತ್ತರದಿಕ್ಕಿನಲ್ಲಿ ನಿತ್ಯ ದಲ್ಲಿ ಒಂದೇ ಸ್ಥಳದಲ್ಲಿ ಪ್ರಕಾಶಿ ಸುತ್ತ ಧ್ರುವನಕ್ಷತ್ರವೆಂದು ಪ್ರಸಿದ್ಧಿಗೊಂಡಿರುವನು. ೩೧, ಕಣ್ಣೂ ತೆಂಗೂ. ಒಂದು ಕಬ್ಬಿನ ಗದ್ದೆ, ಅಲ್ಲಿ ಕಬ್ಬು ಬಹು ಚೆನ್ನಾಗಿಬೆಳೆದು ಗದ್ದೆಯ ಶುಂಬಾ ತುಂಬಿದ್ದಿತು. ಗದ್ದೆಯ ಬದುವಿನ ಮೇಲೆ ಒಂದೇ ಒಂದು ತೆಂಗಿನ ಗಿಡವು ಬೆಳೆದಿದ್ದಿತು. • ಅದರಲ್ಲಿಯೂ ಹದವಾದ ಎಳೆನೀರುಗಳು ತುಂಬಿ ದ್ದುವು. ಒಂಟಿಯಾಗಿ ನಿಂತಿದ್ದ ತೆಂಗನ್ನ ನೋಡಿ, ಗುಂಪಗುಂಪಾಗಿ ಬೆಳೆ ದಿದ್ದ ಕಬ್ಬು ಅಪಹಾಸ್ಯ ಮಾಡಲು ತೊಡಗಿತು. ' ಎಲೈ ! ತೆಂಗೇ ನೀನು ಹುಟ್ಟಿ, ಇದುವರಿಗೆ ಹತ್ತು ಹನ್ನೆರಡು ವರ್ಷಗಳಾಗಿರಬಹುದು. ನಿನ್ನಿಂದ ಏನು ಪ್ರಯೋಜನ ! ನೀನು ಬಿಟ್ಟಿರುವ ಫಲವು ಆಕಾಶದಲ್ಲಿರುವುದು. ನಿನ್ನ ಮೈಯೋ- ಶುದ್ಧ ಒರಟು; ನಿನ್ನನು ಹತ್ತಿ, ನಿನ್ನ ಫಲವನ್ನು ತೆಗೆ ದುಕೊಳ್ಳುವುದು ಎಲ್ಲರಿಗೂ ಸಾಧ್ಯವಲ್ಲ. ಹೀಗಿರುವಾಗ ನೀನು ಹೆಮ್ಮೆ ಯಿಂದ ತಲೆಯನ್ನೆತ್ತಿಕೊಂಡು- ಬಾಯಾರಿದವರೆಲ್ಲರೂ ಬಂದು ನೋಡಿ; ದ್ರಾಕ್ಷೆ ಹಣ್ಣು ಸಿಕ್ಕದೆ ನರಿ ತಲೆಯನ್ನು ಜೋಲು ಹಾಕಿಕೊಂಡು ಹೋ ದಂತೆ, ಮುಖವನ್ನು ಒಣಗಿಸಿಕೊಂಡು ಹೋಗಿರಿ~ ಎಂಬಂತೆ ನಿಂತಿರುತ್ತೀ ಯೆ ! ನನ್ನನ್ನು ನೋಡು ! ನಾನು ಹುಟ್ಟಿದ ಒಂದು ವರ್ಷ ಒಂಬತ್ತು ತಿಂಗಳಲ್ಲಿಯೇ, ಎಷ್ಟು ಉಪಯೋಗವಾಗಿರುವೆನು, ನನ್ನ ಮೈಯೆಲ್ಲಾ ಸಿಹಿ, ಬುಡ ಮೊದಲು ಕೊನೆಯವರೆಗೂ ನಾನು ಜನರಿಗೆ ಬೇಕಾಗಿರುವೆನು. ನಾನು ಆ ಮಹಾ ವಿಷ್ಣುವಿನ ಮಗನಾದ ಮನ್ಮಥನಿಗೆ ಬಿಲ್ಲಾಗಿರುವೆನು. ನನ್ನ ಗರಿಯೇ ನನ್ನನ್ನು ಕಾಪಾಡುವುದು, ನಾನು ಜನರಿಗೆ ನಾನಾ ತೆರ ದಲ್ಲಿ ಬೇಕಾಗಿರುವೆನು, ಬೇಕಾದರೆ ಜನರು ನನ್ನನ್ನು ಹಾಗೆಯೇ ಉಪ ಯೋಗಿಸಬಹುದು; ಇಲ್ಲವಾದರೆ ನನ್ನ ರಸವನ್ನು ತೆಗೆದು ಬೆಲ್ಲವನ್ನು ಮಾಡಬಹುದು, ನನ್ನ ಬೆಲ್ಲವನ್ನು ಚೆನ್ನಾಗಿ ಶೋಧಿಸಿ ದಿವ್ಯವಾದ ಸಕ್ಕರೆ ಯನ್ನು ಮಾಡಬಹುದು, ನನ್ನ ಸಿಪ್ಪೆಯನ್ನೂ ನನ್ನ ಗರಿಯನ್ನ ಒಲೆಗೆ
ಪುಟ:ಕಥಾವಳಿ.djvu/೬೦
ಗೋಚರ