ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪಯೋಗಿಸಿಕೊಳ್ಳಬಹುದು. ನನ್ನ ಚಕ್ಕೆಯಿಂದ ಬರೆವಕಾಗದವನ್ನು ಮಾಡಬಹುದು. ಭೂಮಿಯ ಮೇಲೆ ಜನ್ಮವೆತ್ತಿದರೆ ನನ್ನ ಹಾಗೆ ಜನರಿಗೆ ಉ ಪಯೋಗವಾಗಿದ್ದರೆ ಸಾರ್ಥಕ. ನಿನ ಜನ್ಮವನ್ನು ಸುಡು ' ಎಂದಿತು. ಇದುವರೆಗೂ ಸುಮ್ಮನೆ ಇದ್ದು, ಗಂಭೀರವಾಗಿ ಕೇಳುತ್ತಿದ್ದ ತೆಂಗು * ಮಿಣಕು ಹುಳಕ ನಕ್ಷತ್ರಕ್ಕೂ ಸಾಟಿಯೆ ! ನೀನು ಈ ಹೊತ್ತು ಇದ್ದು ನಾಳೆನಾಶವಾಗುವವನು, ನಾನು ನಾಲ್ಕಾರು ತಲೆ ನಿಂತು, ನನ್ನನ್ನು ನೆಟ್ಟ ವನ ಮಕ್ಕಳೂ ಮೊಮ್ಮಕ್ಕಳವರೆಗೂ, ಇವನ ಉಪಕಾರವನ್ನು ತಲೆಯ ಮೇಲೆ ಹೊತ್ತು, ಬೇಕಾದಾಗ, ಅಪೇಕ್ಷಿಸಿದವರಿಗೆ ಪ್ರತಿಯಾಗಿ ಉಪಕಾರ ವನ್ನು ಮಾಡುವೆನು, ನಿನ್ನ ನಾ ದರೆ, ರಸವನ್ನು ಹಿಂಡಿ ಒಲೆಗೆ ಎಸೆವರು. ಹುಟ್ಟಿದ ಒಂದೆರಡು ವರ್ಷದಲ್ಲಿ ನೀನು ನಿರ್ಣಾಮವಾಗುವೆ. ನಾನಾ ದರೋ ಜನರಿಗೆ ಮನೆಕಟ್ಟಿ ಕೊಳ್ಳುವುದಕ್ಕೆ ಉಪಯೋಗವಾಗಿರುವೆನು, ಅಡಿ ಗೆಗೆ ಉಪಯೋಗವಾಗಿರುವೆನು, ಬ್ರಾಹ್ಮಣರು ರಾಜನನ್ನು ನೋಡಲಿಕ್ಕೆ ಹೋದಾಗಲೂ, ಜನರು ದೇವರನ್ನು ನೋಡಲಿಕ್ಕೆ ಹೋದಾಗಲೂ ನನ್ನ ಫಲವನ್ನು ತೆಗೆದುಕೊಂಡು ಹೋಗಿ ಒಪ್ಪಿಸುವರು. ನನ್ನ ನಾರಿನಿಂದ ಹಗ್ಯವನ್ನು ಮಾಡುವರು. ನನ್ನ ಕರಟದಿಂದ ಸೌಟನ್ನು ಮಾಡುವರು. ನನ್ನ ತಾಳಿಂದ ತೊಲೆಯನ್ನು ಮಾಡುವರು ನನ್ನ ಗರಿಯಿಂದ ಮಟ್ಟಿಯನ್ನು ಮಾಡುವರು, ನನ್ನ ನಾರಿನಿಂದ ಬೆಂಕಿಯನ್ನು ಹೊತ್ತಿಸುವರು. ನಾನಿ ದ್ದಷ್ಟು ದಿನವೂ ಒಂದಲ್ಲ ಒಂದು ತೆರನಾಗಿ ಜನರಿಗೆ ಉಪಯೋಗವಾಗಿ ರುವೆನು. ಈ ಹೊತ್ತು ಹುಟ್ಟಿ, ನಾಳೆ ಬೆಳದು, ಮೈಯೆಲ್ಲಾ ಗಂಟುಗಂ ಟಾಗಿ, ಸೋಗೆ ಹರಿತವಾಗಿ, ನಾಡಿದ್ದು ಸಾಯುವ ನಿನಗೆ, ಎಷ್ಟು ಅಹಂ ಕಾರ ? ಸಾಕುಮಾಡು ' ಎಂದಿತು. ೩೨, ಮೃಗಗಳು ರಾಜನನ್ನು ಗೊತ್ತು ಮಾಡಿಕೊಂಡ ಬಗೆ. ದಂಡಕಾರಣ್ಯವೆಂಬುದು ಒಂದು ಮಹಾಟವಿ, ಆ ಅಡವಿಗೆ ದೊರೆ ಯಾದ ಮೃಗರಾಜನು ಒಂದು ದಿನ ಬೆಳಗ್ಗೆ ಸತ್ತು ಬಿದ್ದಿದ್ದನು. ಆ ಸತ್ಯ ಸಿಂಹರಾಜನ ಬಳಿಯಲ್ಲಿ ಅವನ ಸಣ್ಣ ಮರಿಗಳು ಕಣ್ಮರನ್ನು ಸುರಿಸುತ್ತಾ