ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ ರಾದವರು ರಾಜ್ಯಭಾರವನ್ನು ವಹಿಸಬೇಕೆಂದು ನಮ್ಮ ಕೋರಿಕೆ, ” ಎಂದು ಹಿಂಗ್‌ಲುಗಳ ಮೇಲೆ ನಿಂತು, ಮುಂಗಾಲುಗಳನ್ನು ಮುಗಿದು ತಲೆ ತಗ್ಗಿಸಿ, ಬಹು ವಿನಯದಿಂದ ಬಿನ್ನಹ ಮಾಡಿಕೊಂಡಿತು. ಅಲ್ಲಿ ನೆರೆದಿದ್ದ ಆನೆ, ಹುಲಿ, ಕರಡಿ, ಕತ್ತೆ, ಕುದುರೆ, ನಾಯಿ, ನರಿ, ಕೊತಿ, ಗಿಳಿ ಮುಂತಾದುವುಗಳು ಸ್ವಲ್ಪ ಹೊತ್ತು, ಒಂದರ ಮುಖವನ್ನು ಒ೦ದು ನೋಡಿದುವು. ತರುವಾಯ ಒಂದು ಗುಟರೆಯನ್ನು ಹಾಕಿ, ಹುಲಿ ಎದ್ದು, ಬಾಲವನ್ನು ನೆಲಕ್ಕೆ ಅಪ್ಪಳಿಸಿ, ತಲೆಯನ್ನು ಒದರಿ ಮೈಯನ್ನು ಮುರಿದು, ಮತ್ತೆ ಒಂದುಸಲ ಸಣ್ಣ ಸಣ್ಣ ಮೃಗಗಳು ನಡಗುವಂತೆ ಆರ್ಭ ಟಿಸಿ,-ರಾಜವಂಶಕ್ಕೆ ಸೇರಿದವನಾಗಿಯೂ,ಗತಿಸಿದ ಸಿಂಹರಾಜನಿಗೆ ಸವಿತಾಪ ಬಂಧುವಾಗಿಯೂ ಇರುವ ನಾನಲ್ಲದೆ ಈ ದೊರೆತನಕ್ಕೆ ಇನ್ನು ಯಾರು ತಾನೆ ಅರ್ಹರು ?- ಎಂದಿತು. ಹುಲಿಯ ಸಡಗರವನ್ನೂ , ಆರ್ಭಟವನ್ನೂ ಧಿಕ್ಕರಿಸುವ ನೋಟ ದಿಂದ ಕಣ್ಣುಗಳನ್ನು ಕೆಂಪಗೆ ಮಾಡಿಕೊಂಡು ನೋಡುತ್ತಿದ್ದ ಕರಡಿಯು, ಗುಲೊಂದು ಗೇಣುಗೇಣುದ್ದ ಕೂದಲುಳ್ಳ ತನ್ನ ಮೈಯನ್ನು ಒಂದಾವೃತ್ತಿ ಕೊಡವಿ, ಹಿಂಗಾಲ ಮೇಲೆ ನಿಂತು, ಹುಲಿಯನ್ನು ಕುಸ್ತಿಗೆ ಕರೆಯುವಂತೆ ಮುಂಗಾಲುಗಳನ್ನು ಎತ್ತಿ ಬೀಸುತ್ತಾ, 'ಹುಲಿಯೆ! ಸಾಕು! ನಿಲ್ಲಿಸು! ನಾನಿ ಲ್ಲಿರುವಾಗ ನೀನು ಯಾರು? ಬಲದಲ್ಲಿ ನಾನು ನಿನಗೆ ಕಡಿಮೆಯೆ? ಪ್ರಾಣಿ ಗಳನ್ನು ಹಿಂಸಿಸುವುದರಲ್ಲಿ ನಾನು ಯಾರಿಗೆ ಕೀಳು? ಧೈರ್ಯದಲ್ಲಿ ನನಗೆ ಇದಿರಾರುಂಟು? ಇವೆಲ್ಲಾ ಹಾಗಿರಲಿ, ಶತ್ರುವು ಮರವನ್ನೇರಿದರೆ, (ಇತರ ಮೃಗಗಳ ಕಡೆಗೆ ತಿರುಗಿ) ಈ ಬೆಪ್ಪ, ಮರವನ್ಮ ರೀತೇ? ಶತ್ರುವಿನಿಂದ ನಿಮ್ಮ « ಲ್ಲಾ ಸಂರಕ್ಷಿಸೀತೇ? ನಾನೇ ಎಂದೆಂದಿಗೂ ರಾಜನಾಗಿರುವುದಕ್ಕೆ ತಕ್ಕ ವನು, ನನ್ನ ಶಕ್ತಿ ಆ ಸಿಂಹ ಕ ಇಲ್ಲ. ನನ್ನ ಯೋಗ್ಯತೆಯ ನ್ನು ನೀವು ಚೆನ್ನಾಗಿ ತಿಳಿದು ಯೋಚಿಸಿರಿ,' ಎಂದು ಮೃಗಗಳು ಬೆದರಿ ಓಡಿಹೋ ಗುವಂತೆ ಕೋಪದಿಂದ ಗುರುಗುಟ್ಟಿತು. ಇವೆರಡರ ಆರ್ಭಟವನ್ನೂ ಗಂಭೀರವಾಗಿ ನೋಡುತ್ತಿದ್ದ ಗಜರಾ ಜನು, ಸೊಂಡಿಲನ್ನು ಅಲ್ಲಾಡಿಸುತ್ಯ, ಮುಂದೆ ಬಂದು, ' ನಾನು ಹೆಚ್ಚು