೪೯ ಹೇಳುವುದಿಲ್ಲ, ಗಾತ್ರದಲ್ಲಿಯ, ಶಕ್ತಿಯಲ್ಲಿಯ , ಧೈರ್ಯದಲ್ಲಿಯ, ಮುಖ್ಯವಾಗಿ ಗಾಂಭೀರದಲ್ಲಿಯೂ ಈ ಕಾಡಿನಲ್ಲಿ ನನ್ನಂತೆ ಇನ್ನಾವ ಪಾ) ಣಿಯಾದರೂ ಉಂಟೆ ? ಈ ವಿಷಯವನ್ನು ಸ್ವಲ್ಪ ಮನಸ್ಸಿಗೆ ತೆಗೆದುಕೊಂ ಡು ನೀವು ಯಾರನ್ನು ಬೇಕಾದರೂ ಗೊತ್ತು ಮಾಡಿಕೊಳ್ಳಿರಿ” ಎಂದಿತು , 1 ರೂಪಿನಲ್ಲಿಯೂ, ಕಾಲುಬಲದಲ್ಲಿಯೂ ನನಗೆ ಈಡಾರು ? ಎಂದು ಕುದುರೆಯ; ನನ್ನ ಕಣ್ಣೀ ಸಾಕು | ನನ್ನ ಕಾಲಿನ ಮಹಿಮೆಯೊಂದೇ ಮೇಲು ! ದೊರೆತನಕ್ಕೆ ಇನ್ನೇನು ಬೇಕು ? ” ಎಂದು ಜಿಂಕೆಯೂ; 'ಮನು ಷ್ಯರಂತಿರುವ ನಾನಲ್ಲದೆ ಇನ್ನು ಯಾರು ದೊರೆಯಾಗಬಲ್ಲರು ? ನನು ಚೇಷ್ಟೆಗಳಲ್ಲದೆ ಇನ್ನಾವುವು ನಿಮಗೆ ಸಂತೋಷವನ್ನುಂಟುಮಾಡುವುವು ?' ಎಂದು ಕಪಿಯ; ಕಲಿತ ಎರಡು ಮಾತುಗಳನ್ನು ಮುದ್ದು ಮುದ್ದಾಗಿ ಆಡುತ ಬಂದ ಗಿಳಿಯು, “ಮನು ಷ್ಯರು ಮಾತನಾಡುವಂತೆ ಮಾತನಾಡುವ ನಾನುತಾನ ನಿಮಗೆಲ್ಲ ದೊರೆಯಾಗಿರಬೇಕು ?” ಎ೦ದೂ ಹೀಗೆಯೇ ಯೋ ಗ್ಯತೆ ಇಲ್ಲದಿದ್ದರೂ ನಾನು ತಾನೆಂದು ಹೊಡೆದಾಡುತ್ತಿದ್ದ ಇತರ ಅಲ್ಪ ಪ್ರಾಣಿಗಳನ್ನು ಗಣನೆಗೆ ತಾರದೆ, ಮುಖಂಡರಾದ ಕೆಲವು ಮೃಗಗಳು ಸೇರಿ ಪ್ರಾಣಿಹಿಂಸೆ ಮಾಡದ, ಬಲವಾದ, ಗಂಭೀರವಾದ, ಮುಖ್ಯ ವಾಗಿ ಸ್ಕೋ ತ್ರಪ್ರಿಯನಾದ ಗಜರಾಜನೇ ಈ ಅರಣ್ಯದಲ್ಲಿ ಸದ್ಯ ರಾಜನಾಗಿರಬೇಕೆಂದು ಗೊತ್ತು ಮಾಡಿಕೊಂಡು, ರಾಜಾಧಿರಾಜಾ ಹೋ ! ಎಂದು ಕೂಗಿಕೊಳ್ಳುತ್ತ ತಮ್ಮ ತಮ್ಮ ಬಿಡಾರಕ್ಕೆ ಹೋದುವು. ಎಲ್ಲವೂ ಹೊರಟು ಹೋಗುವವರೆಗೆ ಕಾದಿದ್ದು ಒರು ತಂತ್ರಿಯಾದ ಆ ನರಿಯು, ಗಜರಾಜನಿಗೆ ನಯಭಯವನ್ನು ತೋರಿಸುತ ಬಹು ದೂರ ದಲ್ಲಿ ನಿಂತಿದ್ದು, ಆ ಗಜರಾಜನು ಒಂದು ಆವೃತ್ತಿ ಇದಿದ್ದ ಕಡೆಗೆ ತಿರುಗಲು ಮೆಲ್ಲನೆ ಹತ್ತಿರಕ್ಕೆ ಹೋಯಿತು. ಆಗ ಆನೆಯು ಎಲೈ ಮ೦ತ್ರಿಶ್ರೇಷ್ಠ ನೇ! ನೀನು ಬಂದು ನನಗೆ ಹೇಳದಿದ್ದರೆ ನಾನು ಇಲ್ಲಿಗೆ ಬರುತ್ತಿರಲಿಲ್ಲ, ನನಗೆ ಈ ಪದವಿಯ ಸಿಕ್ಕುತ್ತಿರಲಿಲ್ಲ, ನನ್ನ ಮಿತ್ರನಾದ ನೀನೇ ಮಂ ತ್ರಿಯಾಗಿದ್ದು ಕೊಂಡು ನಮ್ಮ ಪ್ರಜೆಗಳ ಕ್ಷೇಮಲಾಭಗಳನ್ನು ತಿಳಿಸುತ್ತಾ ಬಾ~ ಎಂದು ಹೇಳಿ, ಗಿಡದೊಳಕ್ಕೆ ನುಗ್ಗಿ, ಸೊಂಡಲಲ್ಲಿ ರೆಂಬೆಗಳನು ಮುರಿದು ತಿರುಗಿಸುತ್ತಾ, ಸಂತೋಷದಿಂದ ತನ್ನ ಹಿಂಡನ್ನು ಸೇರಿತು.
ಪುಟ:ಕಥಾವಳಿ.djvu/೬೪
ಗೋಚರ