ಪುಟ:ಕಥಾವಳಿ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಈ ಮನೆಯಲ್ಲಿರುವ ಈ ಹಾಳು ಕೋಳಿ ಕೂಗುವದರಿ೦ದಲ್ಲವೆ ನಮ್ಮ ನ್ನು ಈ ಮುದುಕಿಯು ಬೇಗ ಎಬ್ಬಿಸುವುದು; ಈ ರಾತ್ರಿ ಅದನ್ನು ಕೊಂದು ಹಾಕಿ ನಾವು ಮಲಗಿಕೊಳ್ಳೋಣವೆಂದು, ಆ ಕೆಟ್ಟ ಹೆಂಗಸರು, ಪಾಪ ! ಆ ಕೋಳಿಯನ್ನು ಕೊಂದು ಮಲಗಿಕೊಂಡರು. ಮುದುಕಿಗೆ ಒಂದು ಹೊತ್ತಿಗೆ ಎಚ್ಚರವಾಯಿತು, ಕೋಳಿ ಕೂಗಿರ ಬಹುದು, ಬೆಳಗಾಗಿರಬಹುದು ಎಂದು ಆ ಮುದುಕಿ ಆ ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ಇವರನ್ನು ಕೂಗು ವುದಕ್ಕೆ ಮೊದಲುಮಾಡಿದಳು. ಅವರು ಎದ್ದು ಬೆಳಗತನಕ ನಿದ್ರೆಯೇ ಇಲ್ಲದೆ ಕೆಲಸ ಮಾಡಬೇಕಾಯಿತು. ೩೭, ಶ್ರೀರಾಮ ನ ಚಂದ್ರನು. ಹುಣ್ಣಿಮೆಯ ಸಾಯಂಕಾಲ, ಸೂರ್ಯನು ಪಶ್ಚಿಮ ದಿಕ್ಕಿನಲ್ಲಿ ಅದೇ ಮುಳುಗಿದ್ದನು. ಭೂತ್ವ ದಿಕ್ಕಿನಲ್ಲಿ ಚಂದ್ರನು ಆಗತಾನೆ ಹುಟ್ಟುತ್ತಿದ್ದ ನು. ಆ ದಿಕ್ಕು ಕೆಂಪಗೆ ಥಳಥಳಿಸುತಿದ್ದಿತು. ಗಾಳಿಯು ತಣ್ಣಗೆ ಬೀಸು ಶಿದ್ದಿತು. ಪಕ್ಷಿಗಳು ಗೂಡುಗಳನ್ನು ಸೇರುತಿದ್ದುವ, ಮನೋಹರವಾದ ಆ ಸಂಜೆಯನ್ನೂ ಆ ಚಂದ್ರಮಂಡಲವನ್ನು ಶ್ರೀರಾಮನಿಗೆ ತೋರಿಸಬೇಕೆಂದು ತಾಯಿಯಾದ ಕಸಲೈಯು ಮಗುವನ್ನು ಕರೆತಂದಳು, ಮೇಲಕ್ಕೆ ಎಸೆದ ಬೆಳ್ಳಿಯ ಚೆಂಡಿನಂತೆ ಅಷ್ಟರಲ್ಲಿಯೇ ಕಾಣಿಸಿಕೊಂಡ ಆ ಚಂದ್ರನನ್ನು ಶ್ರೀ ರಾಮನಿಗೆ ತೋರಿಸಿದಳು. ಶ್ರೀರಾಮನು ಚಂದ್ರನನ್ನು ನೋಡಿ ತನಗೆ ಆಡುವುದಕ್ಕೆ ಅದು ಬೇಕೆಂದು ಮುದ್ದಾದ ಎರಡು ಕೈಗಳನೂ ಚಂದ್ರನ ಕಡೆ ನೀಡಿ ತೋರಿಸಿದನು. ಕೌಸಲೈಗೆ ಶ್ರೀರಾಮನ ಮನಸ್ಸು ತಿಳಿಯದೆ ಇದ್ದುದರಿಂದ, ಅವಳೂ ಚಂದ್ರನ ಕಡೆ ತೋರಿಸುತಿದ್ದಳು. ಆಗ ಶ್ರೀರಾಮು ನಿಗೆ ಕೋಪಬಂದಿತು, ಅಳುವುದಕ್ಕೆ ಮೊದಲುಮಾಡಿದನು. “ನಿನಗೆ ಏನು ಬೇಕಪ್ಪ” ಎಂದು ಕೌಸಲ್ಯಯು ಎಷ್ಟೆಷ್ಟು ವಿಧವಾಗಿ ಕೇಳಿದರೂ ಶ್ರೀರಾಮನು ಚಂದ್ರನನ್ನು ತೋರಿಸುತ್ತಾ, ಅಳುವುದನ್ನು ಹೆಚ್ಚು ಮಾಡುತ್ತಿದ್ದನು. ಮಗುವು ಅಳುತಿದೆಯೆಂದು ಆ ಕೌಸಿಯು ತಿಳಿದುಚಂದ್ರನು ಆಕಾಶದಲ್ಲಿ ಬಹು ದೂರದಲ್ಲಿರುವನು, ನಮಗೆ ಸಣ್ಣಗೆ ಕಂಡರೂ