ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫ ಬಹುಗಾತ್ರವಾಗಿರುವನು, ನಿನ್ನೊಡನೆ ಆಡುವುದಕ್ಕೆ ಅವನು ಬಾರನಪ್ಪ - ಎಂದು ಎಷ್ಟು ಸಮಾಧಾನ ಹೇಳಿದರೂ ಅವನು ಅಳುವುದನ್ನು ನಿಲ್ಲಿಸಲಿಲ್ಲ. ಅಷ್ಟರಲ್ಲಿಯೇ ಅಲ್ಲಿದ್ದ ಹೆಂಗಸರೆಲ್ಲರೂ ಬಂದು ಸೇರಿದರು, ಶ್ರೀರಾ ಮನನ್ನು ಸಮದಾಯಿಸಲು ಯಾರಿಂದಲೂ ಆಗಲಿಲ್ಲ. ಆಗ ಒಬ್ಬೊಬ್ಬರು ಒಂದೊಂದು ವಿಧವಾಗಿ ಶ್ರೀರಾಮನ ಅಳುವಿಗೆ ಕಾರಣವನ್ನು ಹೇಳತೊಡಗಿ ದರು. ಒಬ್ಬಳು “ ಶ್ರೀರಾಮನಿಗೆ ನಮ್ಮ ಮುದ್ದು ಕೂಸಿಗೆ ದೃಷ್ಟಿಯಾ ಗಿದೆ” ಯೆಂದೂ, ಇನ್ನೊಬ್ಬಳು “ಮಗುವಿಗೆ ಸಿಟ್ಟು ಬಂದಿದೆ" ಯೆಂದೂ, ಮತ್ತೊಬ್ಬಳು “ ಶ್ರೀರಾಮನಿಗೆ ನಿದ್ದೆ ಯ ಹೊತ್ತಾಯಿತು, ನಿದ್ದೆಯಿಂದ ಚೆಂಡಿ ಮಾಡುತ್ತಿದ್ದಾನೆ” ಯೆಂದೂ, ಎಲ್ಲೋ ಹೊಟ್ಟೆ ನೋಯುತ್ತಿರಬ ಹುದೆಂದೂ, ಹೀಗೆ ಒಬ್ಬೊಬ್ಬರು ಒಂದೊಂದು ಕಾರಣವನ್ನೂ, ಅದಕ್ಕೆ ಸಮಾಧಾನವನ್ನೂ ಹೇಳುತ್ತಿದ್ದರು. ಬೇಗನೆ ಒಬ್ಬ ಮುದುಕಿಯು ಬಂದು ಶ್ರೀರಾಮನಿಗೆ ದೃಷ್ಟಿ ಮಂತ್ರವನ್ನು ಹಾಕಲು ಮೊದಲುಮಾಡಿದಳು. ಯಾವ ಮಂತ್ರಕ್ಕೆ ಯಾವ ಸಮಾಧಾನಕ್ಕೂ ರಾಮನ ಅಳು ನಿಲ್ಲಲಿಲ್ಲ. - ಶ್ರೀರಾಮನು ಏಕೋ ಹಟ ಹಿಡಿದು ಚಂಡಿ ಮಾಡುತ್ತಿರುವನಂಬು ದನ್ನು ತಂದೆಯಾದ ದಶರಥನು ಕೇಳಿ ಥಟ್ಟನೆ ರಾಮನಿದ್ದಲ್ಲಿಗೆ ಬಂದನು ದಶರಥನು ಬಂದರೂ ರಾಮನಿಗೆ ಸಮಾಧಾನವುಂಟಾಗಲಿಲ್ಲ. ಆಗ ಏನು ಮಾಡುವದಕ್ಕೂ ತೋರದೆ ದಶರಥನು ತನ್ನ ಮಂತ್ರಿಗೆ ಹೇಳಿಕಳುಹಿಸಿದನು. ದೊರೆಯ ಮಗನಾದ ಶ್ರೀರಾಮನಿಗೆ ಆಲಸ್ಯವೆಂದು ತಿಳಿದೊಡನೆಯೇ ಮಂ ತ್ರಿಯೂ ಬೇಗ ಬಂದು ಶ್ರೀರಾಮನು ಎಷ್ಟು ಹೊತ್ತಿನಿಂದ ಅಳುತ್ತಿರುವನು, ಏಕೆ ಅಳುತ್ತಿರುವನು-ಎಂದು ಕೇಳಿ ಅಲ್ಲಿದ್ದವರಿಂದ ಎಲ್ಲವನ್ನೂ ತಿಳಿದು ಕೊಂಡನು. ಆಗ ಚಂದ್ರನನ್ನು ತಂದುಕೊಡಬೇಕೆಂದು ರಾಮನು ಚಂಡಿ ಹಿಡಿದಿರುವನೆಂದು ಗೊತ್ತು ಮಾಡಿ, ಮಂತ್ರಿಯು ಬೇಗನೆ ಒಂದು ಕನ್ನಡಿ ಯನ್ನು ತಂದು ಶ್ರೀರಾಮನ ಕೈಯಲ್ಲಿ ಕೊಟ್ಟು ಅದರಲ್ಲಿ ಚಂದ್ರನನ್ನು ತೋ ರಿಸಿದನು. ರಾಮನಿಗೆ ಬಹು ಸಂತೋಷವಾಯಿತು. ಆಗ ರಾಮನು ಅಳುವದನ್ನು ಬಿಟ್ಟು ಸುಖವಾಗಿ ಆಡತೊಡಗಿದನು. ಶ್ರೀರಾಮನ ಆಟ ಪಾಟವನ್ನು ನೋಡಿ ಅಲ್ಲಿದ್ದವರೆಲ್ಲರಿಗೂ ಸಂತೋಷವಾಯಿತು.