ಪುಟ:ಕಥಾವಳಿ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ಸ್ವಲ್ಪ ಹೊತ್ತಾದಮೇಲೆ ಪಾಶ್ವತೀಪತಿಯಾದ ಈಶ್ವರನು ಬಂದನು. ಬಾಗಿಲಲ್ಲಿ ಇದ್ದ ಆ ಮಣ್ಣಿನ ಹುಡುಗನು, ' ಒಳಕ್ಕೆ ಹೋಗಕೂಡದೆಂದು ತಡೆದನು, ಈಶ್ವರನಿಗೆ ಕೋಪ ಬಂದು ಅವನ ತಲೆಯನ್ನು ಕತ್ತರಿಸಿ, ಒಳ ಕೈ ನುಗ್ಗಿದನು. ಅಷ್ಟರಲ್ಲಿ ನೀರೆರೆದುಕೊಂಡು ಹೊರಕ್ಕೆ ಬರುತಿದ್ದ ಸಾರ: ತಿಯು, ವಿನೋದಕ್ಕೆ,ನಿಮ್ಮನ್ನಾರೂ ತಡೆಯಲಿಲ್ಲವೆ ? ನೀವು ಒಳಕ್ಕೆ ಹೇಗೆ ಬಂದಿರಿ? ” ಎಂದು ಈಶ್ವರನನ್ನು ಕೇಳಿದಳು, ಈಶ್ವರನು ಅದಕ್ಕೆ 'ಮಣ್ಣಿನ ಬೊಂಬೆಯೊಂದು ತಡೆಯಿತು, ಅದರ ಕತ್ತನ್ನು ಮುರಿದು ಒಳಕ್ಕೆ ಬಂದೆನು' ಎಂದನು ಪಾಶ್ವತಿಯು, ಅಯ್ಯೋ ! ಎಂದು ಗಟ್ಟಿಯಾಗಿ ಅಳುವದಕ್ಕೆ ಆರಂಭಿಸಿದಳು. ಈಶ್ವರನು ಎಷ್ಟೆಷ್ಟು ಸಮಾಧಾನ ಹೇಳಿದರೂ ಕೇಳಳು. ಆಗ ಈಶ್ವರನು ' ನೀನು ಅಷ್ಟೇಕೆ ಅಳುತ್ತೀಯೆ ? ನಾನು ಅವನನ್ನು ಬದುಕಿ ಸಿಕೊಡುವೆನು ' ಎಂದು ಸಮದಾಯಿಸಿ, ತನ್ನ ಭಟರಿಗೆ, - ಈಗ ಉತ್ತರ ದಿಕ್ಕಿಗೆ ತಲೆಯನ್ನು ಇಟ್ಟು ಯಾರು ಮಲಗಿರುತ್ತಾರೋ ಅವರ ತಲೆಯನ್ನು ಕಡಿದುಕೊಂಡು ಬನ್ನಿ' ಎಂದು ಹೇಳಿ ಕಳುಹಿಸಿದನು. ಅವರು ಎಲ್ಲೆಲ್ಲಿ ಹುಡುಕಿದರೂ ಯಾರೂ ಉತ್ತರ ದಿಕ್ಕಿಗೆ ತಲೆಯ ಯನ್ನಿಟ್ಟು ಮಲಗಿರಲಿಲ್ಲ. ಒಂದು ದೊಡ್ಡ ಅರಣ್ಯದಲ್ಲಿ ಎಲ್ಲಿಯೋ ಒಂದು ಆ ನೆ ಮಾತ್ರ ಉತ್ತರಕ್ಕೆ ತಲೆಯನ್ನಿಟ್ಟು ಮಲಗಿದ್ದಿತು. ಆಗ ಅವರು ಅದರ ತಲೆಯನ್ನು ಕತ್ತರಿಸಿಕೊಂಡು ಬಂದು ಈಶ್ವರನಿಗೆ ಒಪ್ಪಿಸಿದರು. ಪರಮೇ ಶ್ವರನು ಅದನ್ನೇ ವಿನಾಯಕನ ಮುಂಡದ ಮೇಲೆ ಇಟ್ಟು ಮತ್ತೆ ಜೀವಕಳ ತು೦ಬಿ, ಆಗ ಆ ವಿನಾಯಕನಿಗೆ ಬೇಕಾದ ವರಗಳನ್ನು ಕೊಟ್ಟನು. ಯಾ ರೇ ಆಗಲಿ, ಯಾವ ಕೆಲಸವನ್ನು ಆರಂಭಿಸುವಾಗ ನಿನ್ನನ್ನು ಪೂಜಿಸದೆ ಆರಂಭಿಸುವರೊ ಅವರ ಕಾರವ ನರವೇರದಿರಲಿ, ಎಂದು ಹೇಳಿದನು. ತನ್ನ ಮಾತು ನಿಶ್ಚಯ ವಾಗಲು ತಾನೇ ತ್ರಿಫರರನ್ನು ಕೊಲ್ಲುವ ಕಾಲದಲ್ಲಿ ವಿನಾಯಕನನ್ನು ಪೂಜಿಸಿದನು. ಶ್ರೀರಾಮನು ಸೀತೆಯನ್ನು ಹುಡುಕು ವಾಗ, ವಿನಾಯಕನನ್ನು ಪೂಜೆ ಮಾಡಿದನು. ಈ ವಿನಾಯಕನನ್ನು ಗಣಪತಿಯೆಂದೂ ವಿಚ್ಛೇಶ್ವರನೆಂದೂ ಕರೆವರು, ವಿದ್ಯೆಯು ನಿರ್ವಿಘ್ನವಾಗಿ ನಡೆವುದಕ್ಕೆ ಇವನ ಅನುಗ್ರಹ ವು ಬೇಕೆಂದು ವಿದ್ಯೆಯನ್ನು ಕಲಿಯಬೇಕೆಂ ಬ ಅಪೇಕೆ ಯುಳ್ಳವರೆಲ್ಲರೂ ಈಗಲೂ ಪೂಜಿಸುವರು. ಈ ವಿನಾಯಕ ನನ್ನು ಭಾದ್ರಪದ ಶುದ್ಧ ಚತುರ್ಥಿಯದಿನ ಎಲ್ಲರೂ ಪೂಜಿಸುವರು, ಒಂದು