ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೬೧.

.

ಚೌತಿಯಲ್ಲಿ ವಿನಾಯಕನು, ಬೇಕಾದಷ್ಟು ಕಡುಬುಗಳನ್ನು ತಿಂದು (ವಿನಾಯಕನಿಗೆ ಕಾಯಿ ಕಡುಬಿನಲ್ಲಿ ತುಂಬ ಇಷ್ಟ), ಅವನ ವಾಹನವಾದ ಇಲಿಯಮೇಲೆ ಕುಳಿತು ಬರುವಾಗ, ಇಲಿಯು ಒಂದು ಹಾವನ್ನು ನೋಡಿ ಬೆದರಿ ಓಡಿತಂತೆ, ಹೊಟ್ಟೆಯ ಭಾರದಿಂದ ವಿನಾಯಕನು ಮುಗ್ಗುರಿಸಿದನಂತೆ, ಆಗ ಹೊಟ್ಟೆಯು ಒಡೆಯಲು ಹತ್ತಿರ ಹೋಗುತಿದ್ದ ಹಾವನ್ನು ಬಿಗಿದು ಹೊಟ್ಟೆಗೆ ಕಟ್ಟಿದನಂತೆ. ಇದನ್ನು ನೋಡಿ ಚಂದ್ರನು ನಕ್ಕನಂತೆ. ಆಗ ಚಂದ್ರನಮೇಲೆ ಕೋಪಬಂದು, ವಿನಾಯಕನು ಚಂದ್ರನಿಗೆ ಶಾಪಕೊ ಟ್ಟನಂತೆ. ಶಾಪದಿಂದ ಕೂಡಿದ ಆ ಚಂದ್ರನನ್ನು ಭಾದ್ರಪದ ಶುದ್ಧ ಚೌತಿ ಯಂದು ಯಾರು ನೋಡುತ್ತಾರೋ ಅವರಮೇಲೆ ಇಲ್ಲದ ಕಳ್ಳತನವೇ ಮುಂತಾದ ಅಪವಾದ ಬರುವುದೆಂದು ಹೇಳುತ್ತಾರೆ.

———

೪೧, ಮರಗಳು ರಾಜನನ್ನು ಗೊತ್ತು ಮಾಡಿ ಕೊಂಡುದು

ಒಂದಾನೊಂದು ಕಾಲದಲ್ಲಿ ಮರಗಳೆಲ್ಲವೂ ಒಟ್ಟಾಗಿ ಸೇರಿ ತಮ್ಮಲ್ಲಿ ಒಂದಕ್ಕೆ ದೊರೆತನವನ್ನು ಕೊಡಬೇಕೆಂದು ಗೊತ್ತು ಮಾಡಿಕೊಂಡುವು, ಆಗ ಅವುಗಳು ತಮ್ಮಲ್ಲೆಲ್ಲಾ ದೊಡ್ಡದಾಗಿದ್ದ ಅರಳಿಯ ಮರಕ್ಕೆ ನಮಸ್ಕಾರ ಮಾಡಿ,-ಅರಳಿಯ ಮರವೇ ನೀನು ನಮಗೆಲ್ಲಾ ರಾಜನಾಗಿರುವೆಯಾ, ಎಂದು ಕೇಳಿದವು.

ಅದಕ್ಕೆ ಅರಳಿಯ ಮರವು ಹೇಳಿದುದೇನೆಂದರೆ, ನಾನು ಎಂದರೇನು ! ನಿಮಗೆ ರಾಜನಾಗಿರುವದೆಂದರೇನು ? ನನ್ನ ಬುಡ ಮೊದಲ್ಗೊಂಡು ಕೊನೆಯವರೆಗೂ ದೇವತೆಗಳು ವಾಸವಾಗಿರುವರೆಂದು ಜನರು ತಿಳಿದು, ನನಗೆ ಮುಂಜಿ ಮದುವೆ ಮಾಡುವರು. ನನ್ನನ್ನು ಕಡಿದು ಹಾಕುವುದು ಪಾಪವೆಂದು ತಿಳಿದಿರುವರು. ತಮಗೆ ಬೇಕಾದುದನ್ನು ಕೊಡುವೆನೆಂದು ಜನರು ನನಗೆ ಪ್ರದಕ್ಷಿಣೆ ನಮಸ್ಕಾರ ಮಾಡುವರು; ನನ್ನ ಬುಡದ ಸುತ್ತಲೂ ನನ, ಪಾದಸೇವೆಯನ್ನು ಮಾಡಿಕೊಂಡು ಬಹುಮಂದಿ ನಾಗರಾಜರು ಹಗಲೂ ರಾತ್ರಿಯೂ ನಿಂತಿರುವರು, ಇಂತಹ ಗೌರವವನ್ನು ಬಿಟ್ಟು, ಜಗರಾದ ನಿಮಗೆ ರಾಜನಾದರೆ ನನಗೆ ಬರುವದೇನು ? ನಾನು ಆಗಲಾರೆ, ಇನ್ಯಾರನ್ನಾದರೂ ನೋಡಿಕೊಳ್ಳಿ ಎಂದಿತು.