ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫ ಯು ಆವರಿಸಿತು, ಎರಡು ಹೆಜ್ಜೆ ಯಷ್ಟು ಸ್ಥಳವಂತೂ ಸಿಕ್ಕಿತು, ಇನ್ನೊಂದು ಹಚ್ಚೆ ಗೆ ಏನು ಹೇಳುತ್ತೀಯ ? ಎನಲು, ಸತ್ಯಸಂಧನಾದ ಬಲಿಯು, ನನ ತಲೆಯ ಮೇಲೆ ವಹಿಸುವೆನು ಎಂದು ತಲೆಯನ್ನು ಬಗ್ಗಿಸಿಕೊಡು, ಕೈಮು ಗಿದು ಕುಳಿತುಕೊಂಡನು, ದೇವರು ತನ್ನ ಪಾದವನ್ನು ಬಲಿಚಕ್ರವರ್ತಿಯ ತಲೆಯ ಮೇಲೆ ಇಟ್ಟು ಅವನನ್ನು ಪಾತಾಳಲೋಕಕ್ಕೆ ತುಳಿದು, ಅಲ್ಲಿ ಚಿರ ಕಾಲ ಆಳಿಕೊಂಡು ಸುಖವಾಗಿರು ಎಂದು ವರವನ್ನು ಕೊಟ್ಟು, ಭಕ್ತನಾದ ಬಲಿಯನ್ನು ಈ ರೀತಿಯಾಗಿ ಕಾಪಾಡಿ, ಇಂದ್ರಾದಿ ದೇವತೆಗಳನ್ನೂ ಸಂ ತೋಷ ಪಡಿಸಿ, ಮಾಯವಾದನು. ಈಗಲೂ ಬಲಿಪಾಡ್ಯಮಿ ಎಂದು ಹಬ್ಬ ವನ್ನು ಮಾಡಿ, ಅ೦ದು ಬಲಿಚಕ್ರವರ್ತಿಯನ್ನು ಪೂಜಿಸುವರು. ೪೩, ಟೀಪು ಸುರ್ಲ್ತಾ. ಸುಮಾರು ನೂರು ವರ್ಷಗಳ ಕೆಳಗೆ ಮೈಸೂರು ದೇಶವನ್ನು ಚೀಪು ಸುಲ್ತಾನನು ಆಳುತಿದ್ದನು. ಇವನು ದೊಡ್ಡ ನವಾಬ ಹೈದರನ ಮಗನು. ಹೈದರನು ಸತ್ತ ಮೇಲೆ ಇವನು ಸುಲ್ತಾನನೆಂಬ ಬಿರುದಿನಿಂದ ಪಟ್ಟಕ್ಕೆ ಬ೦ದನು. ಇವನ ರಾಜಧಾನಿ ಶ್ರೀರಂಗಪಟ್ಟಣ, ಈ ಶ್ರೀರಂಗಪಟ್ಟಣದ ಸುತ್ತಲೂ ಬಲವಾದ ಕಲ್ಲುಕೋಟೆಯಿದೆ. ಕೋಟೆಯ ಸುತ್ತಲೂ ಕಾವೇರೀ ನದಿ ಹರಿಯುತ್ತಿದೆ. ಸುಲ್ತಾನನ ಕಾಲದಲ್ಲಿ ಕೋಟೆಯೊಳಕ್ಕೆ ಹೊಸಬರು ಯಾರೂ ಅಪ್ಪಣೆ ಇಲ್ಲದೆ ಹೋಗಿ ಬರುವುದಕ್ಕೆ ಅವಕಾಶವಿರಲಿಲ್ಲ, ಜನರಿಗೆಲ್ಲಾ ಸುಲ್ತಾನನ ಹೆದರಿಕೆಯು ಬಹಳವಾಗಿದ್ದಿತು. ಇವನಿಗೆ ಮುಸಲ್ಮಾನರಲ್ಲಿ ಬಹಳ ಪ್ರೀತಿ; ಮಹಮ್ಮದೀಯ ಮತವನ್ನು ಹೆಚ್ಚಿಸಬೇಕೆಂಬುದು ಇವನ ಮನಸ್ಸು. ಇವನು ಓದು ಬರಹವನ್ನು ಚೆನ್ನಾಗಿ ಕಲಿತಿದ್ದನು. ಇವನು ಬಹು ಧೈರ್ಯ ಶಾಲಿ, ಯುದ್ಧದಲ್ಲಿ ಶರನು. ಹೀಗಿದ್ದ ಇವನಿಗೆ ಇಂಗ್ಲೀಷ್ ರಲ್ಲಿ ದ್ವೇಷವಿದ್ದಿತು ; ಇವನು ಕಾಲ ವನ್ನೆಲ್ಲಾ ಯುದ್ಧ ಮಾಡುವುದರಲ್ಲಿಯೂ, ಯುದ್ಧಕ್ಕೆ ಸಿದ್ಧನಾಗುವುದರಲ್ಲಿ ಯ ಕಳೆದು, ಕೊನೆಗೆ, ಶ್ರೀರಂಗಪಟ್ಟಣದ ಕೋಟೆಯ ಮೇಲೆ ಬಹು