ಪುಟ:ಕಥಾವಳಿ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ಧೈರ್ಯವಾಗಿ ಇಂಗ್ಲಿಷ್‌ರ ಮೇಲೆ ಯುದ್ಧ ಮಾಡಿ ಸತ್ತನು. ಇವನು ಕುಳಿತುಕೊಳ್ಳುವದಕ್ಕಾಗಿ ಭಂಗಾರದ ವ್ಯಾಘಾಸನವನ್ನು ಮಾಡಿಸಿದ್ದನು. ಇವನನ್ನು 'ಮೈಸೂರು ಹುಲಿ' ಎಂದು ಕರೆಯುತ್ತಿದ್ದರು. ೪೪, ರಾಜನು ಜೇಡರ ಹುಳುವಿನಿಂದ ಬದುಕಿದುದು. ಒಬ್ಬ ರಾಜನು ಯುದ್ಧದಲ್ಲಿ ಸೋತು ಒಂದು ಕಾಡನ್ನು ಹೊಕ್ಕನು. ಶತ್ರುಗಳು ಅವನನ್ನು ಬೆನ್ನಟ್ಟಿ ಕೊಂಡು ಬಹುದೂರ ಹೋದರು. ಅಷ್ಟರ ಲ್ಲಿಯೇ ಕತ್ತಲಾಯಿತು, ಬೆನ್ನಟ್ಟಿ ಬರುತ್ತಿದ್ದವರು ಅಲ್ಲಲ್ಲಿ ನಿಂತರು. ರಾಜನೂ ಒಂದು ಕಲ್ಲುಪೊಟರೆಯಲ್ಲಿ ರಾತ್ರಿಯನ್ನೆಲ್ಲಾ ಕಳೆದನು, ಆ ರಾತ್ರಿ ಒಂದು ಜೇಡರ ಹುಳುವು ಆ ಕಲ್ಲು ಪೊಟರೆಯ ಬಾಯಿಗೆ ದಾರವನ್ನು ಬೀಸಿ, ಒಂದು ದೊಡ್ಡ ಗೂಡನ್ನು ಕಟ್ಟಿ ತು. ಬೆಳಗಾಯಿತು. ರಾಜನು ಎದ್ದು ಮುಂದೆ ಹೊರಡಲು ಸಿದ್ಧನಾದನು. ಅಷ್ಟರಲ್ಲಿಯೇ ಕುದುರೆಯ ಓಟದ ಶಬ್ದವು ಕೇಳಿಸಿತು. ರಾಜನು ಅಲ್ಲಿಯೇ ಅಡಗಿಕೊಂಡನು, ಕುದುರೆಯ ಹಜ್ಜೆಯ ಶಬ್ಬಕ್ಕಿಂತ ಅವನ ಎದೆಯು ಹೊಡೆ ದುಕೊಳ್ಳುತ್ತಿದ್ದ ಶಬ್ದವೇ ಅವನಿಗೆ ಹೆಚ್ಚಾಗಿ ಕೇಳಿಸುತಿದ್ದಿತು, ಇಬ್ಬರು ಸವಾ ರರು ಪೊಟರೆಯ ಹತ್ತಿರಕ್ಕೆ ಬಂದರು. ಅವರಲ್ಲಿ ಒಬ್ಬನು, “ ಇಲ್ಲಿ ಏನಾದ ರೂ ಆ ರಾಜನು ಅವಿತುಕೊಂಡಿರುವನೋ, ನೋಡೋಣ, ಇಳಿ ” ಎಂದನು. ಆ ಮಾತನ್ನು ಕೇಳಿ ರಾಜನು ತನ್ನ ಕೊನೆಯ ಹತ್ತಿರವಾಯಿತೆಂದು ತಿಳಿದನು. ಅಷ್ಟರಲ್ಲಿ ಇನ್ನೊಬ್ಬನು ಪೊಟರೆಯ ಬಾಯನ್ನು ಚೆನ್ನಾಗಿ ನೋಡಿ, ರಾಜನು ಈ ಪೊಟರೆಯಲ್ಲಿ ಇರಲಾರನು. ಪೊಟರೆಯ ಬಾಗಿ ಲಲ್ಲಿರುವ ಜೇಡರ ಗೂಡನ್ನು ನೋಡು, ಆ ಗೂಡಿನ ಒಂದು ಎಳೆಯ ಕಿತ್ತು ಹೋಗಿಲ್ಲ, ರಾಜನು ಒಳಕ್ಕೆ ಹೋಗಿದ್ದರೆ ಗಡು ಹೀಗೆ ಇರುತ್ತಿದ್ದಿತೆ? ಮುಂದೆ ನಡೆ ' ಎಂದು ಕುದುರೆಯನ್ನು ಓಡಿಸಿದನು. ಜತೆಯಲ್ಲಿದ್ದವನ ಹೊರಟನು. ರಾಜನು ಬದುಕಿಕೊಂಡನು. ಈ ವಿಪತ್ತಿನಿಂದ ಕಾಪಾಡಿದುದ ಕ್ಯಾಗಿ ರಾಜನು ದೇವರನ್ನು ಬಹಳವಾಗಿ ಸ್ತೋತ್ರಮಾಡಿದನು.