ವಬಗೆ ಯೆಲ್ಲಿ ? ನೀನು ಕೊಟ್ಟ ವರಕ್ಕೆ ಸಾರ್ಥಕ್ಯ ವೆಲ್ಲಿ ? ಪತಿಯು ಹೋದ ಮೇಲೆ ಸ್ತ್ರೀಯರಿಗೆ ಸುಖವೆಂದರೇನು ? ನನ್ನ ಪತಿಯನ್ನು ಬಿಡದಿದ್ದ ಮೇಲೆ ಅನ್ನ ವರಗಳು ಏತಕ್ಕೆ ? ಎಂದು ಬಾರಿಬಾರಿಗೂ ಹೇಳುತ್ತಾ ಹಿಂದೆಯೇ ರಟಳು. ಸಾವಿತ್ರಿಗೆ ಪತಿಯ ಮೇಲಿರುವ ಪ್ರೀತಿಗೆ ಯಮನು ಮೆಚ್ಚಿ, ' ನಿನಗೆ ತೀಕಾದ ಇನ್ನೊಂದು ವರವನ್ನೂ ಕೇಳು ' ಎಂದನು. ಸಾವಿತ್ರಿಯು, ಸ್ವಾಮಿ ! ನನ್ನ ಪತಿಯ ಪ್ರಾಣವನ್ನು ಉಳಿಸಬೇಕು ' ಎಂದು ಕೈಮು \ದು ಬೇಡಿದಳು. ಆಗ ಯಮಧರರಾಯನು ಸತ್ಯವಾನನನ್ನು ಬದುಕಿಸಿ ಗಂಡ ಹೆಂಡರಿಬ್ಬರನ್ನೂ ಹರಿಸಿ, ಹೊರಟುಹೋದನು, ಸಾವಿತ್ರಿಯು ಗಂಡನನ್ನು ಕರೆದುಕೊಂಡು, ಅತ್ತೆ ಮಾವಂದಿರ ಬಳಿಗೆ ಹೋಗಿ ಕಾಡಿನಲ್ಲಿ ತಡೆದ ಸಂಗತಿಯನ್ನೆಲ್ಲಾ ತಿಳಿಸಿದಳು. ಅವರಿಗೆ ಬಹಳ ಸಂತೋಷವಾಯಿತು. ಯಮಧರರಾಯನ ವರಗಳೆಲ್ಲವೂ ಕೈಗೂಡಿದುವು. ದ್ಯುಮತ್ತೇನನಿಗೆ ರಾಜ್ಯವೂ ಬಂದಿತು. ಅಶ್ವಪತಿಗೆ ಗಂಡು ಮಕ್ಕಳಾದರು. ಸತ್ಯವಾನನು ದೀರ್ಘಾಯವಾದನು, ಸಾವಿತ್ರಿಯು ಸುಖಿಯಾದಳು. ೪೭, ಕಂಠೀರವ ನರಸರಾಜ ಒಡೆಯರು. ಈ ಮೈಸೂರು ದೇಶವನ್ನು ಆಳಿ ಪ್ರಸಿದ್ಧಿಗೊಂಡ ರಾಜರಲ್ಲಿ ಕಂಠೀರವ ನರಸರಾಜ ಒಡೆಯರೊಬ್ಬರು. ಇವರು ಮಹಾಶೂರರು, ಇವರು ಸಿಂ ಹಕ್ಕೆ ಸಮಾನವಾದ ಬಲವನ್ನೂ ಧೈರ್ಯವನ್ನೂ ಪಡೆದಿದ್ದರು. ಮೈಸೂರ ಸಂಸ್ಥಾನಕ್ಕೆ ಸೇರಿದ ತೆರಕಣಾಂಬಿ ಎಂಬ ಊರಿನಲ್ಲಿ, ಪಟ್ಟ ವಾಗುವುದಕ್ಕೆ ಮುಂಚೆ ಇವರು ಇದ್ದರು. ಅಲ್ಲಿಗೆ ಒಂದು ದಿವಸ ಒಬ್ಬ ಬ್ರಾಹ್ಮಣನು ಬಂದನು, ಆ ಬ್ರಾಹ್ಮಣನು ತಾನು ನೋಡಿದ ಪಟ್ಟಣಗಳ ವಿಚಾರವನ್ನೆಲ್ಲಾ ನರಸರಾಜರ ಮುಂದೆ ಹೇಳಿ, ಕೊನೆಗೆ, ' ತಿರುಚನಾಪಳ್ಳಿ ಎಂದು ಒಂದು ಪಟ್ಟಣವಿದೆ. ಆ ಪಟ್ಟಣದ ಅರಸಿನ ಬಳಿ ಒಬ್ಬ ಜಟ್ಟಿ ಇರುತ್ತಾನೆ. ಅವನೂ ಡನೆ ಯಾರೂ ಕಾಳಗ ಮಾಡುವವರೇ ಇಲ್ಲ' ಎಂದು ಹೇಳಿದನು, ಅದನ್ನು ಕಂಠೀರವ ನರಸರಾಜರು ಕೇಳಿ, ತಿರುಚನಾಪಳ್ಳಿಗೆ ಗುಟ್ಟಾಗಿ ಬೇರೆ ವೇಷ
ಪುಟ:ಕಥಾವಳಿ.djvu/೮೫
ಗೋಚರ