೭೧. ದಿಂದ ಹೋಗಿ, ಆ ಜಟ್ಟಿಯು ಊರು ಬಾಗಿಲಲ್ಲಿ ಕಟ್ಟಿದ್ದ ದಟ್ಟಿಯನ್ನು ಕಿತ್ತು ಊರೊಳಗೆ ನುಗ್ಗಿದರು. ಆಗ ಆ ಊರದೊರೆಯ ಇದಿರಿಗೆ ಇವ ರಿಗೂ ಆ ಜಟ್ಟಿಗೂ ದೊಡ್ಡ ಕಾಳಗವಾಯಿತು. ಆ ಕಾಳಗದಲ್ಲಿ ಗೆದ್ದು ಜಟ್ಟಿಯ ಬಿರುದುಗಳನ್ನೆಲ್ಲಾ ತೆಗೆದುಕೊಂಡು ಊರಿಗೆ ಬಂದು ಸೇರಿದರು. ಇವರಿಗೆ ಪಟ್ಟೆ ವಾದಮೇಲೂ, ಇವರನ್ನು ಕೊಲ್ಲಬೇಕೆಂದು ಏಳು, ಎಂಟು ಮಂದಿ ಶೂರರು, ರಾತ್ರಿಯ ವೇಳೆಯಲ್ಲಿ ಇವರ ಮನೆಗೆ ನುಗ್ಗಿ, ಇವರ ಮೇಲೆ ಬೀಳಲು, ಮಹಾ ಪರಾಕ್ರಮದಿಂದ ಅವರೆಲ್ಲರನ್ನೂ ಜಯಿಸಿ ದರು, ಇವರ ಕಾಲದಲ್ಲಿ ತುರುಕರು ಶ್ರೀರಂಗಪಟ್ಟಣವನ್ನು ಮುತ್ತಿಗೆ ಹಾಕಲು ದೊರೆಗಳು ತಾವೇ ಕತ್ತಿಯನ್ನು ಹಿರಿದುಕೊಂಡು ಶತ್ರುಗಳ ಮೇಲೆ ಬಿದ್ದರು. ತುರುಕರ ಸೇನಾಪತಿಯು, ದಿಗಿಲುಪಟ್ಟು, ಇವರೊ ಡನೆ ಸಮಾಧಾನವನ್ನು ಮಾಡಿಕೊಂಡು ಹೊರಟು ಹೋದನು. ಇವರು ಕುಣಿಗಲು, ಸತ್ಯಮಂಗಲ ಮುಂತಾದುವುಗಳನ್ನು ಮೈಸೂರು ಸೀಮೆಗೆ ಸೇರಿಸಿಕೊಂಡು, 'ಕಂಠರಾಯಿ ಹಣ, ಕಂಠೀರಾಯ ವರಹಾ' ಎಂಬ ಚಿನ್ನದ ನಾಣ್ಯಗಳನ್ನು ಹಾಕಿಸಿದರು. ಇವರು ಇರುವವರೆಗೂ ಮೈಸೂರ ಸಿಂಹ ವಾಗಿದ್ದರು. ೪೮, ಬೇಸಗೆ ಕಾಲ ಮಳೆಗಾಲ. ಉರಿ ಬೇಸಗೆ, ಮಟಮಟ ಮಧ್ಯಾಹ್ನ, ಗಿಡದ ಒಂದು ಸಣ್ಣ ಎಲೆ ಸಹಿತ ಅಲ್ಲಾಡುತ್ತಿರಲಿಲ್ಲ, ಬಿಸಲಿನ ತಾಪವನ್ನು ತಡೆಯಲಾರದೆ ದೊಡ್ಡದೊಡ್ಡ ಮನೆಗಳ ನೆಳಲಲ್ಲಿ ನಾಲಗೆಯನ್ನು ನೀಡಿಕೊಂಡು, ಹಾ,ಹ, ಎಂದು ನಾಯಿಗಳು ಮಂಕಾಗಿ ಬಿದ್ದಿದ್ದುವು. ಅಲ್ಲಲ್ಲಿ ಮರದ ನೆಳಲಲ್ಲಿ ದನ ಗಳು ಮೇಯುವುದಕ್ಕೆ ಹಸಿರಿಲ್ಲದೆ, ಕುಡಿವುದಕ್ಕೆ ನೀರಿಲ್ಲದೆ ಬೆಪ್ಪಾಗಿ ನಿಂತಿ ದ್ದುವು. ದಾರಿಹೋಕರು, ನಡೆಯಲಾರದೆ ನೆಳಲಿದ್ದ ಸ್ಥಳದಲ್ಲಿ, ಶಾ೦ತ ರಾಗಿ, ಮಲಗಿ ನಿದ್ದೆ ಹೋಗುತಿದ್ದರು, ಮನೆಗಳಲ್ಲಿ ಮುದುಕರೂ ಹುಡು. ಗರೂ ಬಿಸಿಲ ಬೇಗೆಯನ್ನು ತಡೆಯಲಾರದೆ ಮೈಮೇಲಿನ ಬಟ್ಟೆಯನ್ನು ಬಿಸಾಟು, ನೆಲದಮೇಲೆ ಬಿದ್ದು ಹೊರಳಾಡುತ್ತಿದ್ದರು, ಎಳೆ ಮಕ್ಕಳು. ಸೆಕೆಯನ್ನು ಸಹಿಸಲಾರದೆ ಚಂಡಿ ಹಿಡಿದಿದ್ದುವು. ಪಾಠಶಾಲೆಗಳಲ್ಲಿಯೂ
ಪುಟ:ಕಥಾವಳಿ.djvu/೮೬
ಗೋಚರ