ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಛೇರಿಗಳಲ್ಲಿಯ, ಬಾಲಕರ, ಗುಮಾಸ್ತರೂ ತೂಕಡಿಸುತ್ತಿದ್ದರು. ಹಣಗಾರರು, ಅಧಿಕಾರಿಗಳು, ರಾಜಕುಮಾರರು, 'ಆ' ಎಂದು ಆಗುಳಿ ಸುತ ಗಾಳಿಯನ್ನು ಬಿಸಿಸಿಕೊಳ್ಳುತ ಕಾಲವನ್ನು ಕಳೆಯುತ್ತಿದ್ದರು. ವ್ಯಾಪಾರಿಗಳು ಅ೦ಗಡಿಯ ಮೇಲೆ ಕುಳಿತು, ಹಾಗೆ ನಿದ್ದೆ ಮಾಡಿ, ಆಗಾಗ ಬೆಚ್ಚಿ ಬಿದ್ದು ಎಚ್ಚರಗೊಳ್ಳುತಿದ್ದರು. ಅಲ್ಲಲ್ಲಿಯೆ ಅರವಟ್ಟಿಗೆಗಳಲ್ಲಿ ಪಾನಕ, ನೀರುಮಜ್ಜಿಗೆ, ತಣ್ಣನೆಯ ನೀರು, ಶ್ರೀಗಂಧ ಇವುಗಳನ್ನು ಕೊಡುತಿದ್ದರು. ನದಿಯ ತೀರಗಳಲ್ಲಿ, ತೋಪುಗಳಲ್ಲಿ, ತೋಟಗಳಲ್ಲಿ, ತಣ್ಣನೆಯ ನೆಳಲಲ್ಲಿ, ಅಲ್ಲೊಬ್ಬರು ಇಲ್ಲೊಬ್ಬರು ಪಕ್ಷಿಗಳ ಇಂಪಾದ ಧ್ವನಿಯನ್ನು ಕೇಳುತ್ತ, ಆನಂದ ಪಡುತ್ತಿದ್ದರು. ಪ್ರಯಾಣಿಕರ ಗಾಡಿಗಳು ಅಲ್ಲಲ್ಲಿಯೆ ನಿಲ್ಲುತ್ತಿ ದ್ದುವು, ಎತ್ತುಗಳನ್ನು, ಹುಸ್ ಎಂದು ಅಟ್ಟಿ, ಗಾಡಿ ಹೊಡೆವವನು ಹಾಗೆಯೆ ನಿದ್ದೆ ಹೋಗುತ್ತಿದ್ದನು. ಎತ್ತುಗಳು ಹಚ್ಚೆಯಮೇಲೆ ಹಜ್ಜೆಗ ಳನ್ನು ಹಾಕುತ, ಹಾಗೆಯೇ ತೂಕಡಿಸುತ ಮುಗ್ಗುರಿಸುತಿದ್ದುವು. ಪ್ರಾಣಿಗಳ ಈ ಕಷ್ಟವನ್ನು ಸಹಿಸಲಾರದೆ ಮಳೆಗಾಲವು ಆಕಾಶದಲ್ಲಿ ಕಪ್ಪು ಮೋಡವನ್ನು ಕಟ್ಟಿ, ಕಠಿನವಾದ ಬಿಸಿಲುಗಾಲವನ್ನು ಹೊಡೆದು ಓಡಿ ಸಲು ಗುಡುಗು, ಮಿಂಚು, ಸಿಡಿಲುಗಳೊಡನೆ, ಮಳೆಯನ್ನು ಕರೆದು ಬಿಸಿಲ ಬೇಗೆಯನ್ನು ಆರಿಸಲು, ತಲೆದೋರುತಿರಲು ಬೇಸಗೆಗೆ ಕೋಪಬಂದು-ನೀ ನೇನು ಜನರಿಗೆ ಹಿತವನ್ನು ಮಾಡುವೆನೆಂದು ಬರುತ್ತೀಯೆ ? ನಿಲ್ಲು ! ನಿಲ್ಲು ! ಇಗೋ ನನ್ನ ಮಾಹಾತ್ಮವನ್ನು ತೋರಿಸುವೆನು, ಅಲ್ಲಿ ನೋಡು ತೂಕಡಿಸುತಿದ್ದ ಜನರು ಹೇಗೆ ಹೊರಟಿರುವರು. ಅವರ ನವಿರಾದ ಉಡಿಗೆ ಯನ್ನು ನೋಡು, ಅವರು ಮುಡಿದಿರುವ ಹೂವನ್ನು ನೋಡು, ಅವರು ತೊಡೆದಿರುವ ಗಂಧದ ವಾಸನೆಯು ಇಲ್ಲಿಗೆ ಬರುತಿರುವುದು, ನನ್ನ ಮಿತ್ರ ನಾದ ಮಂದಮಾರುತನು ಜನರೆಲ್ಲರನ್ನೂ ಈಚೆಗೆ ಕರತರುವನು. ಗಿಡ ಗಳೆಲ್ಲಾ ಹೇಗೆ ನಗುತಿರುವುವು, ಚಳಿಗಾಲದಲ್ಲಿ ನರಟಿ ಹೋಗಿದ್ದ ಗಿಡಗಳೆಲ್ಲಾ : ಈಗ ಒಡೆದು ಹೂ ಬಿಡುತಿರುವವ, ಆ ಮಾವಿನ ಚಿಗುರನ್ನು ನೋಡು! ಈ ಸಾಲುಮರದ ಕೆಂಪು ಹೂವನ್ನು ನೋಡು, ಪಕ್ಷಿಗಳ ಉಲ್ಲಾಸವನ್ನು ನೋಡು, ಕೋಗಿಲೆಯ ಧ್ವನಿಯನ್ನು ಕೇಳು. ನವಿಲ ಆಟವನ್ನು ನೋಡು, ಸ್ತ್ರೀಯರ ಸಡಗರವ ಹೇಗಿರುವುದು ? ಇಲ್ಲಿ ನೋಡು, ರಾಮಧ್ಯಾನಮಾಡು