೭೩
ತ್ತ, ತಂಬೂರಿ, ಮೃದಂಗದೊಡನೆ ಜನರು ಗುಂಪಗುಂಪಾಗಿ ಹೊರಟಿರುವರು. ಜನರಿಗೆ ಸೌಖ್ಯವೆಂಬುದು ನನ್ನ ಕಾಲದಲ್ಲಿ ಅಲ್ಲದೆ ಇನ್ನಾವ ಕಾಲದಲ್ಲಿ ಉಂಟು, ನಾನು ಬರುವುದಕ್ಕೆ ಮುಂಚೆ ಮೊದಲು ಮೊದಲಲ್ಲಿ ಚಳಿಯಲ್ಲಿ ನಡುಗಿ, ಹಿಮದಲ್ಲಿ ನೆನೆದು, ದವಸ ಧಾನ್ಯಗಳನ್ನು ತುಂಬಿ ಒದೆದಾಡುತಿದ್ದರು. ಒಂದು ಗಿಡದಲ್ಲಾದರೂ ಎಲೆ ಇಲ್ಲ, ಚಿಗುರು ಇಲ್ಲ, ಹಣ್ಮನ ಹೆಸರೇ ಇಲ್ಲ. ಈಗ ನೋಡು ಹೇಗಿರುವುದು?-ಎನ್ನಲು, ಮಳೆಗಾಲವು ಒಂದು ಮಾತನ್ನೂ ಆಡದೆ ಆಕಾಶವನ್ನೆಲ್ಲಾ ಕರಿಯ ಮೋಡದಿಂದ ಮುಚ್ಚಿ ಗುಡುಗು ಮಿಂಚು ಸಿಡಿಲುಗಳೊಡನೆ ಆರ್ಭಟಿಸುತ್ತ ಪಟಪಟನೆ ಆಲಿಕಲ್ಲುಗಳನ್ನು ಬೀಸಿ ಭರಭರನೆ ಬಿರುಸಾಗಿ ಮಳೆಯನ್ನು ಕರೆಯಿತು. ಆಕಾಶವು ನಿರ್ಮಲವಾಯಿತು. ಗಿಡಗಳು ಮೈಯನ್ನೆಲ್ಲಾ ತೊಳದುಕೊಂಡಂತೆ ಕಂಗೊಳಿಸುತ್ತಿದ್ದುವು, ಊರಧೂಳು ಅಡಗಿತು, ಬೇಸಗೆಯ ಕೊಳೆಯೆಲ್ಲಾ ಕೊಚ್ಚಿ ಹೋಯಿತು, ಕೆರೆ ಬಾವಿಗಳಲ್ಲಿ ನೀರು ತುಂಬಿತು. ಕೊಟರ ಕೊಟರ, ಒಪ್ಪುಟ್ ಒಬಟ್, ಎಂದು ಕಪ್ಪೆಗಳು ಒರಳಲು ಆರಂಭಿಸಿದುವು, ರೈತನು ನೇಗಿಲನ್ನು ಕಟ್ಟಿ ಕೊಂಡು, ಹೊಲವನ್ನು ಉಳಲಿಕ್ಕೆ ಹೊರಟನು, 'ಮಳೆ ಬಂದಿತು, ದೇಶಕೆ ತಂಪಾಯಿತು. ಇನ್ನು ಯೋಚನೆ ಇಲ್ಲ' ಎಂದು ಜನರು ಚಟುವಟಿಕೆಯಿಂದ ಕೆಲಸಮಾಡಲು ತೊಡಗಿದರು. ಮಳೆಗಾಲದ ಆರ್ಭಟದಿಂದ ಬೇಸಗೆಯು ಹಿಂಜರಿಯಿತು. ಎಲ್ಲೆಲ್ಲೂ ನೀರೂ, ಎಲ್ಲೆಲ್ಲೂ ಹಸಿರೂ ಮನಸ್ಸನ್ನು ಸಂತೋಷಪಡಿಸುತ್ತಿದ್ದುವು.
—————
೪೯, ಪುಷ್ಪಮಂಜರಿಯ ಕಥೆ-೧ ನೆಯ ಭಾಗ.
ಪುಷ್ಪಪುರಿಯೆಂದು ಒಂದು ಪಟ್ಟಣವಿದ್ದಿತು. ಆ ಪಟ್ಟಣದಲ್ಲಿ ಪುಷ್ಪಶೇಖರನೆಂಬ ಒಬ್ಬ ದೊರೆಯು ಆಳುತ್ತಿದ್ದನು. ಅವನಿಗೆ ಮಕರಂದನೆಂಬ ಒಬ್ಬ ಮಗನಿದ್ದನು. ಅವನು ನೋಡುವುದಕ್ಕೆ ಬಹಳ ಚೆಲುವನಾಗಿಯೂ ಶಕ್ತಿ ಯುಕ್ತಿ ಯುಳ್ಳವನಾಗಿಯೂ ಇದ್ದನು.