ಪುಟ:ಕಥಾವಳಿ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪ ಒಂದು ದಿವಸ ಆ ರಾಜಕುಮಾರನು ಬೇಟೆಗೆ ಹೋಗಿ ಒಂದು ಹುಲ್ಲೆ ಯನ್ನು ಅಟ್ಟಿ ಕೊಂಡು ಕಾಡಿನಲ್ಲಿ ಬಹುದೂರ ಹೋದನು ; ಜತೆಯಲ್ಲಿದ್ದ ಜನರೆಲ್ಲರೂ ಹಿಂದೆ ನಿಂತರು. ಹುಲ್ಲೆ ಯು ಸಿಕ್ಕಲಿಲ್ಲ, ಮಟಮಟ ಮಧ್ಯಾಹ್ನ ; ಹಸಿವು, ಬಾಯಾರಿಕೆ, ಆಯಾಸ, ಹೆಚ್ಚುತ್ತಾ ಬಂದುವು. ಆಗ ದೊರೆಯ ಮಗನು ದಿಕ್ಕು ಕಾಣದೆ ನಿಂತಿರಲು, ನಿಶ್ಯಬ್ದವಾಗಿದ್ದ ಆ ಕಾಡಿನಲ್ಲಿ ಎಲ್ಲೋ ಅತ್ರ ಶಬ್ಬ ವು ಕೇಳಬಂದಿತು. ಆ ಶಬ್ದವು ಬ೦ದೆಡೆಗೆ ಕಿವಿಗೊಟ್ಟು ಕೇಳಿ, ( ಇದೇನು ! ಈ ಅರಣ್ಯ ಮಧ್ಯದಲ್ಲಿ ಯಾರೋ ಹೆಂಗಸು ಅಳುತಿರುವಂತೆ ಕೇಳುತಿದೆ. ಅಯ್ಯೋ ಪಾಪ! ಏನು ಕಷ್ಟವೋ ವಿಚಾರಿಸೋಣ ” ಎಂದು ತನ್ನ ಆಯಾಸವನ್ನು ಮರೆತು ಒಡನೆಯೆ ಹೊರಟನು. ಮೆದೆ ಮಳೆಗಳಲ್ಲಿ ನುಗ್ಗಿ ಮುಳ್ಳು ಕಲ್ಲುಗಳನ್ನು ತುಳಿದು ಆತುರದಿಂದ ಹೋಗುವಾಗ ಬಹು ಹೊತ್ತಾಯಿತು. ಸೂರನು ಮುಳುಗುತ್ತಿದ್ದನು. ಅಳುವ ಶಬ್ದವ ಇನ್ನೂ ಹೆಚ್ಚಾಗಿ ಕೇಳಿಸುತ್ತಾ ಬಂದಿತು. ಕತ್ತಲೆ ಆಗುವುದರೊಳಗಾಗಿ ಹೇಗಾ ದರೂ ಆ ಸ್ಥಳವನ್ನು ಕಂಡು ಹಿಡಿಯಬೇಕೆಂದು, ಹತ್ತಿರವಿದ್ದ ಒಂದು ದೊಡ್ಡ ಮರವನ್ನೆ ರಿ ಸುತ್ತಲೂ ನೋಡಿದನು. ಆ ಮರಕ್ಕೆ ಸ್ವಲ್ಪ ದೂರ ದಲ್ಲಿಯೇ ಯಾರೋ ಇದ್ದಂತೆ ಕಾಣಬಂದಿತು, ಒಡನೆಯೆ ಮರವನ್ನು ಇಳಿದು, ಆ ಮಾರ್ಗವಾಗಿ ಹೊರಟು ನಡುವಾಗ ಮುದಕಿಯೊಬ್ಬಳು ಒಂದು ಹಳ್ಳದಲ್ಲಿ ಬಿದ್ದು ಗೋಳಿಡುತಿದ್ದಳು. ಒಡನೆಯೆ ಅವಳನ್ನು ಮೇಲಕ್ಕೆ ಎತ್ತಿದನು. ಆಗ ಮುದಕಿಯು ಉಸ್ಸಪ್ಪ ! ಎಂದು ನಿಟ್ಟುಸಿರುಬಿಟ್ಟು ಸ್ವಲ್ಪ ಚೇತ ರಿಸಿಕೊಂಡು : ಅಪ್ಪಾ. ನೀನು ಪ್ರಣ್ಯವಂತನಾಗಿ ಬದುಕು, ನನ್ನ ಗುಡಿಸಲು ಇಲ್ಲಿಯೇ ಇರುವುದು, ನೀನು ಹಸಿದು, ಆಯಾಸಪಟ್ಟಿರುವಂತಿದೆ. ನನ್ನ ಮನೆಯಲ್ಲಿ ಸ್ವಲ್ಪ ಊಟಮಾಡಿ, ತಳಾರಿಸಿಕೊ, ಬೆಳಿಗ್ಗೆ ನಾನು ಊರದಾ ರಿಯನ್ನು ತೋರಿಸುವೆನು, ನೀನು ಸುಖವಾಗಿ ಹೋಗಬಹುದು' ಎಂದಳು. ರಾಜಕುಮಾರನು ಬಹು ಸಂತೋಷಗೊಂಡು, ದೇವರನ್ನು ಸ್ತುತಿಸಿ, ಅವಳೊಡನೆ ಹೊರಟನು. ದಾರಿಯಲ್ಲಿ ಆಮುದುಕಿ ಇವನ ವೃತ್ತಾಂತವ ನ್ನೆಲ್ಲಾ ತಿಳಿದು-ನಿನಗೆ ತಕ್ಕ ಕನ್ನಿಕೆಯೊಬ್ಬಳು ಇರುವಳು, ಅವಳನ್ನು ಪ್ರಪ್ಪ ಮಂಜರಿಯೆಂದು ಕರೆಯುವರು. ಅವಳು ಒಬ್ಬ ರಾಕ್ಷಸನ ಕೈಗೆ ಸಿಕ್ಕಿರು