೭೫ ವಳು, ನೀನು ಅವಳನ್ನು ಬಿಡಿಸಿಕೊಂಡುಬಂದು ಮದುವೆಯಾಗು, ನನ್ನ ಪ್ರಾಣವನ್ನು ಉಳಿಸಿದುದಕ್ಕೆ ಪ್ರತಿಯಾಗಿ ನಿನಗೆ ಆ ಕನ್ಯಾರತ್ನವನ್ನು ಸಾಧಿ ಸಲು ಮಂತ್ರಿಸಿದ ಒಂದು ಕೈಗೋಲನ್ನು ಕೊಡುವೆನು-ಎಂದು ಹೇಳುತಿ ರುವಷ್ಟರಲ್ಲಿಯೇ ಗುಡಿಸಲು ಸಿಕ್ಕಲು ಆ ರಾಜಕುಮಾರನಿಗೆ ತನ್ನ ಕೈಯ ಲ್ಲಾದ ಉಪಚಾರಗಳನ್ನೆಲ್ಲಾ ಮಾಡಿದಳು. ಬೆಳಗಾಯಿತು, ರಾಜಕುಮಾ ರನು ಊರಿಗೆ ಹೊರಡುವುದಕ್ಕೆ ಸಿದ್ಧನಾದನು, ಆ ಮುದುಕಿಯು ಮಂ ಪ್ರಸಿದ್ದವಾದ ಕೋಲನ್ನು ಕೊಟ್ಟು, ಅದರ ರಹಸ್ಯವನ್ನು ತಿಳಿಸಿ, ಊರದಾ ರಿಯನ್ನು ತೋರಿಸಿ, ರಾಜಕುಮಾರನನ್ನು ಆಶೀಶ್ವದಿಸಿ, ಕಳುಹಿಸಿಕೊಟ್ಟಳು. ೫೦ ಪುಷ್ಪ ಮಂಜರಿಯ ಕಥೆ-೨ ನೆಯ ಭಾಗ. ರಾಜಕುಮಾರನು ಊರನ್ನು ಸೇರಿ, ಚಿಂತೆಯಲ್ಲಿ ಮುಳುಗಿದ್ದ ತಾ ಯಿತಂದೆಗಳನ್ನೂ , ಇರಜನರನೂ ಸಂತೋಷಪಡಿಸಿದನು. ಮರುದಿನ, ರಾಜಕುಮಾರನು ತಂದೆಯಬಳಿಗೆ ಹೋಗಿ, ನಮಸ್ಕಾರಮಾಡಿ, ಕಾಡಿನಲ್ಲಿ ನಡೆದುದನ್ನೆಲ್ಲಾ ತಿಳಿಸಿ, ಪ್ರಷ್ಟ ಮಂಜರಿಯನ್ನು ಬಿಡಿಸಿ ಕರೆತರಲು ತನಗೆ ಅ ಪ್ರಣೆಯಾಗಬೇಕೆಂದು ಕೇಳಿಕೊಂಡನು, ಮುದುಕನಾದ ದೊರೆಗೆ ಮಗನು ಹೊರಟುಹೋಗುವುದು ಬಹು ಯೋಚನೆಗೆ ಕಾರಣವಾಗಿದ್ದರೂ ಮಗನಿಗೆ ಅಪ್ಪಣೆಯನ್ನು ಕೊಟ್ಟನು. ರಾಜಕುಮಾರನು ಅಲ್ಲಿಂದ ಹೊರಟು ಊರೂರು ದೇಶದೇಶಗಳ ನೈಲ್ಲ ಅಲೆದಲೆದು ಎಲ್ಲಿ ಯೂ ಪ್ರಪ್ಪಮಂಜರಿಯ ವೃತ್ತಾಂತವನ್ನು ತಿಳಿ ಯದೆ, ಬೆಟ್ಟ ಗುಟ್ಟಗಳಲ್ಲಿಯಾದರೂ ಪ್ರಪ್ಪಮಂಜರಿಯು ಸಿಕ್ಕಬಹುದೆಂದು ಕಾಡುಮಾರ್ಗವಾಗಿ ಹೊರಟನು, ಕಾಡಿನಲ್ಲೆಲ್ಲ ಅಲೆದು ಬೆಟ್ಟಗಳಲ್ಲೆಲ್ಲಾ ಹುಡುಕಿದರೂ ಪುಷ್ಪಮಂಜರಿಯು ಸಿಕ್ಕಲಿಲ್ಲ; ಸುತ್ತಿ ಸುತ್ತಿ ಕಂಗೆಟ್ಟು ಒ೦ ದು ಮರದ ಕೆಳಗೆ ಮಲಗಿಕೊಂಡನು. ಅಲ್ಲಿಗೆ ಒಬ್ಬ ವೃದ್ದನು ಬರಲು ರಾಜಕುಮಾರನು ಎಚ್ಚತ್ತು, ಈ ಮು ದುಕನಿಗೇನಾದರೂ ಪುಷ್ಪಮಂಜರಿಯ ವೃತ್ತಾಂತವು ತಿಳಿದಿರಬಹುದೊ
ಪುಟ:ಕಥಾವಳಿ.djvu/೯೦
ಗೋಚರ