೭! ೫೨, ಪುಷ್ಪಮಂಜರಿಯ ಕಥೆ-೪ ನೆಯ ಭಾಗ. ರಾಜಕುಮಾರನು ಮಾಯವಾದ ಆ ಕುದುರೆಯನ್ನು ಬಲವಾಗಿ ಹುಡು ಕಾಡಿದನು. ಎಲ್ಲಿಯೂ ಸಿಕ್ಕಲಿಲ್ಲ. ಆಗ ಅದುವರೆಗೂ ತಾನು ಪಟ್ಟ ಶ್ರಮ ವೆಲ್ಲವೂ ವ್ಯರ್ಥವಾಯಿತೆಂದು ಚಿಂತಿಸುತ ಕುಳಿತಿರುವಾಗ ತನ್ನ ಹತ್ತಿರದ ಲ್ಲಿದ್ದ ಆ ಕೈಗೊಲು ಕೆಳಕ್ಕೆ ಬಿದ್ದಿತು. ಆಗಲೆ ನೂರಾರು ಪಕ್ಷಿಗಳು ಬಂದುವ, ಪಕ್ಷಿರಾಜನಾದ ಗರುಡನು ಬಂದು, 'ನನಿ೦ದ ತಮಗೆ ಏನು ಆಗಬೇಕು ? ? ಎಂದು ಕೇಳಿದನು. ಆಗ ರಾಜಕುಮಾರನಿಗೆ, ಆ ಕೋಲನ್ನು ನೆಲಕ್ಕೆ ಗಟ್ಟಿಯಾಗಿ ಒಂ ದಾವೃತ್ತಿ ತಗುಲಿಸಿದರೆ, ಪಕ್ಷಿಗಳು ಬರುವುವು ಎಂದೂ, ಎರಡಾವೃತ್ತಿ ಹೊಡೆದರೆ ಮೃಗಗಳು ಬರುವ ವೆಂದೂ, ಮರಣ ವೃತ್ತಿ ಹೊಡೆದರೆ ಮೋಸ ಳೆಗಳು ಬರುವವೆಂದೂ, ಕಾಡಿನಲ್ಲಿ ಆ ಮುದುಕಿಯು ಅಂದು ಹೇಳಿದುದು ಜ್ಞಾಪಕಕ್ಕೆ ಬಂದಿತು, ಆಗ ಅವನು, ಎಲೈ ! ಪಕ್ಷಿರಾಜನೇ ! ನನ್ನ ಕುದು ರೆಯು ಎಲ್ಲೋ ಮಾಯವಾಗಿರುವುದು, ನೀನು ಹುಡುಕಿಕೊಟ್ಟರೆ, ನಿನ್ನ ಉಪಕಾರವನ್ನು ನಾನು ಎಂದಿಗೂ ಮರೆಯೆನು' ಎಂದನು. ಗರು ಡನು ಪಕ್ಷಿಸಮೂಹದೊಡನೆ ಹೊರಟು, ಸ್ವಲ್ಪ ಕಾಲದಲ್ಲಿಯೇ ಆ ಕುದು ರೆಯನ್ನು ಹಿಡಿದು ತಂದುಕೊಟ್ಟನು. ರಾಜಕುಮಾರನು ಗರುಡನಿಗೆ ವಂದಿಸಿ, ಆ ಕುದುರೆಯನ್ನು ಹಿಡಿದುಕೊಂಡು ಹೋಗಿ ರಾಕ್ಷಸಿಗೆ ಕೊ ಟೀನು, ಆ ರಾಕ್ಷಸಿಯು ಆಶ್ಚರ್ಯಪಟ್ಟಳು. ಮಾರನೆಯ ಬೆಳಗ್ಗೆ,ಕುದುರೆಯನ್ನು ತೆಗೆದುಕೊಂಡು ಹೊರಟನು. ಕುದುರೆಯು ಅಂದೂ ಅದೃಶ್ಯವಾಯಿತು, ಆಗ ಮೃಗಗಳ ಸಹಾಯದಿಂದ ಕುದುರೆಯನ್ನು ಪಡೆದು ರಾಕ್ಷಸಿಗೆ ಒಪ್ಪಿಸಿದನು. ಮರುದಿನ ಬೆಳಿಗ್ಗೆ ಮತ್ತೆ ಆ ಮಾಯದ ಕುದುರೆಯನ್ನು ತೆಗೆದು ಕೊಂಡುಹೋಗಲು ಸಿದ್ಧನಾಗಿದ್ದನು. ಅಗ ಪುಷ್ಪಮಂಜರಿಯು ಸಧ್ರನೆ ಬಂದು, ಇವನ ಕಿವಿಯಲ್ಲಿ, 'ಸಾಯಂಕಾಲ ನೀನು ಕುದುರೆಯೊಡನೆ ಬ೦ ದರೆ, ಈ ಕುದುರೆಯ ಮರಿಯನ್ನು ನನಗೆ ಕೊಡೆಂದು ರಾಕ್ಷಸಿಯನ್ನು ಬೇಡು,” ಎಂಬುದಾಗಿ ಹೇಳಿ, ಮಿಂಚಿನಂತೆ ಮಾಯವಾದಳು.ಆ ಮಾತು ಗಳನ್ನು ಕೇಳಿ, ಇನ್ನು ತನ್ನ ಕೆಲಸ ಕೈಗೂಡಿತೆಂದು ಹಿಗ್ಗಿ, ಆದಿನ ಮೊಸ
ಪುಟ:ಕಥಾವಳಿ.djvu/೯೪
ಗೋಚರ