ವಿಷಯಕ್ಕೆ ಹೋಗು

ಪುಟ:ಕಥಾವಳಿ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆd ಳೆಯ ಸಹಾಯದಿಂದ ಕುದುರೆಯನ್ನು ಹಿಡಿದು ತಂದನು, ಆಗ ರಾಕ್ಷ ಸಿಯು ಸಂತೋಷಪಟ್ಟು, 'ನಿನಗೆ ಏನು ಬೇಕು ? ಕೇಳು,” ಎಂದಳು. ರಾಜಕುಮಾರನು, ಇಲ್ಲಿಯೆ ಈ ಕುದುರೆಯ ಮರಿಯ ಕೆಲಸವನ್ನು ಮಾಡಿ ಕೊಂಡು ಇರುವೆನು ; ಅಪ್ಪಣೆಯಾಗಬೇಕು ” ಎಂದನು, ರಾಕ್ಷಸಿಯು ಒಪ್ಪಿ ಕುದುರೆಯ ಮರಿಯನ್ನು ಇವನ ವಶಕ್ಕೆ ಬಿಟ್ಟಳು. ಆ ಬೆಳಗ್ಗೆ, ರಾಜಕುಮಾರನು ಮರಿಯನ್ನು ನೋಡುತಿದ್ದಾಗ ಇವನ ಸಾಹಸವನ್ನೂ, ಇವನ ಧೈರ್ಯವನ್ನೂ, ಇವನ ರೂಪಲಾವಣ್ಯವನ ನೋಡಿ ಮೆಚ್ಚಿದ ಪ್ರಷ್ಟಮಂಜರಿಯು ಬಂದು “ ಬೇಗ ಕುದುರೆಯನ್ನೇರಿ, ನಾನೂ ಬರುವನು, ತಡಮಾಡಬೇಡಿ, ರಾಕ್ಷಸರೆಲ್ಲರೂ ನಿಮ್ಮನ್ನು ಕೊಲ್ಲಲು ಯೋಚಿಸುತ್ತಿರುವರು ' ಎಂದು ಕುದುರೆಯನ್ನು ತಾನೇ ಮುಂದಾಗಿ ಹತ್ತಿದಳು, ಒಡನೆಯೆ ರಾಜಕುಮಾರನ ಹತ್ತಿದನು, ಪ್ರಪ್ಪಮಂಜರಿಯು ಆ ಕುದುರೆಯನ್ನು ತಟ್ಟಲು, ಕುದುರೆಯು ಆಕಾಶಮಾರ್ಗವಾಗಿ ಹೊರಟಿತು. ಕಾವಲಿದ್ದ ರಾಕ್ಷಸರು, ಪುಷ್ಪಮಂಜರಿಯು ರಾಜಕುಮಾರ ನೊಡನೆ ಹೋಗುತ್ತಿದ್ದುದನ್ನು ನೋಡಿ, ಮಲಗಿದ್ದ ರಾಕ್ಷಸಾಧಿಪನನ್ನು ಎಚ್ಚರಿ ಸಲು ಬೊಬ್ಬೆ ಯಿಟ್ಟರು. ಅವನಿಗೆ ಗಾಢನಿದ್ರೆ, ಅವನು ಏಳುವುದರಲ್ಲಿ ಇವರು ನೂರುಗಾವದ ದೂರ ಹೋಗಿದ್ದರು. ಅವನೆದ್ದು ವರ್ತಮಾನ ನನ್ನು ಕೇಳುವುದರಲ್ಲಿ ಇವರು ತಮ್ಮ ಪಟ್ಟಣವನ್ನ ಸೇರಿದ್ದರು. ನಿದ್ರೆ ಗೆಟ್ಟು ಎದ್ದ ರಾಕ್ಷಸನಿಗೆ ಕೋಪಬಂದು, ಕಾವಲಿದ್ದ ರಾಕ್ಷಸರನ್ನೆಲ್ಲಾ ಕಂದನು ಪುಷ್ಪಮಂಜರಿ ಯು ಹೊರಟುಹೋದಳೆಂಬ ದುಃಖದಲ್ಲಿ ತಾನೂ ಪ್ರಾಣವನ್ನು ಬಿಟ್ಟನು. ಮಗನು ಸತ್ತನೆಂದು ಆ ರಾಕ್ಷಸಿಯ ಸತ್ತಳು. - ಇತ್ತಲಾಗಿ ರಾಜಕುಮಾರನ ವೃದ್ದ ಮಾತಾಪಿತೃಗಳು ಬಹುಕಾಲ ಅಗಲಿದ್ದ ಮಗನನ್ನೂ ಬಲು ಚಲುವೆಯಾದ ಪುಷ್ಪಮಂಜರಿಯನ್ನೂ ನೋಡಿ ಸಂತೋಷಗೊಂಡರು. ಅಂದು ಕಾಡಿನಲ್ಲಿ ಕಂಡ ಮುದುಕಿಯೇ ಪ್ರಪ್ಪ ಮಂಚರಿಯ ತಾಯಿ, ಮಗಳು ಬಂದ ವರ್ತಮಾನವನ್ನು ಕೇಳಿ, ಅವಳ ಬಂದಳು. ಪುಷ್ಪಮಂಜರಿಯನ್ನು ರಾಜಕುಮಾರನು ಮದುವೆಯಾಗಿ ಬಹುಕಾಲ ಸುಖವಾಗಿದ್ದನು.