ಪುಟ:ಕಥಾಸಂಗ್ರಹ ಸಂಪುಟ ೧.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ 9t ಸಹ ಬೆಂಡುಮರದ ಚೌಕಿನಲ್ಲಿ ಕುಳಿತಿದ್ದುದರಿಂದ ತೇಲುತ್ತಾ ಅಲೆಗಳಿಂದ ಬಡಿಸಿ ಕೊಳ್ಳುತ್ತಾ ಒಬ್ಬೊಬ್ಬರೊಂದೊಂದು ಕಡೆಗಾಗಿ ಅಲೆಯ ಹೊಯಿಲಿನಿಂದ ಜರ್ಝ ರೀಭೂತವಾದ ಅಂಗಗಳುಳ್ಳವರಾಗಿ ಸಿಂಹಳದೀಪದ ತಡಿಯನ್ನು ಸೇರಿ ಮೂರ್ಛಿ ತರಾಗಿ ಬಿದ್ದರು. ಇತ್ತ ಕಡೆಯ ಉಕ್ಕಡದ ಯಜಮಾನನು ಬಂದು ಇಳಿದಿದ್ದ ದಂಡನ್ನು ಕಾಣದೆ ಸಿಂಹವಿಕ್ರಮರಾಜನಿಗೆ ಈ ಸುದ್ದಿಯನ್ನು ಕೊಡಲು ಆತನು ಮಹಾ ಸಂಭ್ರಮದಿಂದ ಧ್ವಜಸ್ತಂಭವನ್ನೇರಿ ಕತ್ತಿನಲ್ಲಿ ಇದ್ದ ಶಿಖಿಯ ಸರವನ್ನು ಆ ಕಂಬಕ್ಕೆ ತಗಲಹಾಕಿ ದೃಷ್ಟಿಯ ಕೊಳವೆಯನ್ನಿಟ್ಟು ಕೊಂಡು ನೋಡಿ ಸೈನ್ಯವಿಲ್ಲದಿ ರುವದನ್ನು ತಿಳಿದು ಸಂತೋಷವೆಂಬ ಸಮುದ್ರದಲ್ಲಿ ಮುಳುಗಿ ಸರವನ್ನು ಅಲ್ಲಿಯೇ ಮರೆತು ಕೆಳಗೆ ಬಂದನು. ಆ ಮೇಲೆ ಆ ಸರವನ್ನು ಒಂದು ಕಾಗೆಯು ಕಚ್ಚಿ ಕೊಂಡು ಹಾರಿ ಬಂದು ಕಡಲ ದಡದಲ್ಲಿ ಮೂರ್ಛಿತನಾಗಿ ಕೈಕಾಲು ಆಲಗದೆ ಬಿದ್ದಿ ರುವ ಚಂಡಪರಾಕ್ರಮಿಯನ್ನು ಕಂಡು ಹೆಣವೆಂದು ತಿಳಿದು ಅವನ ಮೇಲೆ ಬಂದು ಕುಳಿತುಕೊಂಡು ತನ್ನ ಕೊಕ್ಕಿನಿಂದ ಕುಕ್ಕಲು ಅವನು ಸ್ವಲ್ಪ ಅಲುಗಾಡಲಾಗಿ ಅದು ಬೆದರಿ ಸರವನ್ನು ಅವನ ಮೈಮೇಲೆಯೇ ಬಿಟ್ಟು ಹಾರಿಹೋಯಿತು, ಇತ್ತಲಾ ಸಿಂಹವಿಕ್ರಮರಾಜನು ಸರವನ್ನು ನೆನಸಿಕೊಂಡು ಧ್ವಜಸ್ತಂಭವನ್ನು ನೋಡಿಸಲಾಗಿ ಅದು ಅಲ್ಲಿ ಇಲ್ಲದೆ ಇದ್ದುದರಿಂದ ತಳವಾರರ ಗೊತ್ತು ಗಾರನನ್ನು ಕರಿಸಿ ಈ ಸರ ವನ್ನು ಕದ್ದೊಯ್ದ ವನಾರೋ ಅವನನ್ನು ಗೊತ್ತು ಮಾಡಿ ಹಿಡಿದು ಅವನ ಮೊಣಕಾಲು ಗಳೆರಡನ್ನೂ ತುಂಡುಮಾಡಿ ನಾಲ್ಕು ಬೀದಿ ಕೂಡಿದ ಮಧ್ಯಸ್ಥಳದಲ್ಲಿ ಕೆಡವಿ ಆ ಸರ. ವನ್ನು ತೆಗೆದುಕೊಂಡು ಬರುವುದೆಂದು ಅಪ್ಪಣೆಯನ್ನಿತ್ತನು. ಅವರು ಅಲ್ಲಲ್ಲಿ ಹುಡು ಕುತ್ತಾ ಬಂದು ಸಮುದ್ರ ತೀರದಲ್ಲಿ ಜ್ಞಾನವಿಲ್ಲದೆ ಬಿದ್ದಿರುವ ಚಂಡಪರಾಕ್ರಮಿ ಯನೂ ಅವನ ಮೇಲಿರುವ ಶಿಖಿಯ ಸರವನೂ ಕಂಡು 'ಇವನೇ ಕಳ್ಳನೆಂದು ಬಗೆದು ಅವನ ಎರಡು ಮೊಣಕಾಲುಗಳನ್ನೂ ಕತ್ತರಿಸಿ ಅವನ ಎರಡು ತೊಡೆಗಳನ್ನು ಕಾಸಿದ ಎಣ್ಣೆಯಲ್ಲಿ ಅದ್ದಿ ಅವನನ್ನು ನಾಲ್ಕು ಬೀದಿ ಕೂಡಿದ ದಾರಿಯಲ್ಲಿ ಕೆಡವಿ ಸರವನ್ನು ತಂದು ದೊರೆಗೆ ಒಪ್ಪಿಸಿದರು. ಬಳಿಕ ಆ ಊರಲ್ಲಿ ಇರುವ ಒಬ್ಬ ಅಡುಗೂಳಜ್ಜಿ ಯು ದಾರಿಯಲ್ಲಿ ಹೋಗುತ್ತಾ ಈ ಚಂಡಪರಾಕ್ರಮಿಯನ್ನು ಕಂಡು ಇಂಥಾ ರಾಜ ಕುಮಾರನಿಗೆ ಇಂಥಾ ದುರ್ದಶೆಯು ಬಂದಿತಲ್ಲಾ ! ಎಂದು ಕನಿಕರದಿಂದ ಅವನನ್ನು ಕೂಲಿ ಆಳುಗಳ ಕೈಯಿಂದ ಮನೆಗೆ ತೆಗೆಸಿಕೊಂಡು ಹೋಗಿ ಶೈತ್ಯೋಪಚಾರಗಳನ್ನು ಮಾಡಲು ಸ್ವಲ್ಪ ಚೇತರಿಸಿಕೊಂಡನು. ಆ ಬಳಿಕ ಅನ್ನೋದಕಗಳನ್ನೂ ಉಡುವು ದಕ್ಕೆ ಬಟ್ಟೆ ಯನ್ನೂ ಕೊಟ್ಟು ಕೊಂಡು ಆರೈಕೆಮಾಡುತ್ತಾ ತನ್ನ ಮನೆಯಲ್ಲಿ ಇರಿಸಿ ಕೊಂಡಿದ್ದಳು. ಇತ್ತಲಾ ಕಿರಾತಸೇನಾಧಿಪತಿಯು ಮರ್ಛತಿಳಿದು ಮಹಾ ವ್ಯಸನ ಗೊಂಡು ಹರಿದತ್ತನೂ ಚಂಡಪರಾಕ್ರಮಿಯ ಏನಾದರೋ ಎಂದು ದುಃಖಪಡುತ್ತಾ ಅವರನ್ನು ಹುಡುಕುತ್ತಾ ಆ ಸಿಂಹಳದೀಪದಲ್ಲಿ ತಿರುಗುತ್ತಿರುವಾಗ್ಗೆ ಒಂದು ಪರ್ವ ತದ ಬಳಿಯಲ್ಲಿ ಇರುವ ತೋಟದ ಕೊಳದ ಮೆಟ್ಟಿನ ಮೇಲೆ ಕುಳಿತುಕೊಂಡು ದೇವರ ಧ್ಯಾನವನ್ನು ಮಾಡುತ್ತಿದ್ದ ಹರಿದತ್ತ ನನ್ನು ಕಂಡು ಮಹಾ ಸಂತೋಷದಿಂದ ಅವನೆ