KANARESE SELECTIONS-PART I ಹುಟ್ಟಿದವನು ರಣದಲ್ಲಿ ಶತ್ರುಗಳನ್ನು ಜಯಿಸಿದರೆ ರಾಜ್ಯ ಲಾಭವಾಗುವುದು ಹಗೆಗೆ ಳಿಂದ ಮಡಿದರೆ ವೀರಸ್ವರ್ಗ ಉಂಟಾಗುವುದು ಎಂಬಿವುಗಳನ್ನು ಅರಿತು ಜಾಣರಾದ. ವರು ಗರ್ವದಿಂದ ಬೆರತಿರರು, ಸಕಲವನ್ನೂ ತಿಳಿದವರಿಗೆ ವಿಶೇಷವಾಗಿ ಬರೆಯತಕ್ಕ ಪ್ರಕೃತವಿಲ್ಲವೆಂದೂ ಬರೆದಿರುವ ಗಂಭೀರಾಭಿಪ್ರಾಯವನ್ನು ಪರ್ಯಾಲೋಚಿಸಿ ಚಿತ್ರ ಪಟವ ನೋಡಿ ಈ ರೂಪರೇಖೆಗಳುಳ್ಳವನು ಚಕ್ರವರ್ತಿಯಾಗುವನೆಂದೆಣಿಸಿ ಆ ಪಟ ವನ್ನು ತೆಗೆದು ಕೊಂಡು ಸಂತೋಷದಿಂದ ರಾಣಿವಾಸಕ್ಕೆ ಹೋಗಿ ಅದನ್ನು ತನ್ನ ಪಟ್ಟದ. ರಾಣಿಗೂ ಮದುವೆಯಾಗದೆ ಪ್ರೌಢಿಯಾಗಿರುವ ಆನಂದವಲ್ಲಿ ಎಂಬ ತನ್ನ ಮಗಳಿಗೆ ತೋರಿಸಿ ಈತನು ತನ್ನ ಮೇಲೆ ಯುದ್ಧಕ್ಕೆ ಹೊರಟು ಬಂದಿರುವನು. ಈತನು ಆನಂದ ವಲ್ಲಿಗೆ ಪತಿಯಾದರೆ ನಮ್ಮ ಭಾಗ್ಯಕ್ಕೆ ಎಣೆ ಇಲ್ಲವೆಂದು ಹೇಳಿದನು. ರಾಣಿಯುಹಾಗೇ ಸರಿ ಎಂದು ಒಪ್ಪಿಕೊಂಡಳು. ಆನಂದವಲ್ಲಿಯು--ನಾನು ಈ ಚಿತ್ರಪಟವನ್ನು ನೋಡಿದ ಕ್ಷಣದಲ್ಲಿ ಇವನೇ ನನ್ನ ಪತಿ ಎಂದು ಮನಸ್ಸಿನಲ್ಲಿ ನಿಶ್ಚಯಿಸಿರುವೆನು. ಆದರೆ ನಿಮ್ಮ ಮೇಲೆ ಹಗೆತನವನ್ನಿ ಟ್ಟು ಯುದ್ದ ಕ್ಕಾಗಿ ಬರುವವನಿಗೆ ಪುತ್ರಿಯನ್ನು ಕೊಡುವೆನೆಂದು ನೀವು ಹೇಳಿ ಕಳುಹಿಸುವುದು ಹೀಯಾಳಿಕೆಯಲ್ಲವೇ ? ಎಂದು ಕೇಳಿ ದಳು, ಅದಕ್ಕೆ ಸಿಂಹವಿಕ್ರಮರಾಜನು-ನನಗೆ ಆ ಯೋಚನೆ ಇಲ್ಲ, ಹೊಟ್ಟೆ ಯಲ್ಲಿ ಹುಟ್ಟಿದ ಮಗಳನ್ನು ತಕ್ಕ ವರನಿಗೆ ದಾನವನ್ನು ಮಾಡಿದರೆ ಅದಕ್ಕಿಂತಲೂ ಹೆಚ್ಚಾದ. ಸಂತೋಷವು ಹೆತ್ತವನಿಗೆ ಮತ್ತಾವುದುಂಟೆಂದು ಹೇಳಿ ಆ ಸ್ಥಾನಕ್ಕೆ ಬಂದು ಜೋಯಿಸ ರನ್ನು ಕರಿಸಿ ಲಗ್ನ ಪತ್ರಿಕೆಯನ್ನು ಬರೆಯಿಸಿ ನಿಯೋಗಿಯ ಕೈಯಲ್ಲಿ ಕೊಟ್ಟು ಚಂಡಪರಾ ಕ್ರಮಿಯ ಬಳಿಗೆ ಕಳುಹಿಸಲು ಆ ನಿಯೋಗಿಯು ಬಂದು ಸಮಯೋಚಿತವಾಗಿ ಕಂಡು ಲಗ್ನ ಪತ್ರಿಕೆಯನ್ನು ಕೊಟ್ಟನು. ಚಂಡಪರಾಕ್ರಮಿಯು ನೋಡಿ-ವಿಹಿತವೇ ಸರಿ; ಆದರೆ ನಾವು ತಮ್ಮ ಸಂಗಡ ಯುದ್ಧವನ್ನು ಮಾಡಿ ಬದುಕಿದ ಮೇಲಷ್ಟೆ ವಿವಾಹದ ಯೋಚ ನೆಯು ಎಂದು ಹೇಳಿ ಬಹುಮಾನವನ್ನು ಮಾಡಿ ಕಳುಹಿಸಲು ನಿಯೋಗಿಯು ಹಿಂದಿ ರಿಗಿ ಬಂದು ಈ ವಿವರವನ್ನು ತಿಳಿಸಿದನು. ಆಗ ಸಿಂಹವಿಕ್ರಮರಾಜನು ಕೋಪಿಸಿ ಕೊಂಡು ತನ್ನ ಕಡೆಯ ಉಕ್ಕಡದ ಯಜಮಾನನಿಗೆ-ಜಂಬೂದ್ವೀಪದ ಯುವರಾಜ ಚಂಡಪರಾಕ್ರಮಿಯನ್ನು ನಿನ್ನ ಉಕ್ಕಡದಿಂದ ಮುಂದಕ್ಕೆ ಬಿಟ್ಟರೆ ನಿನ್ನನ್ನು ಸಿಗಿಸಿ ತೋರಣವನ್ನು ಕಟ್ಟಿ ಸುವೆನೆಂದು ಅಪ್ಪಣೆಯನ್ನು ಕೊಟ್ಟು ತಾನೂ ಯುದ್ಧಕ್ಕೆ ಸನ್ನ ದ್ಧನಾಗಿದ್ದನು. - ಇತ್ತಲಾ ಚಂಡಪರಾಕ್ರಮಿಯು ಸಕಲ ಸೇನಾಸಮೇತನಾಗಿ ಬಂದು ಸಮುದ್ರ ತೀರದಲ್ಲಿ ಒಂದು ಆವೆಯು ತನ್ನ ಮುಖವನ್ನೊ ಳಸರಿಸಿಕೊಂಡು ದಡದಲ್ಲಿ. ಬಿಸಿಲ ಕಾಸಿಕೊಂಡಿರಲು ಅದನ್ನು ಆವೆ ಎಂದರಿಯದೆ ಆಕಾರಸಾಮ್ಯದಿಂದ ಕರಿಯ ಅರೆಯ ಕಲ್ಲೆ೦ದು ಎಣಿಸಿ ಸೈನ್ಯವನ್ನು ಅದರ ಮೇಲೆ ಇಳಿಸಿದನು. ಕೆಲವು ಹೊತ್ತಿನ ಮೇಲೆ ಸೈನ್ಯದವರು ಅಡಿಗೆ ಮಾಡುವ ಬೆಂಕಿಯ ಉಷ್ಣವನ್ನೂ ಬಿಸಿಲಿನ ತಾಪವನ್ನೂ ತಾಳಲಾರದೆ ಆ ಮಕರವು ಕಡಲಿಗೆ ನೆಗೆಯಲು ದಂಡೆಲ್ಲಾ ಸಮುದ್ರದಲ್ಲಿ ಬಿದ್ದು ಮುಳುಗಿಹೋಯಿತು. ಹರಿದತ್ತನೂ ಕಿರಾತಸೇನಾಧಿಪತಿಯ ಚಂಡಪರಾಕ್ರಮಿಯ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೦೨
ಗೋಚರ