ಪುಟ:ಕಥಾಸಂಗ್ರಹ ಸಂಪುಟ ೧.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ 89 ಒಡೆಯನೇ ಪರರಾಜರು ಬರೆದ ಪತ್ರಿಕೆಗೆ ಪ್ರತಿಪತ್ರಿಕೆಯನ್ನೀಯದೆ ಈರೀತಿಯಿಂದ ಕೋಪಿಸುವುದು ರಾಜನೀತಿಗೆ ಬಹಳ ವಿರೋಧವಾಗಿರುವದು, ದೂತರನ್ನು ದೂಡಿಸು ವುದು ಒಂದು ದೊಡ್ಡ ಕೆಲಸವೇ ? ನಡೆದುಹೋದ ಮಾತಿಗೆ ನುಡಿದು ಫಲವಿಲ್ಲ, ಇನ್ನು ಮೇಲಾದರೂ ಸೇವಕನ ಬಿನ್ನಹವನ್ನು ಮನ್ನಿಸಿ ಜಂಬೂದ್ವೀಪದ ಯುವರಾ ಜನು ಬರೆದ ಕಾಗದಕ್ಕೆ ಪ್ರತ್ಯುತ್ತರವನ್ನು ಬರೆಯಿಸಿ ಚಾರರ ಕೈಯಲ್ಲಿ ಕೊಟ್ಟು ಕಳುಹಿಸಬೇಕೆಂದನು. `ಸಿಂಹವಿಕ್ರಮನು ಕ್ಷಣಮಾತ್ರ ಯೋಚಿಸಿ ಪಶ್ಚಾದ್ವಿವೇಕ ಹುಟ್ಟಿ ಪ್ರತಿಪತ್ರವನ್ನು ಬರೆಯಿಸಿ ದೂತರ ಕೈಯಲ್ಲಿ ಕೊಟ್ಟು ಕಳುಹಿಸಿದನು. ಅವರು ಬಂದು ಚಂಡಪರಾಕ್ರಮಿಯನ್ನು ಕಂಡು ಲೇಖನವನ್ನು ಕೊಟ್ಟು ಈ ಚಂಡಪರಾಕ್ರ ಮಿಯ ಪಾದಾದಿಕೇಶಪರಂತರದಲ್ಲಿರುವ ರಾಜಲಕ್ಷಣಗಳನ್ನೂ ಲಾವಣವನ್ನೂ ತೇಜಸ್ಸನ್ನೂ ನೋಡಿ ಈತನು ಮನುಜಮಾತ್ರನಲ್ಲಿ ಆವತಾರಪುರುಷನೆಂದು ಅವನ ಅಮಾನುಷವೈಭವಕ್ಕೆ ಮೆಚ್ಚಿ ಬೆಚ್ಚಿ ಬೆರಗಾಗಿ ನೋಡುತ್ತಿದ್ದರು ಚಂಡಪರಾಕ್ರ ಮಿಯು ಅವರಿತ್ತ ಲೇಖನವನ್ನು ರಾಯಸದವರ ಕಡೆಯವರಿಂದ ಓದಿಸಲು ಅದರಲ್ಲಿದ್ದ ಅಭಿಪ್ರಾಯವೇನಂದರೆ--ಸ್ವಸ್ತಿ ; ಸಮಸ್ತ ಸಾಮಂತ ರಿಪುಚಕ್ರ ಮಕುಟತಟ ಘಟಿತ ಮಾಣಿಕ್ಯ ರತ್ನ ಪ್ರಭಾ ವಿರಾಜಿತ ಪಾದಪೀಠರಾದ ಪ್ರತಾಪಾದಿತ್ಯ ಪ್ರತಾಪಿತ ಪ್ರತ್ಯರ್ಥಿ ಸೃಢೀಪತಿ ಮಂಡಲರಾದ ಕುಶಲ ಮತಿಯುತ ಕುಶಲವತಿಯ ಕುಶಲಶೇಖರ ಸಾರ್ವಭೌಮ ಸುಕುಮಾರ ಯುವರಾಜ ಚಂಡಪರಾಕ್ರಮಿಗಳಿಗೆ ಸಿಂಹಳದೀಪ ಸಾರ್ವಭೌಮ ಸಿಂಹವಿಕ್ರಮರಾಜರು ಶ್ರುತಪಡಿಸುವುದೇನಂದರೆ--ನೀವು ಬರೆದ ಲೇಖನಾಭಿಪ್ರಾಯವು ನಮಗೆ ಮನವರಿಕೆಯಾದುದು, ದ್ವೀಪಾಂತರ ಚಕ್ರವರ್ತಿ ಕಳಭಕ೦ಠೀರವರೆಂಬ ಬಿರುದಿನ ಪೆಂಡೆಯವಂ ಎಡಗಾಲೊಳು ಧರಿಸಿರ್ಪೆಮ್ಮ ವಿಕ್ರಮ ವನ್ನು ಅರಿದೂ ನಮ್ಮಿ೦ದ ಕಪ್ಪವನ್ನು ಕೊಳ್ಳುವುದಕ್ಕೂ ನಮ್ಮೊಡನೆ ಕೊಳುಗುಳದಲ್ಲಿ ಕೈ ಮಾಡುವುದಕ್ಕೂ ಬಯಿಸಿದ ನಿಮ್ಮ ಕಲ್ಲೆದೆಯ ಕಟು ಧೈರ್ಯಕ್ಕೆ ಮೆಚ್ಚಿ ಪ್ರತ್ಯು ತರವನ್ನು ಕೊಡುವುದೇನಂದರೆ--ಕಪ್ಪವನ್ನು ಕೊಡದೆ ನಿಮ್ಮೊಡನೆ ಕೆಳೆಯಿಂದಿರುವು ದಕ್ಕೆ ನಮಗೆ ಪರಮ ಕುತೂಹಲ ಉಂಟು ಅದು ನಿಮಗೆ ಒಡಂಬಡದೆ ಇದ್ದರೆ ಆಗ ತ್ಯವಾಗಿ ಯುದ್ಧಕ್ಕೆ ದಯಮಾಡಬಹುದು, ನಾವು ಸನ್ನದ್ಧರಾಗಿರುವೆವು. ಹೀಗೆ ಬರೆದಿರುವ ಅಭಿಪ್ರಾಯಾರ್ಧವನ್ನು ಕೇಳಿ ಹರಿದತ್ತನ ಕಡೆಯಿಂದ ಪ್ರತ್ಯುತ್ತರವನ್ನು ಬರೆಯಿಸಿ ವೀಳ್ಯ ಸಹಿತವಾಗಿ ದೂತರ ಕೈಯ್ಯಲ್ಲಿ ಕೊಟ್ಟು ಕಳುಹಿಸಲು ಆ ದೂತರು ಅತಿ ಜಾಣರಾದುದರಿಂದ ಆ ಯುವರಾಜನ ಭಾವಚಿತ್ರವನ್ನು ಬರೆದು ಕೊಂಡು ತನ್ನೊಡೆಯನ ಒಡೋಲಗಕ್ಕೆ ಬಂದು ಚಿತ್ರಪಟಸಹಿತವಾಗಿ ಕಾಗದವನ್ನು ಕೊಟ್ಟು ಪೊಡಮಟ್ಟರು. ಆಗ ಸಿಂಹವಿಕ್ರಮರಾಜನು ಪತ್ರಿಕೆಯನ್ನು ಓದಿಸಿ ಕೇಳುವಲ್ಲಿ ಅದರೊಳಗಿದ್ದ ಮುಖ್ಯಾರ್ಧವೇನಂದರೆ--ಲೋಕಕರ್ತನಾದ ದೇವರು ಯಾರನ್ನಾ ದರೂ ಯಾವಜ್ಜೆವವೂ ಏಕಪ್ರಕಾರವಾಗಿ ಇರಿಸುವುದಿಲ್ಲ, ಇಲಿಯನ್ನು ಹುಲಿಯಾಗಿ ಮಾಡುವನು, ಹುಲಿಯನ್ನು ಇಲಿಯಾಗಿ ಮಾಡುವನು, ಮತ್ತು ಯುದ್ಧದಲ್ಲಿ ಜಯಪ ರಾಜಯಗಳು ದೈವಾಧೀನವು, ಮತ್ತು ಶರೀರವು ಅಸ್ಥಿರವು, ಕ್ಷತ್ರಿಯರೊಳಗೆ