KANARESE SELECTIONS-PART I ಅಷ್ಟದಿಕಾಲಕರೊಡನೆಯ ಅಷ್ಟವಸುಗಳು ಸಪ್ತಮರುತ್ತುಗಳು ಏಕಾದಶರುದ್ರರು ದ್ವಾದಶಾದಿತ್ಯರು ಸಪ್ತರ್ಷಿಗಳು ಮೊದಲಾದವರೊಡನೆಯೂ ಒಡೋಲಗವನ್ನು ಕೊಡುತ್ತಿರುವ ದೇವೇಂದ್ರನಂತೆ ಪ್ರಧಾನಿಗಳಿಂದಲೂ ರಾಯಸದವರಿಂದಲೂ ಕರಣಿಕ ರುಗಳಿಂದಲೂ ದಳವಾಯಿಗಳಿಂದಲೂ ನಿಯೋಗಿಗಳಿಂದಲೂ ನ್ಯಾಯಾಧಿಪತಿಗಳಿ೦ ದಲೂ ಬೊಕ್ಕಸದ ಅಧಿಕಾರಿಗಳಿಂದಲೂ ಕೂಡಿ ಒಡೋಲಗವನ್ನು ಕೊಡುತ್ತಿರುವ ಸಿಂಹವಿಕ್ರಮರಾಜನನ್ನು ಕಂಡು ತಲೆಬಾಗಿ ತಂದ ಲೇಖನವನ್ನೋ ಪ್ಪಿಸಿ ಕೈಕಟ್ಟಿ ಕೊಂಡು ನಿಂತಿರುವಲ್ಲಿ ಸಿಂಹವಿಕ್ರಮನು ಆ ಲೇಖನವನ್ನು ತೆಗೆದು ರಾಯಸದವನ ಕೈಯಲ್ಲಿ ಕೊಡಲು ಆತನು ಓದುತ್ತಿದ್ದನು. ಏನಂದರೆ-ಸ್ವಸ್ತಿ; ಶ್ರೀಮದಖಂಡ ಸಿಂಹಳದೀಪ ಸಾರ್ವಭೌಮರಾದ ಸಂಧಿ ವಿಗ್ರಹ ಯಾನ ಆಸನ ದೈಧೀಭಾವ ಸಮಾ ಶ್ರಯಣಗಳೆಂಬ ಆರು ವಿಧವಾದ ರಾಜಕಾರ್ಯದೋಳ್ಳುರೀಣರಾದ ಸಿಂಹವಿಕ್ರಮ ರಾಜರಿಗೆ-ಜಂಬೂದ್ವೀಪದ ಸಾರ್ವಭೌಮರಾದ ಕುಶಲವತಿಯ ಕುಶಲಶೇಖರ ರಾಜನ ಸುಕುಮಾರ ಚಂಡಪರಾಕ್ರಮಿ ಎಂಬ ಯುವರಾಜರು ಬಿನ್ನವಿಸುವುದೇ ನಂದರೆ--ನಾವು ಸಮಸ್ತ ದಿಗ್ವಿಜಯಾರ್ಧವಾಗಿ ತಂದೆಗಳ ಉತ್ತರವನ್ನು ಹೊಂದಿ ಸೇನಾಸಮೇತರಾಗಿ ಹೊರಡಲು ಈ ಜಂಬೂದ್ವೀಪದ ಮಂಡಲಾಧಿಪತಿಗಳೆಲ್ಲರೂ ನಮ್ಮ ಪ್ರತಾಪವನ್ನು ಕಂಡು ಅಂಜಿ ಕೊಳುಗುಳಕ್ಕೆ ನಿಲ್ಲದೆ ಕಪ್ಪವನ್ನು ನಿಗದಿ ಮಾಡಿಕೊಂಡು ನಮ್ಮೊಡನೆ ಸ್ನೇಹವನ್ನು ಬಳಸಿ ತಮ್ಮ ತಮ್ಮ ಸೇನಾಸಮೇತರಾಗಿ ನಮಗೆ ಸಹಾಯವನ್ನು ಮಾಡುವುದಕ್ಕೆ ಬಂದಿದ್ದಾರೆ. ತಮಗೂ ನಮ್ಮ ಪ್ರತಾಪಾ ದಿಗಳು ಪರೋಕ ವಾಗಿ ವೇದವಾಗಿರಬಹುದು ಆದುದರಿಂದ ತಮಾ ಪ ಮಂತ್ರಿಗ ಳೊಡನೆ ಚೆನ್ನಾಗಿ ಮಂತ್ರಾಲೋಚನೆಯನ್ನು ಮಾಡಿ ನಮ್ಮೊಡನೆ ಸ್ನೇಹಿಸಿ ಕಪ್ಪವನ್ನು ಕೊಡುವುದಕ್ಕಾಗಲಿ ಕಣದಲ್ಲಿ ಕೊಳುಗುಳವನ್ನು ಈಯುವುದಕ್ಕಾಗಲಿ ಪ್ರತ್ಯುತ್ತರ ವುದು. ಈಪ್ರಕಾರವಾಗಿ ಬರೆದಿರುವ ಲೇಖನದ ಒಕ್ಕಣೆಯನ್ನು ಕೇಳಿ ಸಿಂಹವಿಕ್ರಮ ರಾಜನು ಪ್ರಳಯ ಕಾಲದ ಮುಕ್ಕಣ್ಣನಂತೆ ಕಣ್ಣುಗಳಿಂದ ಕಿಡಿಗಳನ್ನು ಉದರಿಸುತ್ತಾ ಖಾಸೆಯನ್ನು ಕುಣಿಸುತ್ತಾ ಕೋಪದಿಂದ ಪರವಶನಾಗಿ ಹಿಂದು ಮುಂದು ಕಾಣದೆ ದೂತರನ್ನು ಕುತ್ತಿಗೆ ಹಿಡಿದು ದೊಬ್ಬಿಸಲು ಅವರು ಹಿಂದಿರುಗಿ ಬಂದು ತಮ್ಮೊಡೆ ಯನಿಗೆ ಪೊಡಮಟ್ಟು ನಡೆದ ವಿವರವನ್ನು ಬಿನ್ನವಿಸಿದರು, ಅದನ್ನು ಕೇಳಿ ಚಂಡಪರಾ ಕ್ರಮಿಯು ಹರಿದತ್ತ ನನ್ನು ನೋಡಿ ಮದಾಂಧರಾದವರಿಗೆ ಮತಿಯುತರಾದವರ ಮತವು ಮನಕೊಡಂಬಡದು, ಮರದ ಡೊಂಕನ್ನು ಬೆಂಕಿಯು ತಿದ್ದುವುದೆಂಬ ನಾಣ್ಣುಡಿ ತಪ್ಪುವುದೇ ? ದಂಡು ಮುಂದೆ ನಡೆಯಲೆಂದು ಅಪ್ಪಣೆಯನ್ನು ಕೊಟ್ಟು ಆ ದಿನ ಒಂದು ಗಾವುದವನ್ನು ಬಂದು ತೃಣ ಜಲ ಕಾಷ್ಠ ಸಮೃದ್ದವಾದ ಒಂದು ತಾಣದಲ್ಲಿ ಪಾಳಯವನ್ನಿಳಿಸಿ ಪಚ್ಚೆಯ ಗುಡಾರದಲ್ಲಿ ಬೆಂಡಿನ ಕಂಬವನೊರಗಿಕೊಂಡು ಓಲಗವನ್ನು ಕೊಡುತ್ತಲಿದ್ದನು. ಇತ್ತಲಾ ಸಿಂಹಳದೀಪದಲ್ಲಿ ಸಿಂಹವಿಕ್ರಮರಾಜನಿಗೆ ಮುನಿಸು ಇಳಿದುದನ್ನು ಕಂಡು ಮುಖ್ಯ ಮಂತ್ರಿಯಾದ ಸುಮನೀಷನೆಂಬವನೆದ್ದು ಕೈಮುಗಿದು-ಸ್ವಾಮಿ |
ಪುಟ:ಕಥಾಸಂಗ್ರಹ ಸಂಪುಟ ೧.djvu/೧೦೦
ಗೋಚರ