ಕಥಾಸಂಗ್ರಹ-೧ನೆಯ ಭಾಗ ಹಡಗುಗಳು ಕಡಲ ತಡಿಯಲ್ಲಿ ಸಿದ್ಧವಾಗಿರುವುದನ್ನು ನೋಡಿ ರಾಜಕುಮಾರನು ಹರಿ ದತ್ತನನ್ನು ಕುರಿತು-ನೀವು ಮುಂದೆ ಏನನ್ನುತ್ತೀರಿ ? ಎಂದು ಕೇಳಿದನು. ಆಗ ರಾಜಾಜ್ಞೆಯಾದಂತೆ ನಡೆಯುವುದೇ ಸೇವಕರಿಗೆ ಮುಖ್ಯ ಧರ್ಮವಾ ದಾದ್ರೂ ನನ್ನ ಬುದ್ದಿಗೆ ತೋರಿದುದನ್ನು ನಿಮ್ಮಡಿಯಲ್ಲಿ ಅರಿಕೆ ಮಾಡು ವೆನು. ಅದರ ಯುಕ್ತಾಯುಕ್ತವನ್ನು ವಿಚಾರಮಾಡಿ ಅಪ್ಪಣೆ ಕೊಟ್ಟಂತೆ ನಾವೆಲ್ಲರೂ ನಡೆಯು ತೇವೆ. ಲೋಕದಲ್ಲಿ ಕಲಿಯಾದವನಿಗೆ ಯಾವ ಕೆಲಸವು ಅಗಾಧವು ? ಪ್ರಯತ್ನ ಶಾ ಲಿಗೆ ಯಾವ ದೇಶ ದೂರವು ? ವಿದ್ಯಾವಂತನಿಗೆ ಯಾವುದು ಪರದೇಶವು ? ಪ್ರಿಯವಾ ದಿಗೆ ಹಗೆ ಯಾರೆಂದು ಪಂಡಿತೋಕ್ತಿ ಇರುವುದರಿಂದಲೂ ಸಾಮ ದಾನ ಭೇದ ದಂಡ ಗಳೆಂಬ ಚತುರೋಪಾಯದಲ್ಲಿ ಸಾಮವೇ ಮುಖ್ಯೋಪಾಯವಾದುದರಿಂದ ಅದೇ ಮೊದಲು ಗಣಿಸಲ್ಪಟ್ಟಿತೆಂದು ಅರಿತವರು ಅನ್ನು ವುದರಿಂದಲೂ ಮುಂಚಿತವಾಗಿ ಸಿಂಹ ಇದೀಪದ ಅರಸುಗಳಿಗೆ ಸಂಧಿಪತ್ರಿಕೆಯನ್ನು ಬರೆಯಿಸಿ ದೂತರ ಕೈಯಲ್ಲಿ ಕಳುಹಿಸಿ ಅವರ ಭಾವವನ್ನು ತಿಳಿದುಕೊಂಡು ಅನಂತರ ಮುಂದಾಗುವ ಕಾರ್ಯವನ್ನು ಮಾಡೋಣ ಎಂಬುದಾಗಿ ತೋರುತ್ತದೆ ಎಂದು ಹರಿದತ್ತನು ಅರಿಕೆ ಮಾಡಲು ಆ ಮಾತಿಗೆ ಜಂಬೂದ್ವೀಪದ ಮಂಡಲಾಧಿಪರೂ ಮಂತ್ರಿಗಳೂ ದಳವಾಯಿಗಳೂ ಮುಂತಾದ ಸರ್ವಪರಿವಾರಗಳೂ ಸಮ್ಮ ತಿಪಟ್ಟುದರಿಂದ ಚಂಡಪರಾಕ್ರಮಿಯ ಒಡಂಬಟ್ಟು ಆದೇಪ್ರಕಾರ ಮಾಡಿಸಿರೆಂದು ಉತ್ತರವನ್ನು ಕೊಡಲು ಹರಿದತ್ತನು ರಾಯಸದವರ ಕಡೆಯಿ೦ದ ಲೇಖನವನ್ನು ಬರೆಯಿಸಿ ದೂತರ ಕೈಯಲ್ಲಿ ಕೊಟ್ಟು ಕಳುಹಿಸಿದನು. ಆ ದೂತರು ಅತಿತ್ವರೆಯಿಂದ ಸಾಗರದೆಡೆಗೆ ಬಂದು ಹಡಗಿನ ಮೇಲೇರಿ ಸಿಂಹಳದೀಪದ ಎಲ್ಲೆಯನ್ನು ಹೋಗಲು ಆ ದ್ವೀಪದ ಮೊದಲುಕ್ಕಡದ ಅಧಿಕಾರಿಯ ಆಳುಗಳು ಇವರನ್ನು ಕಂಡು ತನ್ನೊಡೆಯನ ಬಳಿಗೆ ಕರಕೊಂಡು ಹೋಗಿ ಕಾಣಿ ಸಿದರು, ಆ ದೂತರು ಈ ಉಕ್ಕಡದ ಅಧಿಕಾರಿಯ ಐಶ್ವರ್ಯವೂ ಸೇನೆಯ ನಮ್ಮ ಜಂಬೂದ್ವೀಪದ ಸಾರ್ವಭೌಮನಾದ ಚಂಡಪರಾಕ್ರಮಿಯ ಐಶ್ವರ್ಯ ಸೇನೆಗಳಿಗಿಂತ ಇಮ್ಮಡಿಯಾಗಿರುವುದು, ಕಡೆಯ ಉಕ್ಕಡದವನೇ ಇಷ್ಟು ಸಮಕಟ್ಟಿನಿಂದ ಇರುವಲ್ಲಿ ಇನ್ನು ಸಿಂಹಳದೀಪದ ಸಾರ್ವಭೌಮನನ್ನು ನಮ್ಮ ದ್ವೀಪದ ಸಾರ್ವಭೌಮನು ಜಯಿ ಸುವುದು ನಮ್ಮ ಬುದ್ದಿಗೆ ತೋರುವುದಿಲ್ಲ, ದೇವರ ಚಿತ್ರ ಹೇಗಿರುವುದೋ ? ಎಂದು ಯೋಚಿಸುತ್ತಾ ನಿಂತಿರುವಲ್ಲಿ ಉಕ್ಕಡದ ತಳವಾರನು ಇವರು ಬಂದ ವಿದ್ಯಮಾನವನ್ನು ಕೇಳಿ ತನ್ನೊಡೆಯನಾದ ಎರಡನೆಯ ಉಕ್ಕಡದ ಯಜಮಾನನ ಬಳಿಗೆ ಕಳುಹಿಸಲು ಅವನ ಐಶ್ವರ್ಯವು ಮೊದಲುಕ್ಕಡ ಅಧಿಕಾರಿಗಿಂತಲೂ ಎರಡರಷ್ಟು ಹೆಚ್ಚಾಗಿದ್ದುದ ರಿಂದ ಈ ದೂತರು ಅತ್ಯಾಶ್ಚರ್ಯಗೊಂಡು ಆತನ ಅಪ್ಪಣೆಯಿಂದ ಹೊರಟು ಹೀಗೆ ಒಬ್ಬರಿಗೊಬ್ಬರು ಇಮ್ಮಡಿಯಾಗಿರುವ ಹದಿನಾರು ಉಕ್ಕಡದ ಯಜಮಾನರನ್ನು ಬೀಳ್ಕೊಂಡು ಸಿಂಹಳದೀಪದ ಸಾರ್ವಭೌಮನ ಅರಿದುರ್ಘಟವೆಂಬ ಪಟ್ಟಣವನ್ನು ಹೊಕ್ಕು ಸಿಂಹವಿಕ್ರಮನೆಂಬ ಅರಸಿನ ಸಭೆಗೆ ಹೋಗಿ ಸುಧರ್ಮೆ ಎಂಬ ದೇವಸಭೆಯಲ್ಲಿ
ಪುಟ:ಕಥಾಸಂಗ್ರಹ ಸಂಪುಟ ೧.djvu/೯೯
ಗೋಚರ