86 KANARESE SELECTIONS-PART I ಯನ್ನು ಅಡ್ಡಬೀಳಿಸಿ ದೇಶಾಟನಕ್ಕೆ ಅಲ್ಲಿಂದ ಹೊರಟದು ಮೊದಲು ತಿರುಗಿ ಅಲ್ಲಿಗೆ ಸೇರುವ ತನಕ ತನ್ನ ಯಾವತ್ತಾಂತವನ್ನೂ ವಿಸ್ಥಾಪಿಸಲಾಗಿ ತಾಯಿತಂದೆಗಳು ಕೇಳಿ ಸಂತೋಷಪಟ್ಟರು. * ಹೀಗೆ ಕೆಲವು ಕಾಲ ಕಳೆಯುತ್ತಿರಲು ದಿಗ್ವಿಜಯಾರ್ಧವಾಗಿ ಹೋಗಿದ್ದ ಆ ಕುಶಲವತಿಯ ನಗರದ ಕುಶಲಶೇಖರರಾಜನ ಮಗನಾದ ಚಂಡಪರಾಕ್ರಮಿ ಎಂಬ ಯುವರಾಜನು ಸಮಸ್ತ ದೇಶದ ದೊರೆಗಳನ್ನು ಜಯಿಸಿ ಅವರಿತ್ತ ಕಪ್ಪದ ವಸ್ತು ಗಳು ಸಹಿತವಾಗಿ ತಂದೆಗೆ ಬರೆದು ಕಳುಹಿಸಿದ್ದ ಬಿನ್ನವತ್ತಲೆಯನ್ನು ಅರಸು ಚಾವ ಡಿಯಲ್ಲಿ ಕುಳಿತು ಒಡೋಲಗ ಮಾಡುತ್ತಿರುವಾಗ್ಗೆ ನಿಯೋಗಿಯು ತೆಗೆದು ಕೊಂಡು ಬಂದು ಅರಸಿಗೆ ನಮಸ್ಕರಿಸಿ ಕೊಟ್ಟನು, ಅರಸು ಅದನ್ನು ಓದುವಂತೆ ರಾಯಸದ ವನ ಕೈಯಲ್ಲಿ ಕೊಡಲು ರಾಯಸದವನು ಬಿಚ್ಚಿ ಓದುವಲ್ಲಿ ಅದರಲ್ಲಿದ್ದ ಒಕ್ಕಣೆ ಏನಂದರೆ-ಶ್ರೀಮದ್ರಾಜಾಧಿರಾಜದ ಕುಶಲವತೀ ನಗರದರಸುಗಳಾದ ನನ್ನ ತಂದೆಯ ಅಡಿದಾವರೆಗಳಿಗೆ ನಿಮ್ಮ ಮಗನಾದ ಚಂಡಪರಾಕ್ರಮಿಯು ಸಾಷ್ಟಾಂಗವಾಗಿ ನಮ ಸ್ಕರಿಸಿ ಬಿಸ್ಸ ವಿಸುವುದೇನಂದರೆ-ತಮ್ಮ ಚರಣಾನುಗ್ರಹದಿಂದ ಸಕಲ ದೇಶದ ದೊರೆ ಗಳು ಸ್ವಾಧೀನರಾಗಿ ಕಪ್ಪವನ್ನು ಕೊಟ್ಟರು. ಈಗ ಸಿಂಹಳದೀಪಾಧಿಪತಿಯು ಸ್ವಾಧೀ ನನಾಗದೆ ಇರುವುದರಿಂದ ನಮ್ಮ ಅಧೀನದಲ್ಲಿರುವ ಜಂಬೂದ್ವೀಪದ ಆರಸುಗಳ ಚತು ರಂಗಬಲವನ್ನು ಕೂಡಿಕೊಂಡು ಸಿಂಹಳದೀಪಕ್ಕೆ ದಂಡಯಾತ್ರೆಗೆ ಹೊರಡಬೇಕೆಂದು ನಿಶ್ಚಯಿಸಿದ್ದೇನೆ. ನಮ್ಮ ಮಂತ್ರಿ ಶಿಖಾಮಣಿಗಳಾದ ಕುಶಲಬುದ್ದಿ ಯವರ ಮಕ್ಕಳಾದ ಹರಿದತ್ತರು ದೇಶಾಟನವನ್ನು ಮಾಡಿಕೊಂಡು ನಗರಕ್ಕೆ ಬಂದು ಇದ್ದರೆ ಜಾಗ್ರತೆ ಯಿಂದ ನನ್ನೆಡೆಗೆ ಕಳುಹಿಸಬೇಕು. ಈಗ ನಾನು ಪ್ರಯತ್ನಿಸಿರುವ ಕಾಠ್ಯವು ಅತಿದು ರ್ಘಟವಾದುದರಿಂದ ಬುದ್ದಿ ಯಲ್ಲಿ ಬೃಹಸ್ಪತಿಗೂ ಕ್ಷೇಮಚಿಂತೆಯಲ್ಲಿ ಜನನಿಗೂ ಮಂತ್ರಾಲೋಚನೆಗೆ ಸಮರಾದವರು ಬೇಕಾಗಿರುವುದರಿಂದ ಅವರನ್ನು ನನ್ನೆಡೆಗೆ ಕಳು ಹಿಸಿದ ಹೊರತು ನಾನು ಮುಂದಕ್ಕೆ ಹೆಜ್ಜೆ ಇಡುವುದಿಲ್ಲ. ಇಂತೀ ಬಿನ್ನಹ. ಈ ರೀತಿ ಯಾಗಿ ಬರೆದಿದ್ದ ಒಕ್ಕಣೆಯನ್ನು ಕೇಳಿ ಕುಶಲಶೇಖರರಾಜನೂ ಕುಶಲಬುದ್ದಿ ಯ ಹರಿದತ್ತನನ್ನು ಕರಿಸಿ ಆ ಓಲೆಯನ್ನು ಓದಿಸಿಕೊಟ್ಟರು. ಹರಿದತ್ತನು ಅದನ್ನು ಕೇಳಿದ ಕ್ಷಣವೇ-ಅಪ್ಪಣೆಯಾದರೆ ಯುವರಾಜರ ಬಳಿಗೆ ತೆರಳುತ್ತೇನೆಂದು ಹೊರ ಡಲು ರಾಯನು ಆತನೊಡನೆ ಚತುರಂಗಬಲಸಮೇತವಾಗಿ ಕಿರಾತಸೇನಾಧಿಪತಿ ಯನ್ನು ಸಹಾಯವಾಗಿ ಕೊಟ್ಟು ಕಳುಹಿಸಿದನು. ಆಗ ಹರಿದತ್ತನು ಕಿರಾತಸೇನಾಧಿಪತಿ ಯನ್ನು ಒಡಗೊಂಡು ದಾರಿಯಲ್ಲಿ ತಡವುಮಾಡದೆ ಬಂದು ಯುವರಾಜನಾದ ಚಂಡ ಪರಾಕ್ರಮಿಯನ್ನು ಕಾಣಿಸಿಕೊಂಡನು. ಈತನು ಎದ್ದು ಹರಿದತ್ತನಿಗೆ ನಮಸ್ಕರಿಸಿ ಕಿರಾತಸೇನಾಧಿಪತಿಯನ್ನು ಮನ್ನಿಸಿ ಸಿಂಹಳದೀಪದಿಗ್ವಿಜಯಾರ್ಧವಾಗಿ ಹೊರಡ ಲೆಣಿಸಿ ನಮ್ಮ ಸೇವೆಗಳು ಸಮುದ್ರದ ಮೇಲೆ ತೆರಳುವುದಕ್ಕಾಗಿ ಒಬ್ಬೊಬ್ಬ ದೇಶಾಧಿ ಪತಿಯು ಒಂದೊಂದು ಹಡಗನ್ನು ಸಿದ್ಧ ಮಾಡಿಸುವಂತೆ ನಮ್ಮ ಛಪ್ಪನ್ನ ದೇಶದ ದೊರೆಗಳಿಗೆ ಅಪ್ಪಣೆ ಕೊಡಿಸೆಂದು ಹೇಳಿದ ಹಾಗೆಯೇ ಸ್ವಲ್ಪ ಕಾಲದಲ್ಲಿ ಐವತ್ತಾರು
ಪುಟ:ಕಥಾಸಂಗ್ರಹ ಸಂಪುಟ ೧.djvu/೯೮
ಗೋಚರ