ಕಥಾಸಂಗ್ರಹ-೧ನೆಯ ಭಾಗ S ಎಂದು ಕೂಗಲು ನನ್ನ ಹೆಂಡತಿಯು ಓಡಿ ಹೋಗಿ ಆ ವೃದ್ದ ಸುಮಂಗಲಿಯನ್ನು ನೋಡಿ ಅಡ್ಡಬಿದ್ದು ಕಾಲನ್ನು ತೊಳೆದು ಕೈ ಕೊಟ್ಟು ಮೆಲ್ಲಗೆ ಹತ್ತಿಸಿಕೊಂಡು ಕೂಸು ಸಹಿತ ಒಳಗೆ ಕರಕೊಂಡು ಬಂದು ಕಾಲುಮಣೆಯ ಮೇಲೆ ಕುಳ್ಳಿರಿಸಿ ಅರಿ ಸಿನ ಕುಂಕುಮ ಹೂವು ಎಲೆ ಅಡಿಕೆಗಳನ್ನು ಕೊಟ್ಟು ಪೂಜಿಸಿ ಅನ್ನೋದಕಗಳಿಂದ ತೃಪ್ತಿ ಪಡಿಸಿದಳು. ಬಳಿಕ ಆ ಮುತ್ತೈದೆಯು ನನ್ನ ಹೆಂಡತಿಯನ್ನು ಕರೆದು--ಎಲ್ಲೆ ಸತಿಯೆ ! ನೀನು ಮಹಾ ಪತಿವ್ರತೆಯು ನಾನು ಕಾಶಿಯಲ್ಲಿರುವ ಗಂಗಾಧರಭಟ್ಟ ನೆಂಬ ಪಾರ್ವನ ಹೆಂಡತಿಯು, ನನ್ನ ಗಂಡನು ಸನ್ಯಾಸಿಯಾಗಿ ಹುಲಿಯ ಚರ್ಮವನ್ನು ಹೊದಿದುಕೊಂಡು ಸಂಸಾರವಿರಕ್ತನಾಗಿ ಸ್ಮಶಾನದಲ್ಲಿ ವಾಸಮಾಡಿಕೊಂಡಿದ್ದಾನೆ. ಇವಳು ನನ್ನ ಕೂಸು. ಇವಳನ್ನು ಭೂತಪ್ರೇತಪಿಶಾಚಿಗಳಿಂದ ಕೂಡಿರುವ ಮಸಣಕ್ಕೆ ಕರೆಕೊಂಡು ಹೋಗುವುದಕ್ಕೆ ಅಂಜೆ ಇಲ್ಲಿಗೆ ಕರತಂದೆನು ಇವಳನ್ನು ನಿನ್ನ ಮಗಳ ನ್ಯಾಗಿ ಸಾಕಿಕೋ ಎಂದು ಆ ಬಾಲಕಿಯನ್ನು ನನಗೆ ಕೊಟ್ಟು ನನ್ನನ್ನು ಜನರು ಸರ್ವಮಂಗಳೆ ಎಂಬ ಹೆಸರಿನಿಂದ ಕರೆಯುವರು. ನಾನು ನನ್ನ ಗಂಡನಂತೆ ವಿರಕ್ಕೆ ೪ಾಗಿ ಸ್ಮಶಾನವಾಸಕ್ಕೆ ಹೋಗುವೆನೆಂದು ಹೇಳಿ ಅಲ್ಲಿಯೇ ಅದೃಶ್ಯಳಾದಳಂತೆ. ಗ್ರಾಮಾಂತರಕ್ಕೆ ಹೋಗಿದ್ದ ನಾನು ಬಂದ ಮೇಲೆ ಈ ಸುದ್ದಿಗಳನ್ನೆಲ್ಲಾ ಹೇಳಿ ನನ್ನ ಕೈಯಲ್ಲಿ ಆ ಕೂಸನ್ನು ಕೊಡಲು ನಾನು ಸರ್ವಾಂಗ ಸುಂದರಿಯಾದ ಮಗುವನ್ನು ನೋಡಿ ಆಕೆಗೆ ಶಿವದತ್ತೆ ಎಂದು ಹೆಸರನ್ನಿಟ್ಟು ಆರೈಕೆ ಮಾಡಿಕೊಂಡು ಬಂದೆನು. ಈಗ ಆ ಕನ್ನಿಕೆಗೆ ಏಳು ತುಂಬಿ ಎಂಟನೆಯ ವರುಷವಾಗುತ್ತಿರುವುದರಿಂದ ಸತ್ತಾ ತ್ರದಲ್ಲಿ ಕನ್ಯಾದಾನವನ್ನು ಮಾಡಬೇಕೆಂದು ಎಣಿಸಿಕೊಂಡಿದ್ದೆನು, ಈ ದಿವಸ ಬೆಳಗಿನ ಜಾವದಲ್ಲಿ ಆ ಮಗಳು ಎದ್ದು ನನ್ನ ಬಳಿಗೆ ಬಂದು-ಎಲೆ ತಂದೆಯೇ ! ಈ ರಾತ್ರಿ ನನ್ನ ಕನಸಿನಲ್ಲಿ ಒಬ್ಬ ಮುತ್ತೈದೆ ಬಂದು ನನ್ನನ್ನು ಕುರಿತು ನಿಮ್ಮ ಮನೆಯಲ್ಲಿ ಇಳಿದಿರುವ ಹರಿದತ್ತನೆಂಬ ಬ್ರಹ್ಮಚಾರಿಬ್ರಾಹ್ಮಣನನ್ನು ವರಿಸಿ ಮದುವೆ ಯಾಗೆಂದು ಹೇಳಿ ಅದೃಶ್ಯಳಾದಳು. ಆದಕಾರಣ ನನ್ನನ್ನು ಆತನಿಗೆ ಮದುವೆ ಮಾಡಿ ಕೊಡು ಎಂದು ಹೇಳಿದಳು. ಇಗೋ ! ಇವಳೇ ಆ ಕನ್ನಿಕೆಯು ಎಂದು ತೋರಿಸಿ ಇವಳನ್ನು ಪರಿಗ್ರಹಿಸಬೇಕೆಂದು ಬೇಡಿಕೊಂಡನು. ಅದನ್ನು ಕೇಳಿ ಹರಿದತ್ತನುಭಗವಂಕಲ್ಪದಂತೆ ನಡೆಯುವುದೇ ಸುಜನರಿಗೆ ಮುಖ್ಯವಾದುದರಿಂದ ತಮ್ಮ ಅನು ಗ್ರಹವಾದಂತಾಗಲಿ ಎಂದು ಒಪ್ಪಿಕೊಂಡನು. ಬಳಿಕ ಸುಜಾ ನಭಟನು ಸುಮಾಸ ಸುದಿನ ಸುವಾರ ಸುನಕ್ಷತ್ರ ಸುಯೋಗ ಸುಕರಣ ಸುಲಗ್ನದಲ್ಲಿ ಸುಪುತ್ರಿಯನ್ನು ಸುಶೀಲೆಯಾದ ಸುಸತಿಯೊಡನೆ ಕೂಡಿ ಸುಗುಣನಾದ ಹರಿದತ್ತನಿಗೆ ಸುಜನ ಸಮ ಹದ ಮುಂದೆ ಸುರಾಸ್ಯ ಸಾಕ್ಷಿ ಯಿಂದ ಸುರಪಾಲನಿಗರ್ಪಿತವೆಂದು ತುಲಸೀದಳ ಸಮೇತ ಗಂಗೋದಕಧಾರಾಪೂರ್ವಕ ಮದುವೆಯನ್ನು ಮಾಡಿಕೊಟ್ಟು ಆ ತರುವಾ ಯ ಪಾರ್ವರ ಪದ್ಧತಿಯ ಮೇರೆಗೆ ವೈದಿಕ ಲೌಕಿಕ ಕರ್ಮಗಳನ್ನು ನೆರವೇರಿಸಿದನು. ಅನಂತರದಲ್ಲಿ ಹರಿದತ್ತನು ಅತ್ತೆ ಮಾವಂದಿರ ಅಪ್ಪಣೆಯನ್ನು ಪಡೆದು ಮಡದಿಯ ಕೂಡಾ ಕುಶಲವತಿಗೆ ಬಂದು ತನ್ನ ತಾಯಿ ತಂದೆಗಳಿಗೆ ನಮಸ್ಕರಿಸಿ ಹೆಂಡತಿ
ಪುಟ:ಕಥಾಸಂಗ್ರಹ ಸಂಪುಟ ೧.djvu/೯೭
ಗೋಚರ