ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 KANARESE SELECTIONS PART I ಅವನ ಬುದ್ದಿ ಯು ಬಿಸಿ ನೀರಿನ ಕಡಾಯಿಯೊಳಗಿಟ್ಟ ಕೈಯೆಣ್ಣೆಯ ಹನಿಯಂತೆ ವಿಸ್ತ ರಿಸುವುದೆಂದು ವಿಜ್ಞಾಪಿಸಿ ತಂದೆತಾಯಿಗಳನ್ನು ಬೀಳ್ಕೊಂಡು ಹೊರಟು ದೇಶದೇಶಗ ಳನ್ನು ತಿರುಗುತ್ತಾ ಅಲ್ಲಿರುವ ವಿದ್ಯಾಂಸರನ್ನು ಸೇವಿಸುತ್ತಾ ತರ್ಕ ವ್ಯಾಕರಣ ಮಾಮಾಂಸೆ ವೇದಾಂತ ಜ್ಯೋತಿಷ ವೈದ್ಯ ಮಂತ್ರಶಾಸ್ತ್ರ ಶಿಲ್ಪವಿದ್ಯೆ ಸಂಗೀತ ಮುಂತಾದ ವಿಶೇಷ ವಿದ್ಯೆಗಳನ್ನು ಗ್ರಹಿಸುತ್ತಾ ಅಲ್ಲಲ್ಲಿ ವಿದ್ವಾಂಸರೊಡನೆ ಪ್ರಸಂಗ ವನ್ನು ಮಾಡುತ್ತಾ ಸಕಲಿ ವಿದ್ಯಾಪಾರಂಗತನಾಗಿ ಸತ್ವವನ್ನೂ ಶೋಧಿಸಿ ನೋಡಿ ಧರ್ಮಾರ್ಥಕಾಮಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳಲ್ಲಿ ಆತ್ರೋಜೀವಕವಾದ ಮೋಕ್ಷವೇ ನಿತ್ಯ ಸಂತೋಷವನ್ನು ಕೊಡುವುದೆಂದು ಆ ಮೋಕ್ಷಸಾಧನೆಗೆ ಏಕೋ ದೇವನ ಜ್ಞಾನವೇ ಕಾರಣವೆಂದೂ ಆ ದೇವನೇ ಸಕಲ ಲೋಕವನ್ನೂ ಉಂಟುಮಾಡಿ ಕಾವಾಡಿ ಶಿಕ್ಷೆ ರಕ್ಷೆಗಳನ್ನು ಮಾಡುವಂಧಾವನೆಂದೂ ನಿಜಮನದಲ್ಲಿ ನಿಶ್ಚಯಿಸಿ ಆತ ನನ್ನು ನಿಶ್ಚಲವಾದಭಕ್ತಿಯಿಂದ ನಂಬಿ ಪ್ರತಿದಿನವೂ ತ್ರಿಕಾಲದಲ್ಲಿಯ ಈ ದೇಹದಲ್ಲಿ ಹರಣವಿರುವ ತನಕ ನಿನ್ನ ಚಿತ್ತ ಬಂದಂತೆ ನನ್ನ ಪ್ರಾರಬ್ದಾನುಸಾರವಾಗಿ ಕಾಪಾಡೆಂದು ಪ್ರಾರ್ಧನೆಯನ್ನು ಮಾಡುತ್ತಾ ದೇವರು ಕೊಟ್ಟು ದರಲ್ಲಿ ಸಂತೋಷಪಟ್ಟು ಪತ್ನಿ ಪುತ್ರ ರೊಡನೆ ಉಂಡು ಉಟ್ಟು ಬೇಡುವ ದೀನರಿಗೆ ವಿತ್ತಶಾರವನ್ನು ಮಾಡದೆ ಕೊಟ್ಟು ಕೊಂಡು ಇರಬೇಕೆಂದು ಯೋಚಿಸಿ ತಿರಿಗಿ ಕುಶಲವತಿಗೆ ಹೋಗಬೇಕೆಂದು ಹೊರಟು ಬರುವ ಮಾರ್ಗದಲ್ಲಿದ್ದ ಸುಗುಣಾರಾಮವೆಂಬ ಅಗ್ರಹಾರದ ಬಳಿಗೆ ಬರುವಷ್ಟರೊಳಗೆ ಸಾಯಂಕಾಲವಾದುದರಿಂದ ಆ ಅಗ್ರಹಾರವನ್ನು ಹೊಕ್ಕು ಅಲ್ಲಿರುವ ಸುಜ್ಞಾನಭಟ್ಟ ನೆಂಬ ಬ್ರಾಹ್ಮಣನ ಮನೆಯಲ್ಲಿ ಬಂದು ಇಳಿದು ಕೊಂಡನು. ಆ ಸುಜ್ಞಾನಭಟನೂ ಆತನ ಹೆಂಡತಿಯಾದ ಸುಶೀಲೆಯ ಈತನನ್ನು ಕಂಡು ಒಹು ಸಂತೋಷದಿಂದ ಆದರಿಸಿ ಊಟವುಪಚಾರಗಳನ್ನು ಮಾಡಿಸಿ ಮಲಗಿಕೊಳ್ಳು ವುದಕ್ಕೆ ಒಂದು ಮಂದಲಿಗೆಯನ್ನು ಕೊಡಲು ಹರಿದತ್ತನು ದೇವರ ಧ್ಯಾನವನ್ನು ಮಾಡಿ ಆ ಮಂದಲಿಗೆಯ ಮೇಲೆ ಮಲಗಿಕೊಂಡನು, ತರುವಾಯ ಬ್ರಾಹ್ಮಮುಹೂರ್ತದಲ್ಲಿ ಮನೆಯ ಯಜಮಾನನಾದ ಸುಜ್ಞಾನಭಟ್ಟನು ಹಾಸಿಗೆಯ ಮೇಲೆ ಕುಳಿತು ದೇವರ ಪ್ರಾರ್ಥನೆಯನ್ನು ಮಾಡುತ್ತಿರುವ ಹುದತ್ತನ ಬಳಿಗೆ ಹೋಗಿ ಹೇಳಿದುದೇನಂದರೆಭಗವಂತನಿಗೆ ಏಕಾಂತ ಭಕ್ತನಾದ ಎಲೈ ಹರದತ್ತನೆ ! ದಂಪತಿಗಳಾದ ನಾವು ಮಕ್ಕ ಳಿಲ್ಲದೆ ಸರ್ವಲೋಕ ಕರ್ತನಾದ ಹರಿಯನ್ನು ನಿತ್ಯದಲ್ಲೂ ಧ್ಯಾನಿಸುತ್ತಾ ಇರುವಲ್ಲಿ ಒಂದು ದಿವಸ ಕುಗ್ಗಿದ ನಡುವುಳ್ಳ ಸುಕ್ಕಿದ ಚರ್ಮವುಳ್ಳ ಮೈಯಲ್ಲಿ ಎಲಬು ತೊಗಲೇ ಹೊರತು ತುಸವಾದರೂ ಮಾಂಸವು ಇಲ್ಲದವಳಾದ ಮುತ್ತೈದೆಯಾದಂಥಾ ಒಬ್ಬ ಅಜ್ಜುಗುಜ್ಜು ಮುದುಕಿಯು ನೆರೆಯಿಂದ ಬೆಳ್ಳಗಾಗಿರುವ ಕೂದಲುಗಳುಳ್ಳ ತಲೆ ಯನ್ನು ನಡುಗಿಸುತ್ತಾ ಒಂದು ಹಲ್ಲಾದರೂ ಇಲ್ಲದ ಬಾಯಿಯಲ್ಲಿ ಯಾವಾಗಲೂ ಏನೋ ತಿನ್ನುವವಳ ಹಾಗೆ ಕಾಣಿಸುತ್ತಾ ಕೋಲೂರಿಕೊಂಡು ಮೂರು ವರುಷದ ಒಂದು ಸಣ್ಣ ಹುಡುಗಿಯನ್ನು ಜೊತೆಯಲ್ಲಿ ಕರಕೊಂಡು ನಮ್ಮ ಮನೆಯ ಬಾಗಲಿಗೆ ಒಂದು ಬಾಗಲ ಮೆಟ್ಟನ್ನು ಹತ್ತಲಾರದೆ ನಡುಗುವ ಧ್ವನಿಯಿಂದ-ಯಾರೊಳಗೆ !