ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ ನೆಯ ಭಾಗ 83 ವೃದ್ದಿ ಯಾಗಿ ಬೆಳೆಯುತ್ತಾ ತಂದೆತಾಯಿಗಳಿಗೆ ಬಾಲಲೀಲೆಯನ್ನು ತೋರಿಸುತ್ತಾ ಸಂತೋಷಪಡಿಸುತ್ತಾ ಅಂಬೆಗಾಲನ್ನು ಇಡುತ್ತಾ ದಟ್ಟಡಿಯನ್ನು ಹಾಕುತ್ತಾ ಜೊಲ್ಲನ್ನು ಸುರಿಸುತ್ತಾ ತೊದಲು ನುಡಿಯನ್ನು ನುಡಿಯುತ್ತಾ ನಿಷ್ಕಾರಣವಾಗಿ ನಗುತ್ತಾ ಮೊಲೆಕೊಡೆಂದು ತಾಯಿಯನ್ನು ಕಾಡುತ್ತಾ ಕೇಳಿದುದನ್ನು ಕೊಡದಿದ್ದರೆ ಅಳುತ್ತಾ ಅಸಾಧ್ಯವಾದುವುಗಳನ್ನು ಬೇಡುತ್ತಾ ಅಸಂಗತವಾಗಿ ಅರ್ಧ ಮಾತುಗಳನ್ನು ಆಡುತ್ತಾ ಇರುವ ಮಗುವಿಗೆ ಐದು ವರುಷ ತುಂಬಲು ಕುಶಲಬುದ್ದಿಯು ಚೌಲಕ ರ್ಮವನ್ನು ಮಾಡಿ ಓನಾಮ ಪೂಜೆಯನ್ನು ಮಾಡಿಸಿ ಉಪಾಧ್ಯಾಯರ ಮಠಕ್ಕೆ ಹಾಕಿದನು, ಹರಿದತ್ತನು ಉಪಾಧ್ಯಾಯರ ಕಟ್ಟೆಯನ್ನು ಮಾರದೆ ಕೆಟ್ಟ ಹುಡುಗರ ಜೊತೆಯಲ್ಲಿ ಅಡದೆ ಕ್ಷಣವಾದರೂ ವ್ಯರ್ಧ ಕಾಲಕ್ಷೇಪವನ್ನು ಮಾಡದೆ ಪ್ರಾಕೃತವಿ ದೈಗಳನ್ನು ಕಲಿತು ಛಪ್ಪನ್ನ ದೇಶಗಳ ಮಾತುಗಳನ್ನೂ ಬರಹಗಳನ್ನೂ ಕಲಿತ ಮೇಲೆ ಅವ ನಿಗೆ ಏಳು ವರುಷವಾಗಲು ತಂದೆಯು ಗರ್ಭಾಷ್ಟಮದಲ್ಲಿ ಉಪನಯನವನ್ನು ಮಾಡಿ ವೇದಶಾಗಳ ಅಭ್ಯಾಸಕ್ಕೆ ಸಕಲ ವಿದ್ಯಾಪಾರಂಗತರಾದ ಗುರುಗಳ ವಶಕ್ಕೆ ಇವನನ್ನು ಒಪ್ಪಿಸಿದನು. ಈ ಹರಿದತ್ತನು ಪ್ರಾತಃಕಾಲದಲ್ಲಿ ಎದ್ದು ಕೆರೆ ತೆರೆ ಕಟ್ಟೆ ಕುಂಟೆ ಕೊಳ ಭಾವಿ ಮುಂತಾದ ಜಲಸ್ಥಾನಗಳಲ್ಲಿ ಮಿಂದು ಮಡಿಯನ್ನು ಟ್ಟು ದೇವರ ಧ್ಯಾನ ವನ್ನು ಮಾಡಿ ಆಚಾರ್ಯರ ಸನ್ನಿಧಿಗೆ ಹೋಗಿ ಅವರನ್ನು ವಂದಿಸಿ ವೇದಾಧ್ಯಯನವನ್ನು ಮಾಡುತ್ತಾ ಮಧ್ಯಾಹ್ನ ವಾದ ಮೇಲೆ ಗುರುಗಳಪ್ಪಣೆಯನ್ನು ತೆಗೆದುಕೊಂಡು ಭಿಕ್ಷಾಚರಣೆಯನ್ನು ಮಾಡಿ ಆ ಭಿಕ್ಷಾನ್ನವನ್ನು ತಂದು ದೇವರ ಪ್ರಾರ್ಧನೆಯನ್ನು ಮಾಡಿ ಉಂಡು ತಿರಿಗಿ ಪ್ರದೋಷ ಕಾಲದ ವರೆಗೂ ಅಧ್ಯಯನವನ್ನು ಮಾಡುತ್ತಾ ಅನಧ್ಯಾಯ ದಿವಸಗಳಲ್ಲಿ ಕಾವ್ಯನಾಟಕಾದಿ ಅಲಂಕಾರ ಶಾಸ್ತ್ರಗಳನ್ನು ಕಲಿಯುತ್ತಾ ಗುರುವಿಗೆ ಅಚ್ಚು ಮೆಚ್ಚಾಗಿ ಇದ್ದು ಕೊಂಡು ಹನ್ನೆ ರಡು ವರುಷ ಗುರುಕುಲವಾಸವನ್ನು ಮಾಡಿ ಸಂಹಿತೆ ಪದ ಕ್ರಮ ಜಟೆ ಘನ ಮುಂತಾದ ವೇದವನ್ನೂ ಕಲಿತನು, ಗುರುವು ನೋಡಿ ಸಂತೋಷದಿಂದ ಶಿಷ್ಯನಾದ ಹರಿದತ್ತನ್ನು ಕರಕೊಂಡು ಮಂತ್ರಿಯ ಮನೆಗೆ ಬಂದು ನಿನ್ನ ಮಗನು ಸಾಂಗವಾಗಿ ವೇದವನ್ನು ಕಲಿತು ಘನಪಾಠಿ ಅನ್ನಿಸಿಕೊಂಡನು. ಶಾಸ್ತೋತ್ರ ಪ್ರಕಾರ ಹನ್ನೆರಡು ವರುಷ ಗುರುಕುಲವಾಸವನ್ನೂ ಭಿಕ್ಷಾಚರಣೆಯನ್ನೂ ಮಾಡಿ ಲೇಶಮಾತ್ರವಾದರೂ ವ್ಯತ್ಯಾಸವಾಗಿ ನಡೆಯದೆ ಬ್ರಹ್ಮಚರ್ಯ ವ್ರತದಲ್ಲಿ ಇದ್ದನು. ಇನ್ನು ಮೇಲೆ ವ್ರತಸಮಾವತ್ರನೆಯನ್ನು ಮಾಡಿಸೆಂದು ಹೇಳಿದನು. ಕುಶಲ ಬುದ್ದಿಯು ಹರಿದತ್ತನ ಕಡೆಯಿಂದ ಗುರು ದಕ್ಷಿಣೆಯನ್ನು ಕೊಡಿಸಿ ಮಗನಿಗೆ ವ್ರತ ಸಮಾವರನೆಯನ್ನು ಮಾಡಿಸಿದನು. ಆ ಬಳಿಕ ಹರಿದತ್ತನು ತಂದೆತಾಯಿಗಳಿಗೆ ನಮಸ್ಕಾರವನ್ನು ಮಾಡಿ ಹೇಳಿದು ದೇನಂದರೆ--ಸ್ವಾಮಿಾ ತಂದೆಯೇ ! ಲೋಕದಲ್ಲಿ ಯಾವ ಮನುಜನು ದೇಶಾಟನವನ್ನು ಮಾಡದೆ ಪಂಡಿತರೊಡನೆ ಸಂಭಾಷಣೆಯನ್ನು ಮಾಡದೆ ಇರುವನೋ ಅವನ ಬುದ್ದಿಯು ತಣ್ಣೀರ ಕೊಪ್ಪರಿಗೆಯಲ್ಲಿಟ್ಟ ತುಪ್ಪದಂತೆ ಸಂಕುಚಿತವಾಗುವುದು, ಯಾವನು ನಾನಾ ದೇಶಗಳನ್ನು ಸಂಚರಿಸುತ್ತಾ ವಿದ್ವಾಂಸರೊಡನೆ ಸಂಭಾಷಣೆಯನ್ನು ಮಾಡುವನೋ