ಪುಟ:ಕಥಾಸಂಗ್ರಹ ಸಂಪುಟ ೧.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

82 KANARESE SELECTIONS-PART 1 ಆಕಾಶವಾಣಿಯು ನುಡಿದು ದನ್ನು ಹೇಳಿ ಕೊಡಲು ಸಚಿವನು ಸಂತೋಷಪಟ್ಟು ಅರಸಿನ ಚಾವಡಿಗೆ ಹೋಗಿ ಸಭೆಯವರ ಮುಂದೆ ಈ ಬೇಡನನ್ನೂ ಕೂಸನ್ನೂ ಕರ ಕೊಂಡು ಹೋಗಿ ತೋರಿಸಿ ಯಾವತ್ತಾಂತವನ್ನೂ ಬೇಡನ ಮುಖದಿಂದ ಬಿನ್ನಹ ವನ್ನು ಗೈಸಲು ಅರಸು ಸಭೆಯವರೊಡನೆ ಸಂತೋಷಪಟ್ಟು -ಮಕ್ಕಳಿಲ್ಲದ ನಿನಗೆ ಮಹಾದೇವನು ಮಗುವನ್ನು ಕೊಟ್ಟನು ; ಚೆನ್ನಾಗಿ ಸಾಕು ಎಂದು ಹೇಳಿ ಆ ವ್ಯಾಧನಿಗೆ ಅರಸು ತನ್ನ ಸೇನಾಧಿಪತ್ಯವನ್ನು ಕೊಟ್ಟು ಇರಿಸಿಕೊಂಡನು. - ಇತ್ತಲಾ ದೇವದಾಸಿಯು ಮರದ ಬುಡಕ್ಕೆ ಬಂದು ನೋಡಿ ಮಗುವನ್ನು ಕಾಣದೆ-ಅಯ್ಯೋ ದೇವರೇ ! ನನ್ನ ಮೇಲೆ ನಿನಗಿಷ್ಟು ನಿಷ್ಕರುಣವೇಕೆ ? ನಾನೇನು ನಿನಗೆ ಹಗೆಯೇ ? ಜಗದೊಳಗೆ ಅನೇಕ ಜನರನ್ನು ಕಾಪಾಡುವ ನೀನು ಈ ರೀತಿಯಲ್ಲಿ ಮೊದಲು ಮಗುವನ್ನು ಕೊಟ್ಟು ಗಂಡನನ್ನು ಕೊಂದು ಕಡೆಗೆ ಮಗುವನ್ನೂ ಮಾಯ ಮಾಡಿ ನನ್ನನ್ನು ಕಂಗೆಡಿಸಿದೆ ನಾನು ಮಾಡಿದ ಪಾಪದಿಂದ ನನಗೆ ಇಷ್ಟು ಸಂಕಟ ವನ್ನು ತೋರಿಸಿದೆ. ಗಂಡನನ್ನೂ ಮಗನನ್ನೂ ತಿಂದುಕೊಂಡು ಬಾಳುವ ನನ್ನ ಬಾಳು ಇನ್ನು ಮೇಲೆ ಹೇಸಿಕೆಯಲ್ಲವೇ ? ನಿನ್ನ ಪಾದಕ್ಕೆ ಈ ಕೆಟ್ಟ ದೇಹವನ್ನು ಬಲಿ ಯಾಗಿ ಒಪ್ಪಿಸುವೆನೆಂದು ಒಣಗಿದ ಸೌದೆಯನ್ನು ಒಟ್ಟಿ ಚಿತಿಯನ್ನು ಮಾಡಿ ಬೆಂಕಿ ಯನ್ನು ಹೆಚ್ಚಿಸಿ-ದೇವರೇ ! ನನ್ನನ್ನು ನಿನ್ನ ಪಾದಾರವಿಂದದಲ್ಲಿ ಸೇರಿಸಿಕೊ ಎಂದು ಪ್ರಾರ್ಧನೆಯನ್ನು ಮಾಡಿ ಆ ಚಿತೆಯಲ್ಲಿ ಬೀಳುವುದಕ್ಕೆ ಪ್ರದಕ್ಷಿಣವನ್ನು ಮಾಡು ತಿರಲು ಆಗ ದೇವರು ಸತ್ತು ಹೋಗಿದ್ದ ಈ ಗಂಡನ ಆತ್ಮಕ್ಕೆ ಕರುಣದಿಂದ ಬದಲು ದೇಹವನ್ನು ಪೂರ್ವದಲ್ಲಿದ್ದಂತೆ ಗೈದು ಅದರಲ್ಲಿ ಹೊಗಿಸಿ ಆಕೆಯ ಮುಂದೆ ನಿಲ್ಲಿಸಿ-ಇಗೋ ನಿನ್ನ ಗಂಡನು ! ನಾನು ನಿನ್ನ ದುಃಖಕ್ಕೆ ಮರುಗಿ ಪುನಃ ಇವನನ್ನು ಕೊಟ್ಟಿದ್ದೇನೆ, ಇನ್ನು ಮೇಲೆ ಈ ಗಂಡನನ್ನು ಕೂಡಿಕೊಂಡು ಈ ಕುಶಲವತೀ ಪಟ್ಟಣಕ್ಕೆ ಹೋಗಿ ಸುಖವಾಗಿರು ಎಂದು ಹೇಳಿ ಅದೃಶ್ಯನಾದನು. ಆಗ ದೇವದಾಸಿಯು ಆಶ್ಚರ್ಯಪಟ್ಟು ಇದೆಲ್ಲಾ ದೇವರ ಚಿತ್ತವೆಂದು ತಿಳಿದು ದೇವದಾಸ ನಿಗೆ ನಮಸ್ಕರಿಸಿದಳು. ದೇವದಾಸನು ಹೆಂಡತಿಯನ್ನು ಮನ್ನಿಸಿ ಈಗ ಬಂಜೆತನವು ಹೋಯಿತೇ ? ಮಕ್ಕಳಿಂದ ದುಃಖವೆಂದು ನಾನು ಹೇಳಿದುದು ತಾರಣೆಗೆ ಬಂದಿತೇ ? ಇನ್ನು ಮೇಲಾದರೂ ಯಾವುದನ್ನೂ ಅಪೇಕ್ಷಿಸದೆ ದೇವರಿಗೆ ತೊಂದರೆಯನ್ನು ಕೊಡದೆ ದೇವರು ಕೊಟ್ಟಷ್ಟರಲ್ಲಿ ಸಂತೋಪಟ್ಟು ಕೊಂಡು ಆತನನ್ನು ನಿರಂತರವೂ ಪ್ರಾರ್ಧಿಸಿಕೊಂಡಿರುವೆಯಾ ? ಎಂದು ಕೇಳಿದನು. ಆಗ ದೇವದಾಸಿಯು ತಮ್ಮ ಅಪ್ಪ ಣೆಯ ಮೇರೆಯೇ ನಡೆದುಕೊಂರು ಇರುವೆನೆಂದು ಹೇಳಿ ಗಂಡನಿಗೆ ಸಾಷ್ಟಾಂಗವಾಗಿ ನಮಸ್ಕರಿಸಿದಳು. ತರುವಾಯ ದೇವದಾಸನು ಮಡದಿಯನೊಡಗೊಂಡು ಕುಶಲವತೀ ಎಂಬ ಪಟ್ಟಣವನ್ನು ಸೇರಿ ಒಂದು ಮನೆಯನ್ನು ಮಾಡಿಕೊಂಡು ಉಂಛವೃತ್ತಿಯಿಂದ ಕಾಲಕ್ಷೇಪವನ್ನು ಮಾಡುತ್ತಾ ದೇವರನ್ನು ಪ್ರಾರ್ಥಿಸಿಕೊಂಡಿದ್ದನು. - ಇತ್ತಲಾ ಕುಶಲಬುದ್ದಿ ಎಂಬ ಮಂತ್ರಿಯು ಆ ಕೂಸಿಗೆ ಹರಿದತ್ತನೆಂಬ ಹೆಸರ ನ್ನಿಟ್ಟು ಅತಿಶಯದಿಂದ ಕಾಪಾಡುತ್ತಿರಲಾಗಿ ಬಿದಿಗೆಯ ಚಂದ್ರನಂತೆ ದಿನದಿನಕ್ಕೆ ಅಭಿ

  1. # # # # # # # # # #