ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಥಾಸಂಗ್ರಹ-೧ನೆಯ ಭಾಗ 81 ನನ್ನನ್ನು-ಇವಳು ಬಂಜೆಯು ಇವಳ ಕೈಯ್ಯಲ್ಲಿ ನೀರನ್ನು ಮುಟ್ಟ ಬಾರದೆಂದು ಹೀಯಾಳಿಸುತ್ತಾರಲ್ಲಾ ! ನನಗೆ ನಾಚಿಕೆ ಆಗುತ್ತದೆಲ್ಲಾ ! ದೇವರ ಧ್ಯಾನವನ್ನೇ ಚೆನ್ನಾಗಿ ಮಾಡಿ ನನ್ನ ಬಂಜೆತನವನ್ನು ಪರಿಹರಿಸಿಕೊಡಬೇಕೆಂದು ಬಹುತರವಾಗಿ ಗಂಡ ನನ್ನು ಬೇಡಿಕೊಂಡಳು. ಆಗ ಗಂಡನು ಆಕೆಯ ದುಃಖವನ್ನು ನೋಡಿ ಮರುಕದಿಂದ ನಿತ್ಯದಲ್ಲಿ ಯ ದೇವರನ್ನು ಸ್ತುತಿಸುತ್ತಾ ಮಕ್ಕಳಪೇಕ್ಷೆಯುಳ್ಳ ಈ ನನ್ನ ಹೆಂಡತಿಗೆ ಮಕ್ಕಳನ್ನು ದಯಪಾಲಿಸಬೇಕೆಂದು ಬೇಡಿಕೊಳ್ಳುತ್ತಾ ಇದ್ದನು.
- ಹೀಗಿರುವಲ್ಲಿ ಒಂದಾನೊಂದು ದಿವಸ ಪ್ರಾತಃಕಾಲದಲ್ಲಿ ಹೆಂಡತಿಯು ಎದ್ದು ಬಂದು ಗಂಡನಿಗೆ ನಮಸ್ಕಾರವನ್ನು ಮಾಡಿ ಸ್ವಾಮಿಾ ಪತಿಯೇ ! ನಿನ್ನೆಯ ರಾತ್ರಿ ದೇವರು ಕನಸ್ಸಿನಲ್ಲಿ ಬಂದು ನನ್ನ ಕೈಯಲ್ಲಿ ಬಿರಿದಿರುವ ಒಂದು ದಾಳಿಂಬದಹಣ್ಣನ್ನು ಕೋಟು ಹೋದನು, ಅದನು ನಾನು ತಿನ ಬೇಕೆಂದು ಕೈಯಲಿ ಟು ಕೊಂಡು ನೋಡುತ್ತಿರುವಷ್ಟರಲ್ಲಿಯೇ ಆ ಹಣ್ಣು ಮಾಯವಾಯಿತು, ಅಷ್ಟರಲ್ಲೇ ಕೋಳಿಯು ಕೂಗಲು ; ನಾನು ಎದ್ದು ಬಂದೆನು.” ಎಂದು ಹೇಳಿದಳು, ಅದಕ್ಕೆ ಗಂಡನು-ನಿನಗೆ ಮಗನನ್ನು ದೇವರು ಕೊಡುವನೆಂದು ಸಂತೋಷಪಡಿಸಿ ಕಳುಹಿಸಿದನು. ಕೆಲವು ದಿವಸದ ಮೇಲೆ ಆಕೆಯು ಬಸುರಾಗಿ ಗಂಡುಮಗುವನ್ನು ಹೆತ್ತಳು, ಆ ಮಗುವು ಹುಟ್ಟಿದ ಏಳನೆಯ ದಿವಸದಲ್ಲಿ ತಂದೆಯಾದ ದೇವದಾಸನು ಸತ್ತು ಹೋದು ದರಿಂದ ದೇವದಾಸಿಯು--ನನ್ನ ಪತಿಯು ಮಗನನ್ನು ಹಾರೈಸಬೇಡವೆಂದು ಮೊದಲೇ ಹೇಳಿದನು, ನಾನು ಕೇಳದೆ ಗಂಡನನ್ನು ಕಳೆದುಕೊಂಡು ಮು೦ಡೆಯಾ ದೆನು. ಮುಂದೇನು ಗತಿ ? ಚೆನ್ನಾಗಿ ಬದುಕಿದ್ದ ಊರಿನಲ್ಲಿ ತಿರಿದು ಉಣ್ಣುವುದು ಉಚಿತವಲ್ಲವೆಂದು ಯೋಚಿಸುತ್ತಾ ಕೂಸಿಗೆ ಮೂರು ತಿಂಗಳಾಗುವ ವರೆಗೂ ಮನೆ ಯಲ್ಲಿ ಇದ್ದ ವಸ್ತುವನ್ನೆಲ್ಲಾ ಮಾರಿ ತಿಂದು ಆ ಮೇಲೆ ಕೂಸನ್ನು ಎತ್ತಿ ಕೊಂಡು ದೇಶಾಂತರಕ್ಕೆ ಹೊರಟು ಬರುವ ದಾರಿಯಲ್ಲಿ ಬಿಸಿಲಿನಿಂದ ಕಂಗೆಟ್ಟು ಬಾಯಾರಿ ಬಸ ವಳಿದು ಕೂಸಿಗೆ ಮೊಲೆಯನ್ನೂಡಿ ಒಂದು ಮರದ ನೆರಳಿನಲ್ಲಿ ಚಿಗುರನ್ನು ಹಾಸಿ ತಟ್ಟಿ ಮಲಗಿಸಿ ನೀರುಕುಡಿವೆನೆಂದು ನೀರನ್ನು ಅರಸಿಕೊಂಡು ಸವಿಾಪದಲ್ಲಿ ಕಾಣದೆ ದೂರ ಹೋಗಿ ಒಂದು ಕೊಳವನ್ನು ಕಂಡು ಅದರೊಳಗೆ ಮಿಂದು ನೀರನ್ನು ಕುಡಿದು ನೀರಡಿ ಕೆಯನ್ನು ತಗ್ಗಿಸಿಕೊಂಡು ಬರುವಷ್ಟರಲ್ಲಿಯೇ ಆ ಕಾಡಿಗೆ ಬೇಟೆಗಾಗಿ ಬಂದಿದ್ದ ಒಬ್ಬ ಬೇಡನು ಮರದ ಅಡಿಯಲ್ಲಿ ಚಿಗುರಿನ ಹಾಸಿಗೆಯ ಮೇಲೆ ತಣ್ಣ ದಿರನಂತೆ ಮಲಗಿ ಕಳಕಳಿಸುತ್ತಿರುವ ಮಗುವನ್ನು ಎತ್ತಿ ಕೊಂಡು ಬರುತ್ತಿರುವಲ್ಲಿ-ಎಲೈ ಬೇಡನೆ ! ಈ ಕೂಸು ಬ್ರಾಹ್ಮಣರ ಹೊಟ್ಟೆಯಲ್ಲಿ ಹುಟ್ಟಿದುದು ; ನೀನಿಟ್ಟು ಕೊಳ್ಳಬೇಡ ; ನಿನಗೆ ಬಹಳ ಮಕ್ಕಳಿರುವುವು, ನಿಮ್ಮ ಕುಶಲವತೀ ಪಟ್ಟಣದ ಕುಶಲಿಬುದ್ದಿ' ಎಂಬ ಮಂತ್ರಿಗೆ ಮಕ್ಕಳಿಲ್ಲ, ಈ ಕೂಸನ್ನು ನೀನು ತೆಗೆದು ಕೊಂಡು ಹೋಗಿ ಏಕಾಂತದಲ್ಲಿ ಕಂಡು ಆತನಿಗೆ ಕೊಟ್ಟರೆ ಆತನು ನಿನಗೆ ಆ ಪಟ್ಟಣದ ಸೇನಾಧಿಪತ್ಯವನ್ನು ಕೆಟ್ಟು ಸನ್ಮಾನದಿಂದ ಇಟ್ಟು ಕೊಳ್ಳುವನೆಂದು ಆಕಾಶವಾಣಿ ನುಡಿಯಲು ವ್ಯಾ ಧನು ಬಹಳ ಸಂತೋಷಪಟ್ಟು ಪಟ್ಟಣಕ್ಕೆ ಹೋಗಿ ಮಂತ್ರಿಯನ್ನ ಕಂಡು ಅಂತರಂಗದಲ್ಲಿ