80 KANARESE SELECTIONS-PART T ಳಿಗೆ ಸಾಷ್ಟಾಂಗವೆರಗಲು ; ಅರಸು-ಇವನೇ ಅಳಿಯನು ಮಗಳಿಗೆ ಸಕಲ ವಿದ್ಯೆ ಗಳಲ್ಲಿಯೂ ಪರೀಕ್ಷೆಯನ್ನು ಕೊಡುವ ನಿಮಿತ್ತದಿಂದ ಹೀಗೆ ಮಾಡಿದನೆಂದು ತಿಳಿದು ಅಳಿಯನನ್ನು ಆಲಿಂಗಿಸಿಕೊಂಡು ಇವನ ಗುಡಾರದಲ್ಲಿ ಇದ್ದುದನ್ನು ಬೊಕ್ಕಸದಲ್ಲಿ ಇಡಿಸಿ ಮನೆಗೆ ಕರಕೊಂಡು ಹೋಗಿ ಭೋಜನಾದಿಗಳನ್ನು ಮಾಡಿಸಿ ಇವನ ತಂದೆ ಯಾದ ಅಮರಾವತಿ ಪಟ್ಟಣದ ಅಮರಶೇಖರರಾಯನಿಗೆ ಲಗ್ನ ಪತ್ರಿಕೆಯನ್ನು ಬರೆಯಿಸಿ ಕಳುಹಿಸಿ ಎಲ್ಲರನ್ನೂ ಕರಿಸಿಕೊಂಡು ಶುಭಮುಹೂರ್ತದಲ್ಲಿ ಶಾಸ್ಕೋಕಪ್ರಕಾರ ವಿದ್ಯಾ ಮಂಜರಿಗೆ ಮದುವೆಯನ್ನು ಮಾಡಿಸಿದನು, ಆ ಬಳಿಕ ಬೀಗರಿಬ್ಬರೂ ಅಳಕಾ ವತಿದೇಶಕ ಅಮರಾವತಿ ದೇಶಕ್ಕೂ ರಾಜಕುಮಾರನಿಗೆ ಪಟ್ಟಾಭಿಷೇಕವನ್ನು ಮಾಡಿ ತಮ್ಮ ತಮ್ಮ ಪತ್ನಿ ಸಮೇತರಾಗಿ ನೈಮಿಶಾರಣ್ಯಕ್ಕೆ ತಪಸ್ಸಿಗೆ ಹೋದರು. 47. CHANDAPARAKRAMI AND HARIDATTA. ೪೭. ಚಂಡಪರಾಕ್ರಮಿ ಹರಿದಿತ್ತರು. ರಾಜೀವಪುರವೆಂಬ ಅಗ್ರಹಾರದಲ್ಲಿ ದೇವದಾಸನೆಂಬ ಒಬ್ಬ ಬ್ರಾಹ್ಮಣನಿದ್ದನು. ಆತನ ಹೆಂಡತಿಯಾದ ದೇವದಾಸಿ ಎಂಬುವಳು ಮಹಾ ಪತಿವ್ರತೆಯಾಗಿ ಒಂದು ವೇಳೆಯಲ್ಲಿಯಾದರೂ ಗಂಡನಾಜ್ಞೆಯನ್ನು ಮಾರದೆ ಆತನ ಶುಶೂಷೆಯನ್ನು ಮಾಡಿ ಕೊಂಡಿದ್ದಳು, ಆ ಬ್ರಾಹ್ಮಣನು ಪ್ರತಿದಿನದಲ್ಲಿಯ ಬಂದಂಥಾ ಅತಿಥಿ ಅಭ್ಯಾಗತ ರಿಗೆ ವಿತ್ತಶಾಸ್ತ್ರವನ್ನು ಮಾಡದೆ ತನ್ನಲ್ಲಿ ಇದ್ದುದನ್ನು ವಂಚಿಸದೆ ಅಕ್ಕರದಿಂದ ಅನ್ನೋಪಚಾರಗಳನ್ನು ಮಾಡಿಸುತ್ತಾ ಇದ್ದನು ಹೀಗಿರುವಲ್ಲಿ ಒಂದು ದಿವಸ ರಾತ್ರಿ ಯಲ್ಲಿ ಹೆಂಡತಿಯು ಗಂಡನೊಡನೆ- ಸ್ವಾಮಿ ಪತಿಯೇ ! ಮಕ್ಕಳಿಲ್ಲದವರಿಗೆ ಗತಿಯಿಲ್ಲವೆಂದು ಸಕಲವೇದಶಾಸ್ತ್ರಗಳೂ ಹೇಳುತ್ತಲಿವೆ ಎಂದು ದೊಡ್ಡವರು ಹೇಳುತ್ತಾರೆ. ನನಗೆ ದೇವರು ಮಕ್ಕಳನ್ನು ಕೊಡಲಿಲ್ಲವಲ್ಲಾ ! ಮುಂದೆ ಏನು ಗತಿ ? ಎಂದು ಹೇಳಿಕೊಂಡಳು. ಗಂಡನು-ನೀನು ಹೇಳಿದುದು ನಿಜ, ಆದರೆ ಮಕ್ಕಳಿಂದ ದುಃಖವೇ ಹೊರತು ಸುಖವು ಸ್ವಲ್ಪವಾದರೂ ತೋರುವುದಿಲ್ಲ, ಹಿಂದೆ ಮಕ್ಕಳನ್ನು ಹೆತ್ತು ದಶರಥ ಮುಂತಾದವರು ಬಹಳ ದುಃಖಪಟ್ಟು ದನ್ನು ನೀನು ಅರಿಯೆಯಾ ? ಆ ವ್ಯಸನವನ್ನು ಬಿಟ್ಟು ಮನೆಗೆ ಬಂದವರಿಗೆ ಅನ್ನೋದಕಾದಿಗಳಿಂದ ಆದರಗೈಯುತ್ತಾ ದೇವರ ಧ್ಯಾನವನ್ನು ಮಾಡಿಕೊಂಡು ಇದ್ದರೆ ಅವರನ್ನು ದೇವರು ತನ್ನ ಭಕ್ತರೆಂದು ತನ್ನ ಪಾದಾರವಿಂದದಲ್ಲಿ ಸೇರಿಸಿಕೊಳ್ಳುತ್ತಾನೆ. ಭಯಪಡಬೇಡ. ಮಕ್ಕಳಿಲ್ಲದವರಿಗೆ ಗತಿಯಿಲ್ಲವೆಂದು ಒರಲುವ ವೇದಶಾಸ್ತ್ರಗಳು ಕಲ್ಕ ನಿಷ್ಠರಿಗೆ ಹೇಳಿ ದುವೇ ಹೊರತು ಜ್ಞಾನನಿಷ್ಠರಿಗೆ ಅಲ್ಲ, ಜ್ಞಾನನಿಷ್ಠರಿಗೆ ದೇವರನ್ನು ನಂಬಿಕೊಂಡು ದೇವರ ಧ್ಯಾನವನ್ನು ಮಾಡಿಕೊಂಡಿರುವುದೇ ಮೋಕ್ಷ ಸಾಧನವು, ಇದೇ ನಿಶ್ಚಯವು ಎಂದು ಹೇಳಿದನು. ಆ ಹೆಂಡತಿಯು-ಸ್ವಾಮಿಾ ! ನೆರೆಹೊರೆಯವರೆಲ್ಲಾ
ಪುಟ:ಕಥಾಸಂಗ್ರಹ ಸಂಪುಟ ೧.djvu/೯೨
ಗೋಚರ