ಕಥಾಸಂಗ್ರಹ_೧ನೆಯ ಭಾಗ 79 ಯಲ್ಲಿ ಮಲಗಿ ಇದ್ದು ಕೋಳಿ ಕೂಗುವ ಹೊತ್ತಿನಲ್ಲಿ ಎದ್ದು ಹೊರಟ ಅರಸು ಮಗನನ್ನು ತಲೆಬಾಗಿಲಿನವರೆಗೂ ಕಳುಹಿಸಿ ಆಲಿಂಗಿಸಿ-ನೀನೆನಗೆ ಗಂಡನಾದುದರಿಂದ ಪ್ರತಿರಾತ್ರಿಯ ಹೀಗೆ ದಯಮಾಡಬೇಕೆಂದು ಹೇಳಿ ಕಳುಹಿಸಿಕೊಟ್ಟಳು. ಅರಸು ಮಗನು ಇದೇ ರೀತಿಯಲ್ಲಿ ಮೂರು ದಿವಸ ಮಂಚದ ಮರು ಹವಳದ ಕಾಲನ್ನು ಕೊಟ್ಟು ಮಲಗಿದ್ದು ಬಂದು ನಾಲ್ಕನೆಯ ದಿವಸ ಮಂಚದ ಕಾಲನ್ನು ತೆಗೆದು ಕೊಂಡು ಹೋಗುವಾಗ್ಗೆ ಪೇಟೆಯಲ್ಲಿ ಅಂಗಡಿಯ ಬಾಗಿಲನ್ನು ಹಾಕಿಕೊಂಡು ಬಂದವರಿಗೆ ಕಿಟಿಕಿಯಲ್ಲಿ ವ್ಯಾಪಾರವನ್ನು ಕೊಡುತ್ತಿದ್ದ ಒಬ್ಬ ಮುದಿ ಕೋಮಟಿ ಗನ ಅಂಗಡಿಗೆ ಹೋಗಿ ಒಂದು ಕಾಸಿಗೆ ಎಲೆಯನ್ನು ಕೊಡು ಎಂದು ಕೇಳಿದುದಕ್ಕೆ ಅವನು ಕಿಟಕಿಯಲ್ಲಿ ಕೈನೀಡಿ ಕೊಡಲು ಹಸ್ತವನ್ನು ಕತ್ತರಿಸಿಕೊಂಡು ವಿದ್ಯಾ ಮಂಜರಿಯ ಮನೆಗೆ ಹೋಗಿ ಮಂಚದ ನಾಲ್ಕನೆಯ ಕಾಲನ್ನು ಕೊಟ್ಟು ಆ ದಿವಸ ಸ್ವಲ್ಪ ಹೊತ್ತು ಹೆಚ್ಚಾಗಿ ಅವಳಿ೦ದ ವೀಣಾಗಾನವನ್ನು ಕೇಳುತ್ತಾ ಆ ಮೇಲೆ ಮಲಗಿಕೊಂಡನು. ಆಗೆ ಅವಳು ಇವನ ಹಸ್ತದ ನಡುಬೆರಳನ್ನು ಹಿಡಿದು ಕೊಂಡು ಮಲಗಿದಳು. ಇವನು ನಿದ್ದೆ ಬರುವ ಸಮಯದಲ್ಲಿ ತನ್ನ ಬೆರಳನ್ನು ಮೆಲ್ಲನೆ ಸೆಳೆದು ಕೊಂಡು ತಂದಿದ್ದ ಕೋಮಟಿಗನ ಹಸ್ತದ ಮಧ್ಯಮಾಂಗುಳಿಯನ್ನು ಆಕೆಯ ಕೈಗೆ ಹಿಡುಕೊಳ್ಳುವುದಕ್ಕೆ ಕೊಟ್ಟು ಅವಳಿಗೆ ಚೆನ್ನಾಗಿ ನಿದ್ರೆ ಹತ್ತುವ ವರೆಗೂ ಆ ಹಸ್ತವನ್ನು ತನ್ನ ಕೈಯ್ಯಲ್ಲಿ ಹಿಡಿದು ಕೊಂಡಿದ್ದು ಅವಳಿಗೆ ನಿದ್ರೆಯು ಬಂದುದನ್ನು ತಿಳಿದು ಆ ಹಸ್ತವನ್ನು ಬಿಟ್ಟು ಮೆಲ್ಲನೆ ಎದ್ದು ತಾನು ಕೊಟ್ಟು ಇದ್ದ ಮಂಚದ ಕಾಲುಗಳನ್ನೂ ಇನ್ನೂ ಅಲ್ಲಿದ್ದ ಒಡವೆವಸ್ತುಗಳನ್ನೂ ತೆಗೆದುಕೊಂಡು ಬಾಗಿಲು ಬಿಟ್ಟು ಸಾಗರದಿಂದ ಇಳಿಯಬಿದ್ದು ಹೊರಗೆ ಬಂದು ಆಡು ಗೂಳಜ್ಜಿಯ ಗುಡಿಸಲನ್ನು ಸೇರಿಕೊಂಡನು. ಮೊದಲಿನಂತೆ ಬೆಳಗಿನಲ್ಲಿ ಅಡು ಗೂಳಜ್ಜಿಯು ತಿರಿಗಿ ಬಂದು ನಗುತ್ತಾ - ಕೇಳು ರಾಜಕುಮಾರಾ ! ಈ ದಿನ ಬೆಳಿಗ್ಗೆ ವಿದ್ಯಾಮಂಜರಿಯು ತಂದೆಯ ಬಳಿಗೆ ಬಂದು ಕಳ್ಳನು ನಾಲ್ಕು ದಿನದಿಂದ ಮಾಡಿದ ಸಂಗತಿಯನ್ನೆಲ್ಲಾ ಹೇಳಿ ಈ ಪಟ್ಟಣ ದಲ್ಲಿ ಹೊಸದಾಗಿ ಕಡಿದಿರುವ ಹಸ್ತವುಳ್ಳವನು ಯಾವನೋ ಅವನೇ ಕಲ್ಪನೆಂದು ಹೇಳಿದಳಂತೆ. ಅರಸು ಗೊತ್ತು ಮಾಡಿಸಿ ಕರೆಸಿ ವಿಚಾರಿಸುವಲ್ಲಿ ಆ ಮುದಿಕೋಮಟಿ ಗನು ತನ್ನ ಕಡಿದ ಹಸ್ತದ ಸಂಗತಿಯನ್ನು ಹೇಳಲು ; ಇವನು ಕಳ್ಳನಲ್ಲ, ಎಂದು ಬಿಟ್ಟು ಬಿಟ್ಟು ಅನ್ನ ವನ್ನು ಬಿಟ್ಟು ಪ್ರಾಣಗಳನ್ನು ಕಳಕೊಳ್ಳುತ್ತೇನೆಂದು ಬಿದ್ದು ಇದ್ದಾನಂತೆ ಎಂದು ಹೇಳಿದಳು. ರಾಜಕುಮಾರನು ಅರಸಿನ ಅರಮನೆಯ ಮುಂದೆ ಒಂದು ಗುಡಾರವನ್ನು ಹಾಕಿಸಿಕೊಂಡು ತಾನು ಆ ಪಟ್ಟಣದಲ್ಲಿ ಕದ್ದ ಪದಾರ್ಥಗಳೆ ಲ್ಲವನ್ನು ಹರವಿಕೊಂಡು ಸರ್ವಾಲಂಕಾರ ಭೂಷಿತನಾಗಿ” ದಿಂಬನ್ನು ಒರಗಿಕೊಂಡು ಘನ ವರ್ತಕನಂತೆ ಕೂತು ಕೊಂಡು ಇದ್ದನು. ಇದನ್ನು ಕೇಳಿ ಅರಸು ಅತ್ಯಾಕ್ಷರ ಗೊಂಡು ಮಂತ್ರಿ ಮೊದಲಾದ ಸಾಮಾಜಿಕರೊಡನೆ ಕೂಡಿ ಆ ಬಳಿಗೆ ಹೋಗಲು ; ಈ ರಾಜಕುಮಾರನು ಎದುರಾಗಿ ಎದ್ದು ಬಂದು ಮಾವನಾದ ಅರಸಿನ ಪಾದಗ
ಪುಟ:ಕಥಾಸಂಗ್ರಹ ಸಂಪುಟ ೧.djvu/೯೧
ಗೋಚರ