78 KANARESE SELECTIONS-PART I ಕಾಲುಗಳನ್ನು ಕಟ್ಟಿ ಸದಾ ಹೆಗಲಿಗೆ ತಗಲುಹಾಕಿಕೊಂಡಿದ್ದಾನೆ ಅಂದನು. ಅವ ನನ್ನು ಹಿಡಿದು ಕೊಟ್ಟೆಯಾ ? ಎಂದು ಪ್ರಧಾನಿಯು ಕೇಳಲು ಇವನು- ಅದಕ್ಕೊಂದು ಉಪಾಯವನ್ನು ಮಾಡಬೇಕು. ದಯಮಾಡಿಸಿರಿ ಎಂದು ತನ್ನ ಗುಡಿಸಲಿನ ಬಳಿಗೆ ಕರಕೊಂಡು ಹೋಗಿ ತಾವು ಈ ಪೆಟ್ಟಿಗೆಯಲ್ಲಿ ಮಲಗಿಕೊಂಡಿರಿ, ಆ ಕಳ್ಳನು ಬಂದು ಎನಾದರೂ ವ್ಯಾಪಾರವನ್ನು ಕೇಳುವಾಗ ಆ ಪೆಟ್ಟಿಗೆಯಲ್ಲಿ ಇದೆ ತೆಗೆದುಕೋ ಅನ್ನುತ್ತೇನೆ ಅವನು ಒಂದು ಮುಚ್ಚಳವನ್ನು ತೆರೆಯುವಾಗ ಸ್ವಾಮಿಯವರು ಅವನ ಜುಟ್ಟನ್ನು ಹಿಡುಕೊಂಡರೆ ಹವಳದ ಮಂಚದ ಕಾಲುಗಳೊಡನೆ ಸಿಕ್ಕುತ್ತಾನೆ ಅನ್ನಲು ಮಂತ್ರಿಯು ನಂಬಿ ಪೆಟ್ಟಿಗೆಯೊಳಗೆ ಮಲಗಿಕೊಂಡನು. ಇವನು ಎರಡು ಗಳಿಗೆಯ ಮೇಲೆ ಆ ಪೆಟ್ಟಿಗೆಗೆ ಬೀಗವನ್ನು ಹಾಕಿ ಮುದ್ರೆ ಮಾಡಿ ಅಲುಗದಂತೆ ತಲೆಯ ಮೇಲೆ ಹೊತ್ತುಕೊಂಡು ಕೋಟೆಯ ಮೇಲೆ ಹತ್ತಿ ಅದನ್ನು ಅಗಳಿಗೆ ಎತ್ತಿ ಹಾಕಿಬಿಟ್ಟು ಒಂದು ಅಡುಗೂಳಜ್ಜಿಯ ಮನೆಯನ್ನು ಸೇರಿದನು. ಪ್ರಾತಃಕಾಲದಲ್ಲಿ ಅಡುಗೂಳಜ್ಜಿಯು ಸುತ್ತಿ ಬಂದು-ಕೇಳಪ್ಪಾ ದೊರೆಯ ಮಗನೇ : ಬೆಳಿಗ್ಗೆ ಮಂತ್ರಿಯು ಚಾವಡಿಗೆ ಬಾರದುದರಿಂದ ಕಳ್ಳನು ಏನು ಮಾಡಿ ದನೋ ಎಂದು ಅರಸು ಚಿಂತೆಪಟ್ಟು ಎಲ್ಲಿ ಹುಡುಕಿಸಿದಾಗ ಸಿಕ್ಕಲಿಲ್ಲವಂತೆ. ಅಗಳಲ್ಲಿ ಮಾತ್ರ ಒಂದು ಸೆಟ್ಟಿ ಗೆಯು ತೇಲುವ ಸುದ್ದಿಯನ್ನು ಕೇಳಿ ಅದನ್ನು ಚಾವಡಿಗೆ ತರಿಸಿ ನೋಡುವಲ್ಲಿ ಅದರೊಳಗೆ ಮಂತ್ರಿಯು ಮಲಗಿದ್ದನಂತೆ. ಆಗ ಅರಸು ನೊಂದುಕೊಂಡು ಮಂತ್ರಿಯನ್ನು ಮನೆಗೆ ಕಳುಹಿಸಿ ತಾನು ಬಹಳ ಚಿಂತೆ ಯಿಂದ ಅನ್ನೊದಕಗಳನ್ನು ಬಿಟ್ಟು ಮಲಗಿಕೊಂಡನಂತೆ. ಈ ಸುದ್ದಿಯನ್ನು ಅರಸಿನ ಮಗಳು ವಿದ್ಯಾಮಂಜರಿಯು ಮೊದಲಿನಿಂದ ವಿಸ್ಕಾರವಾಗಿ ಕೇಳಿ ಇವೆಲ್ಲ ವೂ ತನ್ನ ಮನೋನಿಶಿ ತಪತಿಯಾದ ರಾಜಕುಮಾರನ ಕೆಲಸವೆಂದು ನಿಶ್ಚಯಿಸಿ ತಂದೆಯ ಬಳಿಗೆ ಬಂದು--ಅಪ್ಪಾಜಿಯವರೇ ! ಇದಕ್ಕೆ ಯಾಕೆ ಚಿಂತೆಪಡುತ್ತೀರಿ ? ಆ ಕಳ್ಳನು ಇಂಧ ವನು ಎಂಬುವುದು ನನಗೆ ತಿಳಿಯುವುದು, ಈ ಹೊತ್ತಿಗೆ ನಾಲ್ಕು ದಿವಸದಲ್ಲಿ ಅವ ನನ್ನು ಹಿಡಿದು ಕೊಡುತ್ತೇನೆ. ಹವಳದ ಮಂಚದ ಕಾಲನ್ನು ಯಾವನು ತಂದು ಕೊಡು ತಾನೋ ಅವನನ್ನು ನನ್ನ ಮಗಳು ಗಂಡನನ್ನಾಗಿ ವರಿಸುತ್ತಾಳೆಂದು ಈ ಪಟ್ಟಣದೊ ಆಗೆಲ್ಲ ಸಾರಿಸು ಅಂದಳಂತೆ. ಇಗೋ ! ದಂಡೋರ ಹಾಕಿ ಸಾರಿಕೊಂಡು ಬರು ತಾರೆ ಅ೦ದಳು. ಅದನ್ನು ಕೇಳಿ ಅರಸು ಮಗನು ಕ್ಷೌರವನ್ನು ಮಾಡಿಸಿಕೊಂಡು ಸ್ನಾ ನವನ್ನು ಮಾಡಿ ದಿವ್ಯಾಂಗರಾಗಗಳನ್ನು ಪೂಸಿಕೊಂಡು ದಿವ್ಯವಸ್ಯಗಳ ನ್ನು ಟ್ಟು ದಿವ್ಯಾಭರಣಗಳನ್ನು ತೊಟ್ಟು ತಾಂಬೂಲವನ್ನು ಹಾಕಿಕೊಂಡು ಮದು ವೆಗೆ ತೆರಳುವ ಹೊಸ ಮದವಣಿಗನ ಹಾಗೆ ಹವಳದ ಮಂಚದ ಕಾಲೊಂದನ್ನು ತೆಗೆ ದುಕೊಂಡು ವಿದ್ಯಾಮಂಜರಿಯ ಅರಮನೆಗೆ ಹೋಗಲು ಆಕೆಯು ಎದ್ದು ಕಾಲನ್ನು ತೊಳೆದು ತನ್ನ ಸೀರೆಯ ಸೆರಗಿನಿಂದ ಒತ್ತಿ ಕೈಹಿಡಿದು ಕೊಂಡು ಹೋಗಿ ಮಂಚದ ಮೇಲೆ ಕೂರಿಸಿ ಪುಷ್ಪಮಾಲಿಕೆಯನ್ನು ಕೊರಳಿಗೆ ಹಾಕಿ ಆತನು ಕೊಟ್ಟ ಹವಳದ ಮಂಚದ ಕಾಲನ್ನು ತೆಗೆದು ಇಟ್ಟು ಇಬ್ಬರೂ ಕೂಡ ಉಂಡು ರಾತ್ರಿ
ಪುಟ:ಕಥಾಸಂಗ್ರಹ ಸಂಪುಟ ೧.djvu/೯೦
ಗೋಚರ