ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಥಾಸಂಗ್ರಹ-೧ ನೆಯ ಭ7ಗ ಅವರು--ಬುದ್ದೀ ! ಅಪ್ಪಣೆಯ ಪ್ರಕಾರ ಎಂದು ಹೋದರು. ಇವನು ಅಡುಗಳ ಜೈಯ ಮನೆಗೆ ಹಿಂದು ಮಲಗಿಕೊಂಡನು.
- ಪ್ರಾತಃಕಾಲದಲ್ಲಿ ಅಡುಗೂಲಜ್ಜಿಯು ತಿರುಗಿ ಬಂದು-ಅರಸುಮಗನೇ ! ಕೇಳು, ನಿನ್ನೆಯ ರಾತ್ರಿಯಲ್ಲಿ ಸೇನಾಪತಿಯು ಕಳ್ಳನನ್ನು ಹಿಡಿದು ತರಿಸಿ ಸೆರೆಮನೆ ಯಲಿ ಹಾಕಿಸಿದಾನೆಂದು ಮಂತ್ರಿಯು ಕೇಳಿ ಸಾಮಾಜಿಕರೊಡನೆ ಸೆರೆಮನೆಯ ಬಳಿಗೆ ಬಂದು ಕುಳಿತುಕೊಂಡು ಬೀಗವನ್ನು ತೆಗೆಸಿ ಒಳಗಿದ್ದವನನ್ನು ಹಿಡಿದು ತರಿಸಿ ನೋಡಿ ಕಳ್ಳನು ದಳವಾಯಿಯನ್ನು ಈ ಅವಸ್ಥೆಗೆ ತಂದನೇ ? ಎಂದು ಬಹಳವಾಗಿ ವ್ಯಸನಪಟ್ಟು ದಳವಾಯಿಯನ್ನು ಮನ್ನಿಸಿ ಸಮಾಧಾನಗೊಳಿಸಿ ಮನೆಗೆ ಕಳುಹಿಸಿಬಿಟ್ಟು ಈ ದಿನ ಕಳ್ಳನನ್ನು ಹಿಡಿಯ ತಕ್ಕ ಬಗ್ಗೆ ಮಂತ್ರಿಯು ತಾನೇ ಹೊರಡುತ್ತಾನಂತೆ ಎಂದು ಹೇಳಿ ದಳು, ಅರಸುಮಗನು' ಆದಿವಸ ಸಾಯಂಕಾಲವಾದ ಮೇಲೆ ಬಂದು ಕೋಟೆಯ ಬುಡದ ಮೂಲೆಯಲ್ಲಿ ಒಂದು ಗುಡಿಸಲು ಮಾಡಿಕೊಂಡು ಬಿದುರು ಚಿಬ್ಬಲುಗಳಲ್ಲಿ ಒಂದಷ್ಟು ಭಂಗಿಯಸೊಪ್ಪು ಹೊಗೆಯಸೊಪ್ಪು ಎಲೆ ಅಡಿಕೆ ಹುರಿಗಡಲೆ ಉಪ್ಪುಕಡಲೆ ಅವಲಕ್ಕಿ ಬೆಲ್ಲಗಳನ್ನು ಇಟ್ಟು ಕೊಂಡು ಮಿಣಮಿಣನೆ ಉರಿಯುವ ಒಂದು ದೀಪ ವನ್ನು ಹಚ್ಚಿ ಕೊಂಡು ಹರಕ೦ಗಿಯನ್ನು ತೊಟ್ಟು ಕೊಂಡು ಒಲು ರುಮಾಲು ಸುತ್ತಿ ತೇಪೆಯ ಪಂಚೆಯನ್ನು ಉಟ್ಟು ಕೊಂಡು ಕಂತೆಬೊ೦ತೆ ಬೈರವಾಸವನ್ನು ಹೊದ್ದು ಕೊಂಡು ಮೇಲ್ಕಂಡ ಸಾಮಾನುಗಳನ್ನು ಇಡುವುದಕ್ಕೆ ಒಂದು ದೊಡ್ಡ ಪೆಟ್ಟಿಗೆಯನ್ನು ಇಟ್ಟು ಕೊಂಡು ಮಾರುವ ಬಡ ಕೋಮಟಿಗನಂತೆ ಕೂತು ಇದ್ದನು. ಆ ದಿವಸ ಜಾವ ರಾತ್ರಿಯಲ್ಲಿ ಸಕಲಾತಿ ಗೋಟನ್ನು ಮುಸುಕು ಹಾಕಿಕೊಂಡು ಪ್ರಧಾನಿಯೊಬ್ಬನೇ ಇವನ ಗುಡಿಸಲಿನ ಬಳಿಗೆ ಬರುತ್ತಾ ಇರುವಲ್ಲಿ ಇವನು ದೂರದಲ್ಲಿಯೇ ಕಂಡು ಒಂದು ತಟ್ಟೆಯಲ್ಲಿ ಚಿಗುರೆಲೆ ಅಡಿಕೆ ಲವಂಗ ಜಾಯಿ ಕಾಯಿ ದ್ರಾಕ್ಷಿ ಬಿಳಿಯ ಕಲ್ಲು ಸಕ್ಕರೆ ನಿಂಬೆಯ ಹಣ್ಣುಗಳನ್ನು ಇಟ್ಟು ಕೊಂಡು ನಡುವನ್ನು ಬೊಗ್ಗಿಸಿಕೊಂಡು ತಲೆಯನ್ನು ನಡುಗಿಸುತ್ತಾ ಎದುರಿಗೆ ಒಂದು ಕೈ ಕಾಣಿಕೆಯನ್ನು ಕೊಟ್ಟು ಅಡ್ಡ ಬಿದ್ದು--ಬುದ್ಧಿ ? ನಾನು ಪರಸ್ಥಳದ ಒಡಕೋಮಟಿಗನು ಈ ಊರಿಗೆ ಬಂದು ಎರಡು ತಿಂಗಳಾಯಿತು. ಎರಡು ತಿಂಗಳಿಂದಲೂ ಈ ಊರ ಸೆಟ್ಟರು ಯಜಮಾನ ರನ್ನು ಕುರಿತು ಒಂದು ಅಂಗಡಿಯನ್ನು ಮಾಡಿಸಿಕೊಡಿರಿ ಎಂದು ಎಷ್ಟು ವಿಧವಾಗಿ ಹೇಳಿಕೊಂಡಾಗ ಬಡವನ ಮಾತನ್ನು ಗಣನೆಗೆ ತರಲಿಲ್ಲ; ಒಂದು ವೇಳೆ ಸ್ವಾಮಿ ಯವರ ಅಪ್ಪಣೆಯು ಆಗಬೇಕೆಂದು ಬೇಡಿಕೊಳ್ಳಲು ಒಳ್ಳೆಯದು ಎಂದು ಪ್ರಧಾನಿಯು ಹೇಳಿ ಮುಂದಕ್ಕೆ ಹೋದನು. ಇವನು ಹಿಂದಕ್ಕೆ ಬಂದವನ ಹಾಗೆ ಸ್ಪಲ್ಪದೂರ ಬಂದು ತಿರಿಗಿ ಪ್ರಧಾನಿಯ ಬಳಿಗೆ ಹೋಗಿ ಬಟ್ಟೆ ಯಲ್ಲಿ ಬಾಯಿ ಮುಚ್ಚಿಕೊಂಡು ಮೆಲ್ಲನೆ-ಕಳ್ಳನ ಹಿಡಿಯತಕ್ಕ ಬಗ್ಗೆ ದಯಮಾಡಿದುದಾಗಿ ಕೇಳುತ್ತೇನೆ ಈಗ ಹದಿ ನೈದು ದಿವಸದಿಂದ ಅರ್ಧರಾತ್ರಿಯಲ್ಲಿ ಇಲ್ಲಿಗೆ ಒಬ್ಬನು ಬಂದು ಭಂಗಿಯಗೊಪ್ಪ
ಮುಂತಾದುದನ್ನು ತೆಗೆದು ಕೊಂಡು ಹೋಗುತ್ತಾನೆ. ಅವನ ಚಾಳಿಯನ್ನು ನೋಡಿ ದರೆ ಕಳ್ಳನಂತೆ ಕಾಣಿಸುತ್ತಾನೆ, ಒಂದು ಪಾವಡೆಯಲ್ಲಿ ನಾಲ್ಕು ಹವಳದ ಮಂಚದ