KANARESE SELECTIONSPART I ನಡುಕಟ್ಟಿನಲ್ಲಿ ಕತ್ತಿಯನ್ನು ಸಿಕ್ಕಿಸಿ ಕರಿಯ ಶಾಲುಜೋಡಿಯನ್ನು ಮುಸುಕು ಹಾಕಿಕೊಂಡು ಜೋಡು ಗಳನ್ನು ಮೆಟ್ಟಿ ಕೊಂಡು ತನ್ನ ಕಡೆಯ ಐವತ್ತು ಮಂದಿ ಓಲೇಕಾರರನ್ನು ಆಯ ಧಸಹಿತವಾಗಿ ಊರು ಹೊರಗಿರುವ ಉಕ್ಕಡದ ಬಳಿಯಲ್ಲಿ ನಿಲ್ಲಿಸಿ ಕಳ್ಳರು ಸಂಚಾರ ಮಾಡುವ ಜಾಗಗಳನ್ನು ನೋಡುತ್ತಾ ಈ ಅರಸುಮಗನು ಮೈಲಿಗೆ ತೊಳೆಯುತ್ತಿದ್ದ ಕೆರೆಯ ಬಳಿಗೆ ಬಂದು ಅವನು ಯಾರೆಲಾ ! ಸಮ ರಾತ್ರಿಯ ಹೊತ್ತಿನಲ್ಲಿ ಒಗೆಯುವವನು ? ಎಂದು ಕೇಳಲು ; ಬುದ್ದಿ ! ನಾನು ಅಗಸರ ತಿಮ್ಮ ಕಳ್ಳ ಕಾಕರ ಬಟ್ಟೆಗಳನ್ನು ಒಗೆದುಕೊಂಡು ಹೊಟ್ಟೆಯಪಾಡು ಮಾಡಿಕೊಂಡಿದ್ದೇನೆ "ಕಳ್ಳರು ಹಗಲು ಹೊತ್ತು ತಿರುಗುವುದಿಲ್ಲ ವೆಂದು ಪಾದಕ್ಕೆ ಅರಿಕೆ ಇದೆಯಷ್ಟೆ. ಅವರು ಇಲ್ಲಿಗೆ ಸಮರಾತ್ರಿಯ ಹೊತ್ತಿನಲ್ಲಿ ಬಂದು ಮಡಿ ಬಟ್ಟೆ ಗಳನ್ನು ತೆಗೆದು ಕೊಂಡು ಮೈಲಿಗೆ ಬಟ್ಟೆಗಳನ್ನು ಹಾಕಿ ಹೋಗುತ್ತಾರೆ ಅಂದನು. ದಳವಾಯಿಯು-ನಿನಗೆ ಸಂಬಳವನ್ನು ಮಾಡಿಸಿಕೊಡುತ್ತೇನೆ ಆ ಕಳ್ಳರನ್ನು ಹಿಡಿ ದು ಕೊಟ್ಟಿಯ ? ಎಂದು ಕೇಳಿದನು ಅರಸು ಮಗನು--ಬುದ್ದೀ ! ಸಂಬಳವಾದರೆ ಈ ಹಾಳು” ಹೊಲೆಬಾಳು ತಪ್ಪಿ ಬದುಕಿಕೊಂಡೇನು. ತಾವು ನಾಲ್ಕು ಗಳಿಗೆ ಬಿಟ್ಟು ಕೊಂಡು ಒಬ್ಬರೇ ದಯಮಾಡಿಸಿದರೆ ಕಳ್ಳರನ್ನು ತೋರಿಸಿಕೊಡುತ್ತೇನೆ ಅನ್ನ ಲು ; ದಳವಾಯಿಯು ಹೊರಟು ಹೋದನು. ಬಳಿಕ ಇವನು ಕೈ ಸೋರೆಯಬುರುಡೆಗಳ ನೈಲ್ಲಾ ತೆಗೆದುಕೊಂಡು ಕೆರೆಯ ಬಳಿಗೆ ಹೋಗಿ ಆ ಬುರುಡೆಗಳನ್ನೆಲ್ಲಾ ನೀರಿನ ಮೇಲೆ ತೇಲ ಬಿಟ್ಟು ಮುಂಚೆ ಇದ್ದ ಬಳಿಗೆ ಬಂದು ಒಗೆಯುತ್ತಾ ಇದ್ದನು. ತಿರಿಗಿ ದಳವಾಯಿಯು ಬಂದ ಮೇಲೆ-ಆಗೋ ಬುದ್ದಿ ! ಕಳ್ಳರೆಲ್ಲರೂ ಕೆರೆಯ ಒಳಗೆ ಈಜಿಕೊಂಡು ಬರುತ್ತಾರೆ ; ನೋಡಿ ! ಎನ್ನಲು ದಳವಾಯಿಯು-ಎಲಾ ಆಗಸಾ ! ನೀನೊಂದು ಕೆಲಸ ಮಾಡು, ನಿನ್ನ ಒಟ್ಟಿಗಳನ್ನು ನನಗೆ ಕೊಟ್ಟು ನನ್ನ ಬಟ್ಟೆಗಳ ನ್ನೆಲ್ಲಾ ನೀನು ತೊಟ್ಟು ಕೊಂಡು ನನ್ನ ಕತ್ತಿಯನ್ನು ಹಿಡಿದುಕೊಂಡು ಓಡಿ ಹೋಗಿ ಹೊರ ಉಕ್ಕಡದ ಬಳಿಯಲ್ಲಿರುವ ನಮ್ಮ ಕಡೆಯ ಓಲೇಕಾರರನ್ನು ತಟ್ಟನೆ ಕರಕೊಂಡು ಬಾ, ಆ ವರೆಗೂ ನಿನ್ನರಿವೆಯನ್ನು ನಾನು ಉಟ್ಟುಕೊಂಡು ಒಗೆಯು ತ್ತಾ ಬಂದ ಕಳ್ಳರನ್ನು ಸಮದಾಯಿಸಿಕೊಂಡು ನಿಲ್ಲಿಸಿಕೊಂಡಿರುತ್ತೇನೆ ಎನ್ನಲು ಇದು ಸರಿ ಬುದ್ದಿ ! ಒಳ್ಳೆಯ ಉಪಾಯವನ್ನು ತೆಗೆದಿರಿ ; ಇನ್ನೇನು ಕಳ್ಳರು ಸಿಕ್ಕಿದರು ? ಬಿಡಿ ? ಎಂದು ಹೇಳಿ ತನ್ನ ಬಟ್ಟೆ ಗಳನ್ನು ದಳವಾಯಿಗೆ ಕೊಟ್ಟು ಅವನ ಬಟ್ಟೆಗಳನ್ನು ತಾನು ಹಾಕಿ ಕೊಂಡು ಆತನ ಕತ್ತಿ ಯನ್ನು ತೆಗೆದು ಕೊಂಡು ಓಡುತ್ತಾ ಹೊರ ಉಕ್ಕುಡದ ಬಳಿಗೆ ಬಂದು ಓಲೇಕಾರರ ಹೋಬಳಿದಾರನನ್ನು ಕರೆದು--ಇಗೋ ! ಸುಡುಗಾಡಿನ ಬಳಿಯ ಕೆರೆಯಲ್ಲಿ ಕಳ್ಳನು ಅಗಸನ ಹಾಗೆ ಒಗೆಯುತ್ತಾನೆ. ನೀನು ಆಳುಗಳನ್ನು ಕಟ್ಟಿ ಕೊಂಡು ಅಲ್ಲಿಗೆ ಹೋಗಿ ಅವನು ಏನು ಹೇಳಿಕೊಂಡಾಗ ನಂಬದೆ ಹೋದ ಭರಕ್ಕೆ ಹಿಂಗಟ್ಟು ಮುರಿಯನ್ನು ಕಟ್ಟಿ ಜತನದಿಂದ ಕರಕೊಂಡು ಬಂದು ಸೆರೆಮನೆಯಲ್ಲಿ ಒಂದು ಕೊಟಡಿಯಲ್ಲಿ ಕೂಡಿ ಹೊರ ಬೀಗವನ್ನು ಹಾಕಿಕೊಂಡು ಅಲ್ಲಿಯೇ ನೀವೆ ಲ್ಲರೂ ಕಾದು ಇರಿ, ನಾವು ಬೆಳಿಗ್ಗೆ ಬಂದು ವಿಚಾರಿಸುತ್ತೇವೆಂದು ಅಪ್ಪಣೆ ಕೊಡಲು
ಪುಟ:ಕಥಾಸಂಗ್ರಹ ಸಂಪುಟ ೧.djvu/೮೮
ಗೋಚರ