ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ ನೆಯ ಭಾಗ 75 ನೋಡೋಣ ಅನ್ನಲು ತಳವಾರನು ಕೀಲನ್ನು ಹಾಕಿ ಸುಮಾರಾಗಿ ಜಡಿದನು. ರಾಜ ಕುಮಾರನು--ಹಾಹಾ ! ಸರಿ ಸರಿ ! ಇದು ಒಳ್ಳೆಯ ಶಿಕ್ಷೆ ಎಂದು ಹೇಳೆ ಕೀಲನ್ನು ಕೀಳಿಸಿಕೊಂಡು ತನ್ನ ಕೈ ತೆಗೆದು--ಎಲ್ಲಿ ಭಾವ ನೀನು ? ಕೈ ಹಾಕು ; ನನಗೆ ಕೀಲು ಜಡಿಯುವುದಕ್ಕೆ ಬರುತ್ತದೋ ? ನೋಡೋಣ ಎಂದು ಅವನ ಕೈ ಹಾಕಿಸಿ ಕೀಲನ್ನು ಗಟ್ಟಿ ಯಾಗಿ ಜಡಿದು ತೆಗೆಯುವುದಕ್ಕೆ ಅಲ್ಲಾಡಿಸಿ ನೋಡಿ-ಭಾವ ! ಬರುವುದಿಲ್ಲ ಅನ್ನಲು ತಳವಾರನು--ಇಲ್ಲಿಯೇ ಇಳಿದು ಹೋಗಿ ಮನೆಯಲ್ಲಿ ಕೇಳಿ ಕೈ ಬಾಕಿಯನ್ನು ತೆಗೆದು ಕೊಂಡು ಬಾ ಅಂದನು. ಇವನು ಇಳಿದು ಒಳಗೆ ಬಂದು ಅಕ್ಕನನ್ನು ಕರೆದು ಕಿವಿಯಲ್ಲಿ-ಆಕ್ಯಾ ! ಕಳ್ಳರು ಭಾವನನ್ನು ಕೊಂದುಹಾಕಬೇ ಕೆಂದು ಯತ್ನವನ್ನು ಮಾಡಲು ; ಭಾವನು- ನನ್ನ ವಿತ್ತಾಪಾರವೆಲ್ಲಾ ಕೊಡು ತೇನೆ ; ನನ್ನನ್ನು ಬಿಟ್ಟು ಬಿಡಿರಿ ಎಂದು ಹೇಳಿದುದಕ್ಕೆ ಅವರು--ತರಿಸು ಅನ್ನ ಲು ನನ್ನನ್ನು ಕಳುಹಿಸಿದನು ಕಳ್ಳರು ಬಹು ಗಟ್ಟಿಗರು. ಈ ಹೊತ್ತಿಗೆ ನಿನ್ನ ತಾಳಿ ಒಂದು ಉಳಿದರೆ ಸಾಕು ಭಾವನ ಜೀವ ಒಂದು ಇದ್ದರೆ ಇಂಧಾದುದು ಬೇಕಾದಷ್ಟು ಸಂ ಪಾದಿಸಿಕೊಳ್ಳಬಹುದು. ಇದ್ದುದನ್ನೆಲ್ಲಾ ಬೇಗ ಕೊಡು ಅಂದನು. ಅವಳು ತಟ್ಟನೆ ಎದ್ದು ಮನೆಯಲ್ಲಿ ಇದ್ದ ಒಡವೆವಸ್ತುಗಳನ್ನೆಲ್ಲ ಸೊಪ್ಪ ಸುತ್ತಿ ಗಂಟು ಕಟ್ಟಿ ಕೊಟ್ಟಳು. ಇವನು ಅದನ್ನೆಲ್ಲಾ ತೆಗೆದು ಕೊಂಡು ಬೀದಿಯ ಬಾಗಿಲಲ್ಲಿ ಹೊರಟು ನೆಟ್ಟನೆ ಅಡು ಗೂಳಜ್ಜೆಯ ಗುಡಿಸಲಿಗೆ ಹೋಗಿ ಮಲಗಿ ಕೊಂಡನು. ಬೆಳಿಗ್ಗೆ ಪುನಃ ಅಡುಗೂಳಜ್ಜಿ ಯು ಸುತ್ತಿ ಬಂದು--ಅಪ್ಪಾ ! ಮಂತ್ರಿಯು ತಳವಾರನಿಗೆ ಕೈಕೋಳಬಿದ್ದಿರುವುದನ್ನು ತಿಳಿದು ಅವನ ಕೈಕೋಳವನ್ನು ತೆಗಿಸಿ ಕರಿಸಿ ನೀನು ಅವನಿಗೆ ಮಾಡಿದ ಮೋಸವನ್ನೆಲ್ಲಾ ಅವನಿಂದ ಕೇಳಿ ವ್ಯಸನಪಡುವಾಗ ಸೇನಾಧಿ ಪತಿಯು ರಾಯನ ಬಳಿಗೆ ಬಂದು--ಆ ಕಳ್ಳನು ಬಲು ಗಟ್ಟಿಗ ! ಅವನು ಯಾರಿಗೂ ಸಿಕ್ಕುವುದಿಲ್ಲ, ನಾನು ಈ ದಿನ ಅವನನ್ನು ಹಿಡಿದು ಕೊಡುತ್ತೇನೆ. ನನ್ನ ಸಾಮಧ ವನ್ನು ನೋಡಿ ಎಂದು ಹೇಳಿ ತಾಂಬೂಲವನ್ನು ತೆಗೆದು ಕೊಂಡು ಇದ್ಯಾನಂತೆ ಎಂದು ಹೇಳಿದುದನ್ನು ಕೇಳಿ ಅರಸು ಮಗನು ಸಾಯಂಕಾಲದಲ್ಲಿ ತನ್ನ ಊಟ ಉಪಚಾರ ಗಳನ್ನು ತೀರಿಸಿಕೊಂಡು ಕಣ್ಣೆಯ ಅರಿವೆಯನ್ನು ಕಟ್ಟಿಕೊಂಡು ತಲೆಗೆ ಒಂದು ಪಾವಡೆಯನ್ನು ಸುತ್ತಿ ಕೆಲವು ಮಡಿಮಾಡಿದ ಬಟ್ಟೆಗಳನ್ನೂ ಕೆಲವು ಮೈಲಿಗೆ ಬಟ್ಟೆ ಗಳನ್ನೂ ಕ್ರಯಕ್ಕೆ ತೆಗೆದು ಕೊಂಡು ನಾಲ್ಕೆದು ಕತ್ತೆಗಳ ಮೇಲೆ ಅವುಗಳನ್ನು ಹೇರಿ ಕೊಂಡು ಹತ್ತು ಹದಿನೈದು ಕೈಸೋರೆದು ಬರುಡೆಗಳಿಗೆ ನಾನಾ ಬಣ್ಣದ ರುಮಾ ಲುಗಳನ್ನು ಸುತ್ತಿ ಅವುಗಳನ್ನೂ ತೆಗೆದುಕೊಂಡು ಪಟ್ಟಣಕ್ಕೆ ಕೊಂಬಿನಕೂಗು ದೂರ ದಲ್ಲಿರುವ ಸುಡುಗಾಡಿನ ಬಳಿಯ ಕೆರೆಯ ಏರಿಯ ಮೇಲೆ ಮಡಿ ಬಟ್ಟೆಗಳನ್ನೆಲ್ಲಾ ಮಡಿಸಿ ಗಳಿಗೆ ಮಾಡಿ ಇಟ್ಟು ಮೈಲಿಗೆಯ ಬಟ್ಟೆ ಗಳನ್ನು ನೀರಿನದಡದಲ್ಲಿಟ್ಟು, ಕತ್ತೆ ಗಳ ಕಾಲುಗಳನ್ನು ಕಟ್ಟಿ ಕೆರೆಯ ಹುಲ್ಲಿಗೆ ಅಟ್ಟಿ ಅರಿವೆಗಳನ್ನು ಒಗೆಯುತ್ತಾ ಇದ್ದನು. ರಾತ್ರಿ ಹತ್ತು ಗಳಿಗೆಯಲ್ಲಿ ದಳವಾಯಿಯು ನಿರಾಸೆಯ ವಾಗು ಸುತ್ತಿ ಕೊಂಡು ಕಿನ್ನಾ ಪಿನ ಕಾಲುಕುಪ್ಪಸವನ್ನು ತೊಟ್ಟು ದಮಾಸ್ ಚೊಗೆಯನ್ನು ಇಟ್ಟು