ಪುಟ:ಕಥಾಸಂಗ್ರಹ ಸಂಪುಟ ೧.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

74 KANARESE SELECTIONS-PART I ಇವುಗಳನ್ನೆಲ್ಲಾ ಒಂದು ಹಸಭೆಯ ಚೀಲದಲ್ಲಿ ಹಾಕಿ ಒಂದು ದೇಶದ ತಟ್ಟುವಿನ ಮೇಲೆ ಏರಿಕೊಂಡು ಸಾಯಂಕಾಲವಾದ ಜಾವ ಹೊತ್ತಿಗೆ ಆ ತಳವಾರನ ಮನೆಗೆ ಹೋಗಿ ಬಾಗಿಲಲ್ಲಿ ನಿಂತು-ಅಕ್ಷಾ ! ಅಕ್ಷಾ ! ಎಂದು ಕೂಗಲು ; ತಳವಾರನ ಹೆಂಡತಿಯು ಒಳಗೆ ಕೇಳಿ-ಇದೇನು ಪುಣ್ಯ ? ಅಕ್ಕಾ ! ಎಂಬುವ ಸೊಲ್ಲು ಕಿವಿಗೆ ಬಿದ್ದಿತು. ತಮ್ಮನೇನಾದರೂ ಬಂದನೋ ? ಎಂದು ಹೆಚ್ಚಳದಿಂದ ಬಾಗಿಲಿಗೆ ಬಂದು ಕದವನ್ನು ತೆಗೆಯಲು ; ಇವನು ಕುದುರೆಯಿಂದ ಇಳಿದು ಆಕೆಗೆ ಕಾಲು ಮುಟ್ಟಿ ನಮಸ್ಕಾರವನ್ನು ಮಾಡಿ ಹಾಗೇ ಒಳಹೊಕ್ಕು-ಭಾವ ಎಲ್ಲಿ ? ಎಂದು ಕೇಳುತ್ತಾ ತಳವಾರನ ಬಳಿಗೆ ಹೋಗಿ ಅವನಿಗೂ ನಮಸ್ಕರಿಸಿ ತಟ್ಟುವನ್ನು ಬಾಗಿಲಲ್ಲಿ ಕಟ್ಟಿ ಹಸಭೆಯ ಚೀಲವನ್ನು ಒಳಗೆ ತೆಗೆದು ಕೊಂಡು ಬಂದನು. ಆಗ ಆಕೆ ತನ್ನ ಮಕ್ಕ ಇನ್ನು ಅಡ್ಡ ಬೀಳಿಸಿ-.ಇಗೋ ಅಪ್ಪಾ ! ಇವಳು ನಿನ್ನ ಸೋದರಸೊಸೆ ಇವನು ನಿನ್ನ ಸೋದರಳಿಯನೆಂದು ಹೇಳಲು ಇವನು ಇಬ್ಬರನ್ನೂ ಬಾಚಿ ತಬ್ಬಿಕೊಂಡು ಮುತ್ತು ಕೊಟ್ಟು ಮುದ್ದಾಡಿ ತೊಡೆಗಳ ಮೇಲೆ ಕೂರಿಸಿಕೊಂಡು--ಇವರು ಹುಟ್ಟಿ ರುವುದನ್ನು ಈ ಊರಿನಲ್ಲಿ ವಿಚಾರಿಸಿ ತಿಳಿದೆ ಎಂದು ಹೇಳಿ ತಾನು ತಂದು ಇದ್ದ ಕಡಲೆ ಕೊಪ್ಪರಿ ಮುಂತಾದುದನ್ನು ಕೊಟ್ಟು ಸೊಸೆಗೆ ಪಟ್ಟೆಯ ಕಿರಿಗೆ ಯನ್ನೂ ಅಳಿಯನಿಗೆ ಹೂವಿನ ಒಲ್ಲಿ ಯನ್ನೂ ಅಕ್ಕನಿಗೆ ಹೂವಿನ ಸೀರೆಯನ್ನೂ ಕೊಟ್ಟು ಭಾವನಿಗೆ ಹೂವಿನ ಹಚ್ಚಡವನ್ನು ಹೊದ್ದಿಸಿ ಅವರ ಕಿವಿಗೆ ಇಂಪಾಗು ವಂತೆ ತಾನು ತಿರುಗಿದ ದೇಶದ ನಡತೆಗಳನ್ನೆಲ್ಲಾ ಹೇಳಿದನು, ಆ ಬಳಿಕ ಅಕ್ಕನು ಉಣ್ಣೆಳಪ್ಪಾ ! ಕಾಲಿಗೆ ನೀರನ್ನು ತೆಗೆದುಕೋ ಅಂದಳು, ಅರಸು ಮಗನು ಕಾಲು ಗಳನ್ನು ತೊಳೆದುಕೊಂಡು--ಅಕ್ಷಾ ! ಮುಚ್ಚ೦ದೆಯಲ್ಲಿ ಉಂಡೆನು ; ಹಸಿವಿಲ್ಲ ಅಂದನು. ಆಗ ಅವಳು-ಉಪವಾಸವಾಗಿ ಮಲಗಬೇಡ ಎಂದು ಹಾಲು ಹಣ್ಣು ತುಪ್ಪವನ್ನು ತಂದು ಕೊಟ್ಟು ದರಿಂದ ಫಲಾಹಾರವನ್ನು ಮಾಡಿ ಎಲೆ ಅಡಿಕೆಯನ್ನು ಹಾಕಿಕೊಂಡು ಹಾಸಿಗೆಯ ಮೇಲೆ ಕೂತು ಕೊಂಡು ಇದ್ದನು, ಆಗ ತಳವಾರನು ಕರಿಯ ಕಂಬಳಿಯ ಮುಸುಕು ಹಾಕಿ ಕೈಯ್ಯಲ್ಲಿ ದೊಣ್ಣೆ ಹಿಡುಕೊಂಡು ಇವನನ್ನು ಕುರಿತು-ನೀನು ದಣಿದು ಬಂದಿದ್ದೀಯೇ ಸ್ವಸ್ಥವಾಗಿ ಮಲಗಿಕೋ. ಈ ಊರೆ. ಅರಸನನ್ನು ಒಬ್ಬ ಕಳ್ಳನು ಪೇಚಾಡಿಸುತ್ತಾನೆ ಅವನನ್ನು ಈ ದಿವಸ ನಾನು ಹಿಡಿದು ಕೊಡುತ್ತೇನೆಂದು ಹೇಳಿದ್ದೇನೆ. ಅದಕ್ಕಾಗಿ ನಾನು ಹೋಗುತ್ತೇನೆ ಅನ್ನ ಲು ಇದು ಎಂಥಾ ಮಾತು ? ನೀನು ಒಬ್ಬನೇ ಯಾಕೆ ಹೋಗಬೇಕು ? ನಾನೂ ಬರುತ್ತೇನೆಂದು ಅರಸುಮಗನು ಅವನ ಸಂಗಡಲೇ ಹೊರಟು ಕೋಟೆಯ ಆಲಂಗದ ಮೇಲೆ ಹತ್ತಿ ತಿರುಗಾಡುತ್ತಾ ಬರುವಲ್ಲಿ ತಳವಾರನ ಹಿತ್ತಲ ಬಳಿಯ ಅಲಂಗದ ಮೇಲೆ ಇದ್ದ ಒಂದು ಕೈಕೋಳವನ್ನು ನೋಡಿ-ಭಾವ ! ಭಾವ ! ಇದೇನು ? ನಾನು ಇಂಥಾದು ದನ್ನು ಎಲ್ಲಿಯೂ ನೋಡಲಿಲ್ಲ ಅನ್ನಲು ; ತಳವಾರನು-ಇದು ತಪ್ಪನ್ನು ಮಾಡಿದವ ರಿಗೆ ಹಾಕುವ ಕೈಕೊಳವೆದನು. ಇವನು-ಇಲ್ಲೊ ಕೈ ಹಾಕುವುದು ? ಎಂದು ತನ್ನ ಕೈಯನ್ನು ಅದರಲ್ಲಿ ಹಾಕಿ--ಎಲ್ಲಿ ಭಾವ ? ಕೀಲು ಜಡಿ ಹೇಗಾಗುತ್ತದೆ ?