ಪುಟ:ಕಥಾಸಂಗ್ರಹ ಸಂಪುಟ ೧.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಧಾಸಂಗ್ರಹ-೧ ನೆಯ ಭಾಗ 73 ಒಂದು ದೊಡ್ಡ ಉಂಡೆಯನ್ನೂ ಎರಡು ಚಿಕ್ಕ ಉಂಡೆಗಳನ್ನೂ ಮಾಡಿ-ಬಾರೇ ಅಮ್ಮಾ ! ಎಂದು ಕೂಗಿದನು. ಅಡುಗೂಳಜ್ಜೆಯು ನೋಡಿ- ಏನಿರಪ್ಪಾ ! ಈ ಅನ್ಯಾಯ ಉಂಟೇ ! ಒಂದು ದೊಡ್ಡ ಉಂಡೆಯನ್ನೂ ಒಂದು ಚಿಕ್ಕ ಉಂಡೆಯನ್ನೂ ತಾನು ತಿನ್ನುತ್ತಾನೆ ; ನನಗೆ ಒಂದು ಚಿಕ್ಕ ಉಂಡೆಯನ್ನು ಬಡಿಸುತ್ತಾನೆ. ಮೂರು ದಿನದಿಂದ ಉಪವಾಸವಾಗಿ ಇದ್ದವಳಿಗೆ ಇದರಿಂದ ಹೊಟ್ಟೆಯು ತುಂಬೀತೇ ? ಅಂದ ಇು. ಆಗ ಅವರು ಸರಿಯಾಗಿ ಎರಡು ಉಂಡೆಗಳನ್ನು ಮಾಡಿ ಆಕೆಗೆ ಒಂದನ್ನು ಕೊಟ್ಟು ನೀನು ಒಂದನ್ನು ಉಣ್ಣು ಅಂದರು. ಅರಸುಮಗನು-ಈ ಹಾಳು ತಾಯಿಯ ಕಾಟ ನನಗೆ ಎಂದಿಗೆ ತಪ್ಪಿತೋ ? ದೇವರೇ ! ಎಂದು ಹೇಳುತ್ತಾ ಕೋಪವನ್ನು ಮಾಡಿಕೊಂಡು--ಇವಳಿಗೂ ಬೇಡ ನನಗೂ ಬೇಡ ಎಂದು ಆ ಉಂಡೆ ಗಳನ್ನು ತಪ್ಪಲೆ ಚೆಂಬುಗಳೊಡನೆ ಹೊಳೆಗೆ ಎಸೆದುಬಿಟ್ಟು ಹಿಂದಿರುಗಿ ಗುಡಸಲಿಗೆ ಬಂದು ಸೇರಿಕೊಂಡನು. ಅಡುಗೂಳಜ್ಜಿಯು ಸ್ವಲ್ಪ ದೂರ ಮೆಲ್ಲಗೆ ನಡೆಯುತ್ತಾ ಆ ಮೇಲೆ ಬೇಗ ಬಂದು ಮನೆಯನ್ನು ಸೇರಿಕೊಂಡಳು. ತಿರಿಗಿ ಮುಂಜಾವದಲ್ಲಿ ಅಡಗೂಳಜ್ಜಿಯು ಸಂಚರಿಸಿಕೊಂಡು ಬಂದುಅಪ್ಪಾ ! ಈ ದಿವಸದ ಸುದ್ದಿಯು ಏನಂದರೆ--ನಿನ್ನೆ ನಾವು ಬ್ರಾಹ್ಮಣರನ್ನು ಮೋಸ ಗೊಳಿಸಿ ಬಲಪಿಂಡವನ್ನು ಹಾಕಿದುದನ್ನು ಮಂತ್ರಿಯು ಕೇಳಿ-ಕಳ್ಳನು ಬಹು ಗಟ್ಟಿಗನು, ನಮ್ಮನ್ನು ವಂಚಿಸಿ ಬ್ರಾಹ್ಮಣ ಕರ್ಮಗಳನ್ನೆಲ್ಲಾ ನೇರವೇರಿಸಿ ಬಿಟ್ಟನು. ಇನ್ನು ಅವನನ್ನು ಹಿಡಿಯುವ ಬಗೆ ಹೇಗೆ ? ಎಂದು ಚಿಂತೆಪಡುತ್ತಿರುವಲ್ಲಿ ಈ ಊರ ತಳವಾರರಿಗೆಲ್ಲ ಗೊತ್ತುಗಾರನಾದ ಭರಾಜಿನಾಯಕನೆಂಬುವನು ತಾನು ಈ ರಾತ್ರಿಯಲ್ಲಿ ಕಳ್ಳನನ್ನು ಹಿಡಿದು ಕೊಡುತ್ತೇನೆಂದು ಭಾಷೆಯನ್ನು ಮಾಡಿ ಕೊಟ್ಟು ಮಂತ್ರಿ ಯ ಕೈಯಿಂದ ಎಲೆ ಅಡಿಕೆ ಉಡುಗೊರೆಗಳನ್ನು ತೆಗೆದುಕೊಂಡು ಹೋದನಂತೆ ಇದಕ್ಕೇನು ತಂತ್ರವನ್ನು ಮಾಡುತ್ತೀಯೋ ನಾನು ಕಾಣೆನಪ್ಪಾ ! ಅ೦ದಳು. ಅರಸುಮಗನು-ನೀನು ಆ ತಳವಾರನ ಮನೆಗೆ ಹೋಗಿ ಏನಾದರೂ ಒಂದು ಉಪಾಯವನ್ನು ಮಾಡಿ ಹೆಂಡತಿಯ ತೌರುಮನೆ ಗಂಡನ ಮನೆಗಳ ಪೂದ್ಯೋತರಗಳನ್ನು ತಿಳಿದು ಧಟ್ಟನೆ ಬಾ ಎಂದು ಅಡು ಗೂಳಜ್ಜಿಯನ್ನು ಕಳುಹಿಸ ಲು ; ಅವಳು ಹೋಗಿ ತಿಳಿದು ಕೊಂಡು ಬಂದು-ಕೇಳಯ್ಯಾ ! ಅವಳ ಮನೆ ಸುದ್ದಿ ಮತ್ತೇನೂ ಹೆಚ್ಚಿಲ್ಲ, ಅವಳಿಗೆ ಒಬ್ಬನೇ ತಮ್ಮ ನಿದ್ದನಂತೆ. ಅವನು ಐದನೆಯ ವರುಷ ವಯಸ್ಸಿನಲ್ಲಿ ಎಲ್ಲೆಯೋ ತಪ್ಪಿಸಿಕೊಂಡು ಹೋಗಿ ಈಗ ಹನ್ನೆರಡು ವರುಷ ವಾಯಿತಂತೆ, ಇವಳಿಗಿಂತ ಏಳು ವರುಷ ಚಿಕ್ಕವನಂತೆ ಇವಳಿಗೆ ಹತ್ತು ವರುಷದ ಒಬ್ಬ ಮಗಳೂ ಐದು ವರುಷದ ಒಬ್ಬ ಮಗನೂ ಇದ್ದಾರೆ ; ಇಷ್ಟೇ ಎಂದು ಹೇಳಲು ; ರಾಜಕುಮಾರನು ಸಾಯಂಕಾಲಕ್ಕೆ ಉಂಡು ಸಾಧಾರಣವಾದ ಬಟ್ಟೆಗಳನ್ನು ಧರಿಸಿ ಕೊಂಡು ಒಂದು ಹೂವಿನ ಸೀರೆ ಒಂದು ಪಟ್ಟಿಯ ಕಿರಿಗೆ ಒಂದು ಹೂವಿನ ಹಚ್ಚಡ ಒಂದು ಹೂವಿನ ಒಲ್ಲಿ ಹುರಿಗಡಲೆ ಅರಸಿನ ಕೊಪ್ಪರಿಯ ಗಿಟಕು ಬೆಲ್ಲ ಇವುಗಳನ್ನೂ ತನ್ನ ಅಡಿಗೆ ಊಟಕ್ಕೆ ತಕ್ಕ ಪಾತ್ರೆ ಪದಾರ್ಧಗಳನ್ನು ತೆಗೆದುಕೊಂಡು