ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

KANARESE SELECTIONS-PART I ಹೊಳೆಯ ದಡಕ್ಕೆ ಬರಲು ಅಲ್ಲಿ ಕಾವಲು ಇದ್ದ ಬೆಸ್ತರು ಇವನ ಠೀವಿಗೆ ಬೆರಗಾಗಿಯಾವೂರಪ್ಪಾ ನೀವು ? ಹೊಸಬರಾಗಿ ಕಾಣಿಸುತ್ತೀರಿ ಎಂದು ಕೇಳಿದರು. ಇವನುಏನಲೇ ! ಕಣ್ಣು ಕಾಂಬೋದಿಲ್ಲವೋ ? ನಾನು ಆರಸುಮಗಳಾದ ವಿದ್ಯಾಮಂಜರಿಯ ಅಡಿಗೆಯ ಮನೆಗೆ ನಿತ್ಯವೂ ವಿಾನುಗಳನ್ನು ತಂದು ಕೊಡುವ ಗಿರಿಜೆಯ ಹನುಮಾ ಬೋಯಿ ಎಂಬುವುದು ತಿಳಿಯದೇ ? ಎಂದು ಹೇಳಿ ಬಲೆಯನು ಹೊಳೆಯಲಿ ಬೀಸಿ ವಿಾನನ್ನು ಹಿಡಿದು ಮಳಲಿನ ಮೇಲೆ ಸುರಿಯಲು ಕಾವಲಿದ್ದ ಬೆಸ್ತರ ಹುಡುಗರು ಕೆಲವು ವಿಾನುಗಳು ತೆಗೆದು ಕೊಂಡುದರಿಂದ ಕೋಪಿಸಿಕೊಂಡು ಪುಟ್ಟಿಗಳು ಬಲೆ ಊಟದ ಸಾಮಾನು ಹಾಸಿಗೆಯ ಸಾಮಾನುಗಳನ್ನು ಅಡ್ಡೆಯೊಡನೆ `ಹೊಳೆಯಲ್ಲಿ ದೂರವಾಗಿ ಒಗೆದು ನಿಮಗೆ ತಕ್ಕುದನ್ನು ಮಾಡಿಸುತ್ತೇನೆಂದು ಹೇಳಿ ಅಡಗೂಳಜ್ಜಿಯ ಗುಡಿಸಲಿಗೆ ಬಂದು ಮಲಗಿಕೊಂಡನು. ಪ್ರಾತಃಕಾಲದಲ್ಲಿ ಅಡಗೂಳಜ್ಜಿಯು ಸಂಚಾರಕ್ಕೆ ಮತ್ತೂ ಹೋಗಿ ಬಂದುಕಳ್ಳನು ನಿನ್ನೆ ಬೆಸ್ತರಿಗೆ ಮೋಸವನ್ನು ಮಾಡಿ ಬೂದಿಯನ್ನು ಕದಡುವ ಸಂಚಯನ ವೆಂಬ ಕರ್ಮವನ್ನು ನೆರವೇರಿಸಿದುದಾಗಿ ಮಂತ್ರಿಯು ಚಾರರ ಮುಖದಿಂದ ಕೇಳಿ ಈ ದಿನ ಯಾರಾದರೂ ಪಿಂಡವನ್ನು ಬೇಸಿ ಹಾಕಿದರೆ ಅವರನ್ನು ಹಿಡುಕೊಂಡು ಬನ್ನಿರಿ ಎಂದು ಕಟ್ಟುಮಾಡಿ ಹಾರವರನ್ನೇ ಹೊಳೆಯ ದಡದಲ್ಲೆಲ್ಲಾ ಕಾವಲು ಇರಿಸಿದ್ದಾ ನಂತೆ ಎಂದು ತಿಳಿಸಿದಳು. ಆಗ ಅರಸುಮಗನು ಒಂದು ಹಳೆಯ ಹರಕು ಪಂಚೆಯನ್ನು ಉಟ್ಟುಕೊಂಡು ಮತ್ತೊಂದು ಪಂಚೆಯನ್ನು ಹೆಗಲ ಮೇಲೆ ಹಾಕಿಕೊಂಡು ಒಂದು ಹಳೆಯ ಅರಿವೆಯಲ್ಲಿ ಒಂದು ಸೇರು ಅಕ್ಕಿಗೆ ಪಾವುಸೇರು ಹೆಸರು ಸ್ವಲ್ಪ ಅಚ್ಚೆಳ್ಳು ತುಸ ಬೆಲ್ಲ ತುಪ್ಪ ಇವುಗಳನ್ನು ಬೆರಸಿ ಗಂಟುಕಟ್ಟಿ ಅದನ್ನು ಒಂದು ತಪ್ಪಲೆಯಲ್ಲಿ ತುರುಕಿಕೊಂಡು ಚೆಂಬು ಸ್ವಲ್ಪ ಬೆರಣಿ ಸಹ ತೆಗೆದುಕೊಂಡು ಅಡುಗೂಳಜ್ಜಿಗೆ ಹೇಳತಕ್ಕ ಮಾತನ್ನು ಹೇಳಿಕೊಟ್ಟು ಅವಳು ಹಿಂದೆ ಓಡಿಬರುವಂತೆ ಸೂಚಿಸಿ ತಾನು ಮುಂದೆ ಮುಂದೆ ಹೊಳೆಯ ಒಳಿಗೆ ಓಡಿಹೋದನು ಆಗ ಹಿಂದೆ ಓಡಿಓಡಿ ಬರುತ್ತಾ ಇದ್ದ ಅಡುಗೂಳಜ್ಜಿಯು ಕಾವಲಿರುವ ಬ್ರಾಹ್ಮಣರನ್ನು ನೋಡಿ-ಅಪ್ಪಾ! ಅಪ್ಪಾ ! ನೋಡಿದಿರಾ ? ನಾನು ಈ ಮಗನನ್ನು ತಪಿಸಿ ಹೆತ್ತೆನು, ಮೂರು ದಿವಸದಿಂದ ಹೊಟ್ಟೆಗೆ ಅನ್ನವನ್ನು ಕೊಡದೆ ಕೊಲ್ಲುತ್ತಾನೆ. ಈ ಹೊತ್ತು ದೂರಕ್ಕೆ ಓಡಿಹೋಗಿ ನಡೆಯ ಲಾರದ ಮುದುಕಿಯಾದ ನಾನು ಹೋಗುವುದರೊಳಗಾಗಿ ತಾನು ಬೇಸಿಕೊಂಡು ತಿಂದು-ನೀನು ಬರಲಿಲ್ಲ, ನಾನು ಏನು ಮಾಡಲಿ ? ಎಂದು ಹೇಳಿಬಿಡುತ್ತಾನೆಂದು ದೈನ್ಯದಿಂದ ಹೇಳಿಕೊಂಡಳು. ಅವರು ಕರುಣ ಹುಟ್ಟಿ -ಎಲಾ ಅಪ್ಪಾ ! ಹೆತ್ತತಾ ಯಿಯನ್ನು ಹೀಗೆ ಗೋಳಾಡಿಸಬಾರದು, ಪಾಪ ! ಇಲ್ಲಿಯೇ ಅಡಿಗೆಯನ್ನು ಮಾಡಿ ಅವಳಿಗೂ ಇಕ್ಕಿ ನೀನೂ ಉಂಡು ಹೋಗು. ನಿನ್ನ ಸಂಗಡ ನಡೆಯುತ್ತಾಳೆಯೆ ? ಅಂದರು. ಆಗ ಅರಸುಮಗನು ಹೊಳೆಯಲ್ಲಿ ಮುಳುಗಿ ಒದ್ದೆಯನ್ನು ಉಟ್ಟು ಕೊಂಡು ತಪ್ಪಲೆ ಚೆಂಬುಗಳನ್ನು ಬೆಳಗಿಕೊಂಡು ಹಣೆಗೆ ವಿಭೂತಿ ಹಚ್ಚಿ ಬೆರಣಿಯ ತಾಳಿಯನ್ನು ಒಟ್ಟಿ ಚಕುಮುಕಿಯಲ್ಲಿ ಬೆಂಕಿಯನ್ನು ಹಚ್ಚಿ ಅನ್ನ ವನ್ನು ಬೇಯಿಸಿ