ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ ದಾದುದರಿಂದ-ಮನೆಗೆ ಹೋಗಿ ಆಯಿಸಿಕೋ ! ಎಂದು ಅರಸು ಚೆಲ್ಲಿದಷ್ಟು ಆಗ ಲಕ ಮುತ್ತುಗಳನ್ನೂ ಉಂಗುರಗಳನ್ನೂ ಬೂದಿ ಸಹ ಬಾಚಿ ಪಾಲಕಿಯಲ್ಲಿ ತುಂಬಿ ಕೊಟ್ಟು ಕಳುಹಿಸಿಬಿಟ್ಟನು ಇವನು ತಿರಿಗಿ ಮನೆಗೆ ಬಂದು ಪಾಲಕಿಯಿ೦ದ ಇಳಿದು ಎಂದಿನಂತೆ ಚಿಕ್ಕ ಮನೆಗೆ ಹೋಗಿ-ಈ ಅರಸಿಯನ್ನು ನನ್ನ ತಾಯಿಯಂತೆ ಕಂಡಿದ್ದೇ ನೆಂದು ಒಂದು ಚೀಟಿಯನ್ನು ಬರೆದು ಆಕೆಯ ತೋಳಿಗೆ ಕಟ್ಟಿ ಪಾಲಕಿಯಲ್ಲಿದ್ದ ಬೂದಿಯನ್ನು ಪೆಟ್ಟಿಗೆಗೆ ತುಂಬಿ ತೆಗೆದುಕೊಂಡು ಮೊದಲು ಕೊರೆದಿದ್ದ ಕನ್ನದ ಲ್ಲಿಯೇ ಈಚಿಗೆ ಹೊರಟು ಬಂದು ಅಡುಗೂಳಜ್ಜಿಯ ಮನೆಯನ್ನು ಸೇರಿ ರವಿಕೆ ಒಡವೆಗಳನ್ನು ಕಳೆದು ಬದಿಯೊಡನೆ ಒಂದು ಕಡೆಯಲ್ಲಿ ಬಚ್ಚಿಟ್ಟು ಸ್ವಸ್ಥವಾಗಿ ಮಲಗಿಕೊಂಡನು ಮುಂಜಾವದಲ್ಲಿ ಅಡುಗೂಳಜ್ಜಿ ಯು ತಿರುಗಿ ಬಂದು ನಗುತ್ತಾ ತಮ್ಮಾ ! ಈ ದಿನದ ವಾರ್ತೆಯನ್ನು ಕೇಳಪ್ಪಾ !* ನಿನ್ನೆ ಯ ರಾತ್ರಿ ಕಳ್ಳನು ಅರಸಿಗೂ ಕೂಡ ಮಂಕುಬೂದಿಯನ್ನು ತಳಿದು ಬೂದಿಯನ್ನು ತೆಗೆದು ಕೊಂಡು ಹೋದನಂತೆ ಅರಸು ರಾತ್ರಿಯೆಲ್ಲಾ ಪಿತೃವನದಲ್ಲಿ ದೈವವೇ ಎಂದು ನಿದ್ದೆಗೆಟ್ಟಿದ್ದು ಪ್ರಾತಃಕಾಲದಲ್ಲಿ ಬಂದು ಮಲಗುವ ಮನೆಗೆ ಹೋಗಿ ಹೆಂಡತಿಯು ಉಟ್ಟು ತೊಟ್ಟಿದ್ದುದನ್ನೆಲ್ಲಾ ಕಳ ಕೊಂಡು ಅಳುತ್ತಾ ಇರುವುದನ್ನೂ ತೋಳಿನ ಚೀಟನ್ನೂ ಕಳ್ಳನು ಕೊರೆದ ಕನ್ನ ವನ್ನೂ ನೋಡಿ-ಛೀ ! ಛೇ ! ನನ್ನ ಬಾಳು ಎಂಧಾದುದು ? ಹೀಗೆ ಲೋಕದಲ್ಲೆಲ್ಲಾ ಅಪ ಹಾಸ್ಯವಾಗಿ ಬದುಕುವುದಕ್ಕಿಂತ ಸಾಯುವುದು ಲೇಸು ! ಎಂದು ಚಿಂತಾಕ್ರಾಂತ ನಾಗಿ ಮಂಚದ ಮೇಲೆ ಮೊಗಮಡಿಯಾಗಿ ಬಿದ್ದು ಕೊಂಡನಂತೆ. ಇದನ್ನು ಪ್ರಧಾನಿ ಯು ಕೇಳಿ ಅರಸಿನ ಬಳಿಗೆ ಬಂದು--ಸಟಕವಿದ್ದು ನೀವು ಕೈಯನ್ನು ಯಾಕೆ ಸುಟ್ಟು ಕೊಳ್ಳುತ್ತೀರಿ ? ಪಾದಸೇವಕನಾದ ನಾನು ಯಾವ ತೆರದಲ್ಲಿ ಯಾದರೂ ಆ ಕಳ್ಳನನ್ನು ಹಿಡಿದು ಕೊಡುತ್ತೇನೆಂದು ಅರಸನನ್ನು ಧೈರಗೊಳಿಸಿ ಹೊರಗೆ ಬಂದು ಆ ಕಳ್ಳನು ನಿನ್ನೆ ತೆಗೆದು ಕೊಂಡು ಹೋದ ಬೂದಿಯನ್ನು ನೀರಿನಲ್ಲಿ ಕದಡುವ ಸಂಚಯನವೆಂಬ ಕಮ್ಮ ವನ್ನು ಮಾಡದ ಹಾಗೆ ಬೆಸ್ತರನ್ನು ಕರಿಸಿ--ನೀವು ಎಲ್ಲಾ ಜಲಸ್ಥಾನಗಳಲ್ಲಿ ಯ ಕಾವಲು ಇದ್ದು ಕೊಂಡು ಅಲ್ಲಿ ಯಾರಾದರೂ ಬೂದಿಯನ್ನು ಕದಡುವುದಕ್ಕೆ ಬಂದರೆ ಅವರನ್ನು ಹಿಡುಕೊಂಡು ಒನ್ನಿರಿ ಎಂದು ನೇಮಿಸಿ ಕಳುಹಿಸಿದ್ದಾನಂತೆ ಎಂದು ಹೇಳಲು ಈ ರಾಜಕುಮಾರನು ಊಟವನ್ನು ಮಾಡಿ ಚಂದ್ರಗಾವಿಯ ರುಮಾಲನ್ನು ಸುತ್ತಿ ಕುತ್ತಿಯ ಚಲ್ಲಣವನ್ನು ಇಟ್ಟು ಕೊಂಡು ಬಿಳಿಯ ಶಲ್ಯದ ಅಂಗಿಯನ್ನು ತೊಟ್ಟು ಕೊಂಡು ಒಂದು ಅಡ್ಡೆಯನ್ನು ತೆಗೆದು ಕೊಂಡು ಅದರ ಒಂದು ಕಡೆಯಲ್ಲಿ ನಾಲ್ಕೆದು ಪಟ್ಟಿಗಳನ್ನು ಇಟ್ಟು ಮತ್ತೊಂದು ಕಡೆಯಲ್ಲಿ ಒಂದು ಸಣ್ಣ ಕರಿಯ ಕಂಬಳಿಯನ್ನೂ ಹಳೆಯ ಜಮಖಾನವನ್ನೂ ತಂಬಿಗೆ ಗಂಗಳ ರೊಟ್ಟಿ ಬುತ್ತಿ ಸಹಿತವಾದ ಒಂದು ಹಸಿಬೆಯ ಚೀಲವನ್ನೂ ಇರಿಸಿ ಮುತ್ತು ಉಂಗುರಗಳನ್ನು ಬೇರೆ ತೆಗೆದು ಆ ಪಟ್ಟಿಗ ಇಲ್ಲಿ ಕೆಳಗಿರುವ ಬುಟ್ಟಿಗೆ ನಿನ್ನೆ ತಂದ ಬೂದಿಯನ್ನು ತುಂಬಿ ಹೆಗಲ ಮೇಲೆ ಹೊತ್ತು ಕೂಂಡು ಬೀಸುಬಲೆ" ಕೊಲು ಸಹ ತೆಗೆದು ಕೊಂಡು ಹೊರಟು ಜಗ್ಗು ಹಾಕುತ್ತಾ